ನದಿಗೆ ಹಾರಿದ ಬಸ್ ನಿರ್ವಾಹಕ ಮೃತದೇಹ ಪತ್ತೆ

ನದಿಗೆ ಹಾರಿದ ಬಸ್ ನಿರ್ವಾಹಕ ಮೃತದೇಹ ಪತ್ತೆ
ಮಂಗಳೂರು: ಮಹಿಳಾ ಪ್ರಯಾಣಿಕಳೊಂದಿಗೆ ನಡೆದ ಚಿಲ್ಲರೆ ಹಣದ ವಿಚಾರವಾಗಿ ವಿವಾದದ ಬಳಿಕ ನದಿಗೆ ಹಾರಿದ್ದ ಬಸ್ ನಿರ್ವಾಹಕನ ಮೃತದೇಹ ಬುಧವಾರ ಸುಬ್ರಹ್ಮಣ್ಯದಲ್ಲಿ ಪತ್ತೆಯಾಗಿದೆ.

image001ksrtc-bus-conductor-dead-body-20160928-001 image002ksrtc-bus-conductor-dead-body-20160928-002 image003ksrtc-bus-conductor-dead-body-20160928-003 image004ksrtc-bus-conductor-dead-body-20160928-004 image001ksrtc-bus-conductor-dead-body-20160928-001 image002ksrtc-bus-conductor-dead-body-20160928-002

ಕರ್ನಾಟಕ ರಸ್ತೆ ಸಾರಿಗೆ ನಿಗಮ ಇದರ ಬಸ್ ನಿರ್ವಾಹಕ ಮಂಗಳೂರಿನ ದೇವದಾಸ್ ಭಾನುವಾರ ಸುಬ್ರಹ್ಮಣ್ಯ ಎಂಬವರ ಜೊತೆ ಮಹಿಳಾ ಪ್ರಯಾಣಿಕರೋರ್ವರು ಚಿಲ್ಲರೆ ವಿಚಾರವಾಗಿ ಗೊಂದಲವಾಗಿತ್ತು. ಪ್ರಕರಣ ಕಡಬ ಪೋಲಿಸ್ ಠಾಣೆಯಲ್ಲಿ ಮಾತುಕತೆಯ ಮೂಲಕ ಇತ್ಯರ್ಥವಾದರೂ ಮತ್ತೆ ಯುವತಿ ವೃತ ಆರೋಪಗಳನ್ನು ಮಾಡುತ್ತಿದ್ದಳು. ಇದರಿಂದ ನೊಂದ ದೇವದಾಸ್ ಬಸ್ಸು ಸುಬ್ರಹ್ಮಣ್ಯದ ಕುಮಾರಾಧಾರ ನದಿಯ ಸೇತುವೆ ಮೇಳೆ ಸಂಚರಿಸುತ್ತಿದ್ದ ವೇಳೆ ಸೀಟಿ ಊದಿ ಬಸ್ಸನ್ನು ನಿಧಾನಗೊಳಿಸಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ್ದರು.
ಅವರಿಗಾಗಿ ಮೂರು ದಿನಗಳಿಂದ ಶೋಧ ನಡೆಸಿದ್ದು ಬುಧವಾರ ಬೆಳ್ಳಿಗ್ಗೆ ಅವರ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

Leave a Reply

Please enter your comment!
Please enter your name here