ಪಡುಬಿದ್ರಿ: ಸುಂದರ ಅಕ್ಷರದ ಜೊತೆ ವಿದ್ಯಾರ್ಥಿಗಳು ಶುದ್ಧ ಮನಸ್ಸುಳ್ಳವರಾಗಬೇಕು ವಿಧ್ಯಾರ್ಥಿವೇತನ ವಿತರಣೆಯಲ್ಲಿ  : ಬಾಲಕೃಷ್ಣ ಪೂಜಾರಿ ಉಚ್ಚಿಲ

ಪಡುಬಿದ್ರಿ : ಸುಂದರ ಅಕ್ಷರದ ಜೊತೆ ವಿದ್ಯಾರ್ಥಿಗಳು ಶುದ್ಧ ಮನಸ್ಸುಳ್ಳವರಾಗಬೇಕು ಎಂದು ಉಚ್ಚಿಲ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಆರ್. ಪೂಜಾರಿ ಹೇಳಿದ್ದಾರೆ.

ಅವರು ರೇಶ್ಮೀ ಸಭಾಭವನದಲ್ಲಿ ನಡೆದ ಉಚ್ಚಿಲ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವರ ಸೇವಾ ಸಂಘದ ವತಿಯಿಂದ ನಡೆದ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

billavasanghauchila 18-07-2015 22-24-51 billavasanghauchila 18-07-2015 22-27-43 billavasanghauchila 18-07-2015 22-28-30 billavasanghauchila 18-07-2015 22-29-01 billavasanghauchila 18-07-2015 22-31-56 billavasanghauchila 18-07-2015 22-33-31 billavasanghauchila 18-07-2015 22-33-55 billavasanghauchila 18-07-2015 22-35-40 billavasanghauchila 18-07-2015 22-38-30 suzlonkoragafamily 18-07-2015 22-33-31

ದಾನಿಗಳಿಗೆ ಕೈಯೊಡ್ಡಿ ಸಂಘದ ವತಿಯಿಂದ ನೀಡುತ್ತಿರುವ ಈ ಶೈಕ್ಷಣಿಕ ಪುರಸ್ಕಾರದ ಪ್ರೋತ್ಸಾಹವನ್ನು ಜೀವನ ಪರ್ಯಂತ ಸ್ಮರಿಸುವುದರ ಜೊತೆಗೆ ಸಮಾಜಮುಖಿಯಾಗಿ ತಾವುಗಳೂ ಬೆಳೆದು ನಿಲ್ಲಬೇಕೆಂದು ಆಶಿಸಿದರು.

ವಿದ್ಯೆಯಿಂದ ಉದ್ಯೋಗ ಗಳಿಸುವ ಮೂಲಕ ಸ್ವತಂತ್ರರಾಗಿರಿ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು. ನಮ್ಮ ಕಾಲ ಮೇಲೆ ನಿಲ್ಲುವಷ್ಟರ ಮಟ್ಟಿನ ಶಕ್ತಿ ಹೊಂದಿದಾಗ ಸಮಾಜದಿಂದ ಪಡಕೊಂಡದ್ದನ್ನು ಸಮಾಜಕ್ಕೆ ಹಿಂತಿರುಗಿಸಿ ನೀಡುವ ಔದಾರ್ಯತೆ ಮೈಗೂಡಿಸಿಕೊಳ್ಳಬೇಕು ಎಂದು ಉಡುಪಿ ಜಿ.ಪಂ ಸದಸ್ಯ ಗೀತಾಂಜಲಿ ಎಂ. ಸುವರ್ಣ ಹೇಳಿದರು.

ಹಿರಿಯರ ಮತ್ತು ಸಮಾಜದ ಋಣವನ್ನು ತೀರಿಸುವಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಸಮಾಜಮುಖೀ ಚಿಂತನೆ ಅಳವಡಿಸಿಕೊಳ್ಳಬೇಕು. ಅಡ್ಡದಾರಿಯನ್ನು ಹಿಡಿಯುವ ಚಂಚಲ ಮನಸ್ಸನ್ನು ಬಿಟ್ಟು ಜಾಣ್ಮೆ, ಶಕ್ತಿ ಅರಿತು ಐ.ಎ.ಎಸ್., ಐ.ಪಿ.ಎಸ್. ವಿದ್ಯೆ ಗಳಿಸುವತ್ತ ಹೆಚ್ಚಿನ ಮನನ ಮಾಡಬೇಕೆಂದು ಗೀತಾಂಜಲಿ ಸುವರ್ಣ ವಿಧ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಮಾಜದ 48 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ಪರಿಕರ ವಿತರಿಸಲಾಯಿತು.

ಅನಿವಾಸಿ ಭಾರತೀಯ ರತ್ನಾಕರ ಕೋಟ್ಯಾನ್, ದಾನಿಗಳಾದ ಕರುಣಾಕರ ಕೋಟ್ಯಾನ್, ವಸಂತ ಪೂಜಾರಿ ದೇಜಾಡಿ, ಜೀವನ್ ಕಾಪು, ನಾಗೇಶ್ ಕೋಟ್ಯಾನ್, ಸಂಘದ ಉಪಾಧ್ಯಕ್ಷ ಮುದ್ದು ಪೂಜಾರಿ, ಜೊತೆ ಕಾರ್ಯದರ್ಶಿ ಉಷಾ ಆರ್. ಕೋಟ್ಯಾನ್, ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಗುಣವತಿಚಂದ್ರಶೇಖರ ಕೋಟ್ಯಾನ್, ವಿನೋದಶೇಖರ ಮತ್ತಿತರರು ವೇದಿಕೆಯಲ್ಲಿದ್ದರು.

ಗೀತಾಪ್ರಭಾಕರ ಪ್ರಾರ್ಥಿಸಿದರು. ಬಾಲಕೃಷ್ಣ ಆರ್. ಪೂಜಾರಿ ಸ್ವಾಗತಿಸಿದರು. ಸುಧಾಕರ ಕೋಟ್ಯಾನ್ ವರದಿ ವಾಚಿಸಿದರು. ಮಿಥುನ್ ಕೋಟ್ಯಾನ್ ವಂದಿಸಿದರು. ಚಂದ್ರಶೇಖರ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.

1 Comment

  1. We have very Poover Sangha. You made us Richer today. Thanks to dear Michael &. Mangalorean.com. Wish u all the Best. Thanks ones again.

Leave a Reply

Please enter your comment!
Please enter your name here