ನಿಟ್ಟೂರು ಪ್ರೌಢಶಾಲೆಯಲ್ಲಿ ಪ್ರತಿಭಾನ್ವಿತರೊಂದಿಗೆ ಮುಖಾಮುಖಿ

ಮಂಗಳೂರು: ಐ.ಎ.ಎಸ್ ಪರೀಕ್ಷೆಯಲ್ಲಿ 8ನೇ ರ್ಯಾಂಕ್ ವಿಜೇತ ನಿತಿಶ್ ಹೆಬ್ಬಾರ್ ಮತ್ತು ಶಾಲೆಯ ಪ್ರತಿಭಾನ್ವಿತ ಹಳೆವಿದ್ಯಾರ್ಥಿ ಪಿ. ಪರಶುರಾಮ ಶೆಟ್ಟಿ ನಿಟ್ಟೂರು ಪ್ರೌಢಶಾಲೆಗೆ ಆಗಸ್ಟ್ 8, 2015ರಂದು ಭೇಟಿ ನೀಡಿದರು.

1-nittur.15

ನಿತೀಶ್ ಹೆಬ್ಬಾರ್ ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ ಶಿಸ್ತುಬದ್ಧ ಜೀವನ ಮತ್ತು ಕಠಿಣ ಪರಿಶ್ರಮದಿಂದ ನಾವು ಉನ್ನತ ಗುರಿ ಮುಟ್ಟಲು ಸಾಧ್ಯ ಎಂದರು.  ಪರಶುರಾಮ ಶೆಟ್ಟಿ ತಮ್ಮ ಶಾಲಾ ದಿನಗಳ ಮಧುರ ನೆನಪನ್ನು ವಿದ್ಯಾರ್ಥಿಗಳೊಂದಿಗೆ  ಹಂಚಿಕೊಂಡರು.

ಈ ಇಬ್ಬರು ಪ್ರತಿಭಾನ್ವಿತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಜಯ ಕುಮಾರ್ ಮುದ್ರಾಡಿ, ಕೃಷ್ಣಮೂರ್ತಿ ಭಟ್, ದಿನೇಶ್ ಪೂಜಾರಿ, ಭಾಸ್ಕರ ಡಿ. ಸುವರ್ಣ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಾಸುದೇವ ಭಟ್ ಪೆರಂಪಳ್ಳಿ ಅವರಿಂದ ಕೊಡಲ್ಪಟ್ಟ ಬಗೆ ಬಗೆಯ ಜೌಷಧೀಯ ಸಸ್ಯಗಳನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಕರವಸ್ತ್ರ ಮತ್ತು ಬಾಚಣಿಗೆ ವಿತರಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ದೇವದಾಸ ಶೆಟ್ಟಿ ವಂದಿಸಿದರು, ಶಿಕ್ಷಕ ಎಚ್.ಎನ್. ಶೃಂಗೇಶ್ವರ ಕಾರ್ಯಕ್ರಮ ನಿರೂಪಿಸಿದರು.

Leave a Reply