ಪಡೀಲ್ ಹೋಂ ಸ್ಟೇ ಆರೋಪಿ ಸುಭಾಷ್ ಪಡೀಲ್ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ

ಮಂಗಳೂರು: ಪಡೀಲ್ ಹೋಂ ಸ್ಟೇ ಧಾಳಿ ಪ್ರಕರಣದ ಆರೋಪಿ ಸುಭಾಷ್ ಪಡೀಲ್ ಎಂಬಾತನ ಮೇಲೆ ಮಂಗಳೂರು ಸೆಷನ್ಸ್ ಕೋರ್ಟ್ ಆವರಣದಲ್ಲಿ ಇನ್ನೋರ್ವ ಆರೋಪಿ ಹಲ್ಲೆಗೈದ ಘಟನೆ ಶನಿವಾರ ಜರುಗಿದೆ.

subhash-padil-01

japan-manga-20160604-01 image007japan-manga-20160604-007 image008japan-manga-20160604-008

ಮಂಗಳೂರು ಪಡೀಲ್ ಎಂಬಲ್ಲಿ ನಡೆದ ಹೋಂ ಸ್ಟೇ ಧಾಳಿ ಪ್ರಕರಣದ ಆರೋಪಿಯಾಗಿದ್ದ ಸುಭಾಷ್ ಪಡೀಲ್ ನನ್ನು ವಿಚಾರಣೆಗಾಗಿ ಶನಿವಾರ ಕೋರ್ಟಿಗೆ ಕರೆತರಲಾಗಿತ್ತು. ಈ ವೇಳೆ ಕೋರ್ಟ್ ಆವರಣದಲ್ಲಿ ಮುಖಾಮುಖಿಯಾದ ವಿವಿಧ ಪ್ರಕರಣದಲ್ಲಿ ಆರೋಪಿಯಾಗಿದ್ದ ರಾಜ ಅಲಿಯಾಸ್ ಜಪಾನ್ ಮಂಗ ಎಂಬಾತನು ಪಡೀಲ್ ಮೇಲೆ ಹಲ್ಲೆ ನಡೆಸಿ ಚೂರಿಯಿಂದ ಇರಿದಿದ್ದಾನೆ ಎನ್ನಲಾಗಿದೆ.
ಕೂಡಲೇ ಜೊತೆಯಲ್ಲಿದ್ದ ಕಾನ್ಸ್ಟೇಬಲ್ಗಳಾದ ಮೊಹಾಂತೇಶ್, ಹರೀಶ್, ದೀನೇಶ್ ಹಾಗೂ ಶ್ರೀಧರ್ ಅವರು ಮಧ್ಯ ಪ್ರವೇಶಿಸಿ ಇಬ್ಬರಿಗೂ ಸಮಾಧಾನ ಪಡಿಸಿದರೆನ್ನಲಾಗಿದೆ.
ಘಟನೆಯ ಕುರಿತು ಮಾಹಿತಿ ಪಡೆದ ಪೋಲಿಸ್ ಕಮೀಷನರ್ ಚಂದ್ರಶೇಖರ್ ಅವರು ಪೋಲಿಸರು ಕಾರ್ಯವನ್ನು ಶ್ಲಾಘಿಸಿದ್ದಾರೆ.

Leave a Reply