ನಾಪತ್ತೆಯಾದ ಎಂಬಿಎ ವಿದ್ಯಾರ್ಥಿಯ ಶವ ಪತ್ತೆ

ನಾಪತ್ತೆಯಾದ ಎಂಬಿಎ ವಿದ್ಯಾರ್ಥಿಯ ಶವ ಪತ್ತೆ

ಮಂಗಳೂರು: ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದ ಎಮ್ ಬಿ ಎ ವಿದ್ಯಾರ್ಥಿಯೋರ್ವನ ಶವ ಶುಕ್ರವಾರ ಕೋಟೆಕಾರ್ ಮಾಡೂರು ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

image001sonu-dead-body-found-20160909-001 image002sonu-dead-body-found-20160909-002 image003sonu-dead-body-found-20160909-003 image004sonu-dead-body-found-20160909-004 dead-body-found1-20160909 sonu-dead-body

ಕೋಟೆಕಾರ್ ಬೀರಿ ಸಂತ ಅಲೋಶೀಯಸ್ ಕಾಲೇಜಿನ ಎಮ್ ಬಿ ವಿದ್ಯಾರ್ಥಿ ಕೇರಳ ಮೂಲದ ಸೋನು ಸುಭಾಷ್ ಚಂದ್ರನ್ (22) ಸಪ್ಟೆಂಬರ್ 1 ರಿಂದ ಕಾಲೇಜು ಕ್ಯಾಂಪಸ್ ನಿಂದ ನಾಪತ್ತೆಯಾಗಿದ್ದು, ಮಾಹಿತಿಗಳ ಪ್ರಕಾರ ಅಂದು ರಾತ್ರಿ ತನ್ನ ಯಮಹಾ ಬೈಕಿನಲ್ಲಿ ಊಟಕ್ಕಾಗಿ ತೆರಳಿದ್ದು ವಾಪಾಸು ಕಾಲೇಜಿಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಕಾಲೇಜು ಸಿಬಂದಿ ಆತನ ಹುಡುಕಾಟ ನಡೆಸಿದ್ದರು. ಬಳಿಕ ಕೇರಳದಲ್ಲಿರುವ ಆತನ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ಆಗಮಿಸಿ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಬಳಿಕ ಶೋಧ ಕಾರ್ಯ ನಡೆಸಿದ ಪೋಲಿಸರಿಗೆ ಯಾವುದೇ ಮಾಹಿತಿ ಲಭಿಸಿರಲಿಲ್ಲ ಆದರೆ ಶುಕ್ರವಾರ ಸೋನು ಶವ ಕೊಳೆತ ಸ್ಥಿತಿಯಲ್ಲಿ ಮಾಡೂರು ಬಳಿ ಬೈಕಿನೊಂದಿಗೆ ಪತ್ತೆಯಾಗಿದೆ. ಶವವನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದ ಬಳಿಕವಷ್ಟೇ ಸಾವಿನ ನಿಖರ ಮಾಹಿತಿ ಲಭ್ಯವಾಗಬಹುದು.

ಉಳ್ಳಾಲ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Reply

Please enter your comment!
Please enter your name here