ನೇಣು ಬಿಗಿದು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ನೇಣು ಬಿಗಿದು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು: ತೊಕ್ಕೊಟ್ಟು ಸಮೀಪದ ಪೆರ್ಮನ್ನೂರಿನ ಸೈಂಟ್‌ ಸೆಬೆಸ್ಟಿಯನ್‌ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೊಕ್ಕೊಟ್ಟು ಲಚ್ಚಿಲ್‌ ಎಂಬಲ್ಲಿ ಸೋಮ ವಾರ ಸಂಜೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಲಚ್ಚಿಲ್‌ನ ಶಿಫಾನ್‌(17)ಎಂದು ಗುರುತಿಸಲಾಗಿದೆ.

Shifwan-20160822-03

ಶಿಫಾನ್ ಕಾಲೇಜಿಗೆ ಗೈರು ಹಾಜರಾಗುತ್ತಿದ್ದು ಈ ಕುರಿತು ಕಾಲೇಜಿನ ಉಪನ್ಯಾಸಕರು ಮನೆಯವರನ್ನು ಕಾಲೇಜಿಗೆ ಬರುವಂತೆ ಹೇಳಿದ್ದರು. ಅದರಂತೆ ಶಿಫಾನ್ ತಂದೆ ಸೋಮವಾರ ಮಧ್ಯಾಹ್ನ ಕಾಲೇಜಿಗೆ ಹೋಗಿದ್ದು, ಇದರಿಂದ ಹೆದರಿಂದ ಶಿಫಾನ್ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Please enter your comment!
Please enter your name here