ನೂತನ ಪoಪು ವೆಲ್ ಬಸ್ ನಿಲ್ದಾಣ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ

ನೂತನ ಪoಪು ವೆಲ್ ಬಸ್ ನಿಲ್ದಾಣ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ

ಮಂಗಳೂರು: ಶಾಸಕರಾದ ಜೆ.ಆರ್.ಲೋಬೊ ಅವರು ಶನಿವಾರ ಸಂಜೆ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಅವರೊಂದಿಗೆ ಪoಪು ವೆಲ್ ಬಳಿ ನೂತನ ಬಸ್ ಸ್ಟಾoಡ್ ನಿರ್ಮಾಣ ಮಾಡುವ ಸ್ಥಳ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಾ ಶಾಸಕರ ಜೊತೆ ಇದ್ದರು.

bus

ಬಸ್ ನಿಲ್ದಾಣ ನಿರ್ಮಾಣ ಮಾಡುವುದರಿಂದ ತೊಂದರೆ ಅನುಭವಿಸುವ ಕುಟುಂಬಸ್ತರನ್ನು ಕರೆದು ಹತ್ತು ದಿನಗಳ ಒಳಗೆ ಸಭೆನಡೆಸಿ ಪರಿಹರಿಸುವಂತೆ ಶಾಸಕರು ಸೂಚನೆ ನೀಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Leave a Reply