ನಾಲ್ಕು ಆರೋಪಿಗಳ ಪತ್ತೆಗೆ ನಾಗರಿಕರ ಸಹಕಾರ ಕೋರಿದ ದಕ್ಷಿಣ ಠಾಣೆ ಪೋಲಿಸರು

ನಾಲ್ಕು ಆರೋಪಿಗಳ ಪತ್ತೆಗೆ ನಾಗರಿಕರ ಸಹಕಾರ ಕೋರಿದ ದಕ್ಷಿಣ ಠಾಣೆ ಪೋಲಿಸರು

ಮಂಗಳೂರು: ವಿವಿಧ ಪ್ರಕರಣಗಳಲ್ಲಿ ಪಾಂಡೇಶ್ವರ ಪೋಲಿಸರಿಗೆ ಬೇಕಾದ ನಾಲ್ಕು ಆರೋಪಿಗಳ ಪತ್ತೆ ಪೋಲಿಸರು ಸಾರ್ವಜನಿಕರಿಂದ ಮಾಹಿತಿ ಕೋರಿದ್ದಾರೆ.

ವಿಜಯ್ ಅಲಿಯಾಸ್ ಮಂಕಿಸ್ಟ್ಯಾಂಡ್ ವಿಜಯ (30), ಸಂಪತ್ ಬಂಗೇರ (20) ಗೋರಿಗುಡ್ಡ ನಿವಾಸಿ ಮೆಲ್ರಿಕ್ (19) ಹಾಗೂ ಕೋಡಿಕಲ್ ನಿವಾಸಿ ಚೋಟು ಪೋಲಿಸರಿಗೆ ಬೇಕಾಗಿರುವ ಆರೋಪಿಗಳು. ಇವರುಗಳ ಮೇಲೆ ಪ್ರಸ್ತುತ ಮಂಗಳೂರು ದಕ್ಷಿಣ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.

Wanted-by-police-14072016-01

ಮೇಲೆ ತಿಳಿಸಿದ ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಪೋಲಿಸರಿಗೆ ಬೇಕಾಗಿದ್ದು, ಸಾರ್ವಜನಿಕರ ಸಹಕಾರವನ್ನು ಪೋಲಿಸರು ಕೋರಿದ್ದಾರೆ. ಸಾರ್ವಜನಿಕರಿಗೆ ಇವರ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಪೋಲಿಸರಿಗೆ ತಿಳಿಸುವಂತೆ ಕೋರಲಾಗಿದೆ. ಮಾಹಿತಿದಾರರಿಗೆ ಸೂಕ್ತ ನಗದು ಬಹುಮಾನವನ್ನು ನೀಡಲಾಗುವುದ ಅಲ್ಲದೆ ಮಾಹತಿದಾರರ ವಿವಿರ ಗುಪ್ತವಾಗಿಡಲಾಗುವುದು.

ಮಾಹಿತಿಯನ್ನು ಈ ಕೆಳಗಿನ ಪೋಲಿಸ್ ಠಾಣೆಗಳಿಗೆ ನೀಡಬಹುದು

ಪೋಲಿಸ್ ನಿರೀಕ್ಷಕರು ಮಂಗಳೂರು ದಕ್ಷಿಣ ಪೋಲಿಸ್ ಠಾಣೆ 9480805338

ಪೋಲಿಸ್ ಉಪ ನಿರೀಕ್ಷಕರು ಮಂಗಳೂರು ದಕ್ಷಿಣ ಪೋಲಿಸ್ ಠಾಣೆ – 9480805346

Leave a Reply

Please enter your comment!
Please enter your name here