ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆಗೆ ಮಹಿಳಾ ದೌರ್ಜನ್ಯ

Spread the love

ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆಗೆ ಮಹಿಳಾ ದೌರ್ಜನ್ಯ

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆಯೋರ್ವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎನ್ನುವ ಕಾರಣಕ್ಕೆ ಸೋಮವಾರದಂದು ಸಾಲಿಗ್ರಾಮದ ಆಟೋ ಚಾಲಕರೋರ್ವರ ಮೇಲೆ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಮಾಜಿ ಉಪಾಧ್ಯಕ್ಷೆ ಸುಲತಾ ಹೆಗ್ಡೆ ಅವರು ರಿಕ್ಷಾ ಚಾಲಕ ನಾಗರಾಜ ಗಾಣಿಗ ಎನ್ನುವವವರ ಮೇಲೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸೋಮವಾರದಂದು ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ 66 ಬಸ್ ನಿಲ್ದಾಣದ ಬಳಿ ಪೂರ್ವ ಭಾಗದ ಏಕ ಮುಖ ಸಂಚಾರದ ರಸ್ತೆ ವಾಹನ ಸಂಚಾರ ನಿಷೇಧಿಸಿ ದುರಸ್ಥಿ ಕಾರ್ಯ ಮಾಡುತ್ತಿದ್ದರು. ಇದನ್ನು ಗಮನಿಸಲು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಸುಲತಾ ಹೆಗ್ಡೆ ಅವರು ಅಧ್ಯಕ್ಷೆ ವಸುಮತಿ ನಾೈರಿ ಅವರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಆ ವೇಳೆ ಅಲ್ಲಿಯೇ ಹೆದ್ದಾರಿಯವರ ದುರಸ್ಥಿ ಕಾರ್ಯ ವೀಕ್ಷಿಸುತ್ತಿದ್ದ ರಿಕ್ಷಾ ಚಾಲಕ ನಾಗರಾಜ ಗಾಣಿಗ, ಉಪಾಧ್ಯಕ್ಷೆಯನ್ನು ಗಮನಿಸಿ ಕಣ್ಣು ಮತ್ತು ಕೈ ಸನ್ನೆ ಮಾಡಿದ್ದಾನೆ. ಇದರಿಂದ ಅವಮಾನಿತರಾದ ಉಪಾಧ್ಯಕ್ಷೆ ಅವರು ಆತನ ಬಳಿ, ಸಾರ್ವಜನಿಕವಾಗಿ ಈ ರೀತಿ ಯಾಕೆ ವರ್ತಿಸುತ್ತಿದ್ದಿಯ ಎಂದು ವಿಚಾರಿಸಿದ್ದಾರೆ. ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ನಾಗರಾಜ ಗಾಣಿಗ ಅವರು ಸುಲತಾ ಹೆಗ್ಡೆ ಅವರಿಗೆ ಅವಾಚ್ಯವಾಗಿ ಬೈದು, ಅಸಹಾಯಕಳಾಗಿ ತಮ್ಮ ವಾಹನ ಏರಿ ಹೋಗುವಾಗ ಫೋಟೋ ಕ್ಲೀಕ್ಕಿಸಿರುವುದಾಗಿ ಸುಲತಾ ಹೆಗ್ಡೆ ದೂರು ನೀಡಿದ್ದಾರೆ.

ಈ ಕುರಿತು ಕೋಟ ಪೊಲೀಸ್ ಉಪನಿರೀಕ್ಷಕ ಕಬ್ಬಾಳ್‍ರಾಜ್ ಬಳಿಕ ದೂರು ನೀಡಿದಾಗ, ಘಟನೆಯನ್ನು ಪರಿಶೀಲಿಸಿ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸುವಂತೆ ಸುಲತಾ ಹೆಗ್ಡೆ ಅವರಿಗೆ ತಿಳಿಸಿದ್ದಾರೆ. ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸುವಾಗ, ರಿಕ್ಷಾ ಚಾಲಕನ ಪರ ರಾಜಕೀಯ ಮುಖಂಡರ ಸಾಕಷ್ಟು ಕರೆಗಳು ಬಂದ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು ದೂರು ಪಡೆಯಲು ವಿಳಂಬ ಮಾಡಿದ್ದರು ಎನ್ನಲಾಗಿದೆ. ಬಳಿಕ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಸಮಿತಿಯ ಉಗ್ರಪ್ಪರ ಅವರಿಗೆ ತಿಳಿಸುವುದಾಗಿ ತಿಳಿಸಿದ ಮೇಲೆ, ಪೊಲೀಸ್‍ರು ಮಹಿಳಾ ದೌರ್ಜನ್ಯ ಕಾಯಿದೆ ಅಡಿ ದೂರು ಪಡೆದಿದ್ದಾರೆ ಎನ್ನಲಾಗಿದೆ. ರಿಕ್ಷಾ ಚಾಲಕ ನಾಗರಾಜ ಗಾಣಿಗ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯೆ ರತ್ನಾ ಗಾಣಿಗ ಅವರ ಪತಿಯಾಗಿದ್ದು, ರಾಜಕೀಯ ವಿಚಾರವಾಗಿ ಇರುವ ವೈಮನಸ್ಯದ ಹಿನ್ನಲೆಯಲ್ಲಿ ಹಲವು ತಿಂಗಳುಗಳಿಂದ ತನ್ನೊಂದಿಗೆ ಇದೇ ರೀತಿ ವರ್ತಿಸುತ್ತಿದ್ದ ಎಂದು ಸುಲತಾ ಹೆಗ್ಡೆ ದೂರಿನಲ್ಲಿ ದಾಖಲಿಸಿದ್ದಾರೆ.


Spread the love