ಪಟಾಕಿ ಸ್ಟಾಲ್ ತೆರೆಯಲು – ಅರ್ಜಿ ಆಹ್ವಾನ

ಪಟಾಕಿ ಸ್ಟಾಲ್ ತೆರೆಯಲು – ಅರ್ಜಿ ಆಹ್ವಾನ

ಮ0ಗಳೂರು :-ದೀಪಾವಳಿ ಹಾಗೂ ಇನ್ನಿತರ ಹಬ್ಬಗಳ ಸಂದರ್ಭದಲ್ಲಿ ಎಲ್.ಇ-5 ರಲ್ಲಿ ಪರವಾನಿಗೆಯನ್ನು ಪಡೆಯಲು ಸಾಕಷ್ಟು ಮುಂಚಿತವಾಗಿ ಎ.ಇ-5 ರಲ್ಲಿ ಅರ್ಜಿ ಸಲ್ಲಿಸಿ ಪರವಾನಿಗೆಯನ್ನು ಪಡೆಯಲು ನಿರ್ದೇಶಿಸಿದೆ. ಇದರಂತೆ 60 ದಿನಗಳ ಮುಂಚಿತವಾಗಿ ಎ.ಇ-5 ರಲ್ಲಿ ಸಲ್ಲಿಸಲು ಮತ್ತು ಸ್ವೀಕರಿಸಿದ ಅರ್ಜಿಗಳನ್ನು 30 ದಿನಗಳೊಳಗಾಗಿ ನಿಗದಿತ ನಮೂನೆ ಎಲ್.ಇ-5 ರಲ್ಲಿ ಪರವಾನಿಗೆಯನ್ನು ಪಡೆಯಲು ತಿಳಿಸಲಾಗಿದೆ.

ಸ್ಪೋಟಕ ಕಾಯಿದೆ ಮತ್ತು ನಿಯಮ 2008 ಶೆಡ್ಯೂಲ್4 ರಡಿಯಲ್ಲಿ ಹಾಗೂ ಈ ಮೇಲಿನ ಆದೇಶದನ್ವಯ ಮೈದಾನದಲ್ಲಿ /ತೆರೆದ ಪ್ರದೇಶದಲ್ಲಿ ಹಬ್ಬಗಳ ನಿಮಿತ್ತ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ ಅರ್ಜಿಗಳನ್ನು ಈಗಾಗಲೇ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸ್ವೀಕರಿಸಲಾಗುತ್ತಿದ್ದು, ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನ. ಸೆಪ್ಟಂಬರ್ 01 ರ ನಂತರ ಯಾವುದೇ ಕಾರಣಕ್ಕೂ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ (ನಾಲ್ಕು) ಬ್ಲೂ ಪ್ರಿಂಟ್ ಮತ್ತು (ಎರಡು) ಫೋಟೋ, (ನಾಲ್ಕು) ಪ್ರಸ್ತಾವಿತ ಜಮೀನಿನ ಪಹನಿ, (ನಾಲ್ಕು) ಸರ್ಕಾರಿ ಜಮೀನು ಅಲ್ಲದೇ ಇದ್ದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಪತ್ರದೊಂದಿಗೆ ಹಾಗೂ ಸರಕಾರಿ ಜಮೀನಾದಲ್ಲಿ ಜಮೀನಿನ ಮಾಲಿಕತ್ವ ಹೊಂದಿರುವ ಇಲಾಖೆಯಿಂದ ಎನ್.ಓ.ಸಿ. ಪಡೆದು ಸಲ್ಲಿಸಲು ಸೂಚಿಸಿದೆ.

ಸಂಬಂಧಪಟ್ಟ ಇಲಾಖೆಯಿಂದ (ಪೊಲೀಸ್, ಅಗ್ನಿಶಾಮಕ, ಸ್ಥಳೀಯ ಸಂಸ್ಥೆಗಳು, ತಹಶೀಲ್ದಾರರು) ಅರ್ಜಿದಾರರು ಎನ್.ಓ.ಸಿ. ಪಡೆದು ಸಲ್ಲಿಸಲು ತಿಳಿಸಿದೆ. ಸೆಪ್ಟಂಬರ್ 15 ರೊಳಗಾಗಿ ವರದಿ ಸಲ್ಲಿಸಲು ತಿಳಿಸಿದೆ ಅಂತಹ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಇಲ್ಲವಾದಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಮಂಜೂರಾದ ಪರವಾನಿಗೆಯನ್ನು ಅರ್ಜಿದಾರರು ಅಕ್ಟೋಬರ್ 01 ರೊಳಗಾಗಿ ನಿಗದಿತ ಶುಲ್ಕ (ರೂ.500/- ಪಾವತಿಸಿ ನಮೂನೆ ಎಲ್.ಇ-5 ರಲ್ಲಿ ಪರವಾನಿಗೆಯನ್ನು ಪಡೆಯತಕ್ಕದ್ದು. ಎಂದು ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾದಂಡಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Leave a Reply