ಪಡುಬಿದ್ರೆಯಲ್ಲಿ 20 ಕೋಟಿಗೂ ಅಧಿಕ ಕಾಮಗಾರಿಗಳಿಗೆ ಸಚಿವ ಸೊರಕೆಯಿಂದ ಶಿಲಾನ್ಯಾಸ

ಉಡುಪಿ : 20 ಕೋಟಿ ರೂ ಕಾಮಗಾರಿಗಳಿಗೆ ಪಡುಬಿದ್ರೆ ವ್ಯಾಪ್ತಿಯಲ್ಲಿ ಇಂದು ಶಿಲಾನ್ಯಾಸ ಮಾಡಿದ ರಾಜ್ಯ ನಗರಾಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆಯವರು ಜನಸಾಮಾನ್ಯ ಸಮಸ್ಯೆಗಳಿಗೆ ಸ್ಪಂದಿಸುವುದು ತನ್ನ ಆದ್ಯತೆ ಎಂದು ಅಭಿಪ್ರಾಯ ಪಟ್ಟರು.

image001vinay-kumar-sorake-foundation-padubidri-20160517 image002vinay-kumar-sorake-foundation-padubidri-20160517

ಹೆಜಮಾಡಿ, ಪಡುಬಿದ್ರೆ, ಎಲ್ಲೂರು, ಬೆಳಪು, ಪಲಿಮಾರು, ತೆಂಕ ಒಟ್ಟು 6 ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಶಾಲಾ ಆವರಣದ ಅಕ್ಷರದಾಸೋಹ ಅಡುಗೆಕೋಣೆ ಮುಂತಾದ ಹಲವಾರು ಕಾಮಗಾರಿಗಳಿಗೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಶಿಲಾನ್ಯಾಸ ಗೈದರು.
ಇಂದು ಬೆಳಗ್ಗೆ 9.30 ಕ್ಕೆ ಕೃಷಿ ಮಾರಾಟ ಇಲಾಖೆ, ಎಪಿಎಂಸಿ ವತಿಯಿಂದ 35.81 ಲಕ್ಷ ರೂ ವೆಚ್ಚದ ಹೆಜಮಾಡಿ ಗ್ರಾಮ ಪಂಚಾಯತ್ ಹೆಜಮಾಡಿ ಕೊಕ್ರಾಣಿ ರಸ್ತೆಯನ್ನು ಹೆಜಮಾಡಿ ಗ್ರಾಮ ಪಂಚಾಯತ್‍ನಲ್ಲಿ ಅಭಿವೃದ್ಧಿ ಕಾಮಾಗಾರಿಗೆ ಚಾಲನೆ ನೀಡಿದರು. ಬಳಿಕ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿಯಿಂದ ಬೋರುಗುಡ್ಡೆ-ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿ 7 ಲಕ್ಷ ರೂ ವೆಚ್ಚದಲ್ಲಿ, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯಿಂದ ಹರಿಜನ ಕಾಲನಿ ಸಂಪರ್ಕ ರಸ್ತೆ ಅಭಿವೃದ್ಧಿ 7 ಲಕ್ಷ ರೂ ವೆಚ್ಚದಲ್ಲಿ, ಹೆಜಮಾಡಿ ಬೋರುಗುಡ್ಡೆ-ಪರಿಶಿಷ್ಟ ಜಾತಿ ಕಾಲನಿ ರಸ್ತೆ 5 ಲಕ್ಷ ರೂ ವೆಚ್ಚದಲ್ಲಿ, ಹೆಜಮಾಡಿ ಗ್ರಾಮ ಪಂಚಾಯತ್, ಬೋರುಗುಡ್ಡೆ ಪರಿಶಿಷ್ಟ ಜಾತಿ ಕಾಲನಿ ಸಂಪರ್ಕ ರಸ್ತೆ 7 ಲಕ್ಷ ರೂ ವೆಚ್ಚದಲ್ಲಿ, ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆ ಶರೀಫ್ ಸಾಹೇಬರ ಮನೆಯಿಂದ ಬೋರುಗುಡ್ಡೆ ಪರಿಶಿಷ್ಟ ಜಾತಿ ಕಾಲನಿ ಸಂಪರ್ಕ ರಸ್ತೆ ಅಭಿವೃದ್ಧಿ 5 ಲಕ್ಷ ರೂ, ಹೆಜಮಾಡಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿ ಶಾಂಭವಿ ನದಿಗೆ ಸಂರಕ್ಷಣಾ ಕಾಮಗಾರಿ 50 ಲಕ್ಷ ರೂ, ಹೆಜಮಾಡಿ ಗ್ರಾಮದ ನಡಿಕುದ್ರುವಿನಲ್ಲಿ ನದಿ ದಂಡೆ ಸಂರಕ್ಷಣಾ ಕಾಮಗಾರಿ 30 ಲಕ್ಷ ರೂ ವೆಚ್ಚದಲ್ಲಿ, ಹೆಜಮಾಡಿ ಗ್ರಾಮದ ಎನ್‍ಎಸ್ ರೋಡ್ ಕಾಂಕ್ರೀಟೀಕರಣಕ್ಕೆ 5 ಲಕ್ಷ ರೂ, ಹೆಜಮಾಡಿಯ ಹಳೆ ಎಂ.ಬಿ ರಸ್ತೆಯ ಹೆಜಮಾಡಿ ಪೇಟೆಯ ಭಾಗವನ್ನು ಬಸ್ ಬೇ ಹಾಗೂ ಪಾರ್ಕಿಂಗ್‍ಗಾಗಿ ಅಗಲಗೊಳಿಸಲು 50ಲಕ್ಷ ರೂ ಗಳ ಕಾಮಗಾರಿಗಳಿಗೆ ಸಚಿವರು ಶಿಲಾನ್ಯಾಸ ನೀಡಿದರು.

image007vinay-kumar-sorake-foundation-padubidri-20160517 image008vinay-kumar-sorake-foundation-padubidri-20160517 image010vinay-kumar-sorake-foundation-padubidri-20160517 image012vinay-kumar-sorake-foundation-padubidri-20160517

ಇದೇ ರೀತಿ ಪಡುಬಿದ್ರೆಯ ಬೀಡಿಕೆರೆ ಅಂಗನವಾಡಿಯಿಂದ ಜಮ್ಮಾ ಮಸಿದಿ ರಸ್ತೆ 5 ಲಕ್ಷ ರೂ ವೆಚ್ಚದಲ್ಲಿ, ಪಡುಬಿದ್ರೆ ಮದ್ಮಲ್ ಕೆರೆ ಅಭಿವೃದ್ಧಿ 30 ಲಕ್ಷ ರೂ, ಪಡುಬಿದ್ರೆ ಮಾರ್ಕೆಟ್ ರೋಡ್ ಮರು ಡಾಮರೀಕರಣ 5 ಲಕ್ಷ ರೂ, ಪಡುಬಿದ್ರೆ ಬೋರ್ಡ್ ಶಾಲಾ ಆವರಣದ ಅಕ್ಷರದಾಸೋಹ ಅಡುಗೆ ಕೋಣೆ ಉದ್ಘಾಟನೆ 3.61 ಲಕ್ಷರೂ, ಕಂಚಿನಡ್ಕ ರಾಘವೇಂದ್ರ ಮಠದ ರಸ್ತೆಯಿಂದ ಎಡಭಾಗದ ಅಣ್ಣು ಹರಿಜನರ ಮನೆಯ ಎದುರಿನ ಮುಖ್ಯ ರಸ್ತೆಯಿಂದ ಶಾಲಾ ರಸ್ತೆಯ ಕೂಡುವಿಕೆಯವರೆಗೆ ರಸ್ತೆ ಅಭಿವೃದ್ಧಿಗೆ 6 ಲಕ್ಷ ರೂ, ಪಡುಬಿದ್ರೆ ನಡ್ಸಾಲು ಗ್ರಾಮದ ಕೊರಗ ಮೇಸ್ತ್ರಿಯವರ ಮನೆಯಿಂದ ಮಿಂಚಿನ ಬಾವಿಯವರೆಗೆ ರಸ್ತೆ ಅಭಿವೃದ್ಧಿಗೆ 6 ಲಕ್ಷ ರೂ, ಪಡುಬಿದ್ರೆ ಕಂಚಿನಡ್ಕ ಕೃಷ್ಣರವರ ಮನೆಗೆ ಹೋಗುವ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿ 8 ಲಕ್ಷ ರೂ, ನಡ್ಸಾಲು ಗ್ರಾಮದ ಕಂಚಿನಡ್ಕ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿ 10 ಲಕ್ಷ, ಪಡುಬಿದ್ರೆ ನಡ್ಸಾಲು ಅಬ್ಬೇಡಿ ಕೋರ್ದಬ್ಬು ದೈವಸ್ಥಾನದ ರಸ್ತೆ ಕಾಂಕ್ರೀಟೀಕರಣ 5 ಲಕ್ಷ ರೂ ಗಳ ಕಾಮಗಾರಿಗೆ ಅಪರಾಹ್ನದವರೆಗೆ ಸಚಿವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಚಿವರೊಂದಿಗೆ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ಪಿಡಿಓ ಮಮತಾ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರೆ, ತಾಲೂಕು ಪಂಚಾಯತ್ ಸದಸ್ಯರಾದ ರೇಣುಕಾ, ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಪುತ್ರನ್, ಅಜೀಜ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ವಾರಾಹಿ ಜಲಾನಯನ ವ್ಯಾಪ್ತಿಯ ಅಧಿಕಾರಿಗಳು, ಪಂಚಾಯತ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply