ಪಡುಬಿದ್ರೆ: ಮುದರಂಗಡಿಯಲ್ಲಿ ಕೋಳಿ ಅಂಕಕ್ಕೆ ಎಸ್ಪಿ ನೇತೃತ್ವದಲ್ಲಿ ದಾಳಿ 37 ಮಂದಿ ಸೆರೆ, 40 ಕೋಳಿ, 25 ವಾಹನಗಳ ವಶ

ಪಡುಬಿದ್ರೆ: ಇಲ್ಲಿಗೆ ಸಮೀಪದ ಮುದರಂಗಡಿಯ ಬೆಳ್ಳಿಬೆಟ್ಟು-ಸಾಂತೂರುಕೊಪ್ಲ ಬಳಿ ಕೋಳಿ ಅಂಕಕ್ಕೆ ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ನೇತೃತ್ವದ ತಂಡ ದಾಳಿ ನಡೆಸಿ 37 ಮಂದಿಯನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಸುಮಾರು 40ರಷ್ಟು ಕೋಳಿ ಹಾಗೂ 25 ವಾಹನಗಳನ್ನು ಪೊಲೀಸರ ತಂಡ ವಶ ವಶಪಡಿಸಿಕೊಂಡಿದ್ದಾರೆ.

ಯಾವುದೇ ಪರವಾನಿಗೆ ಇಲ್ಲದೆ ಮಂಚಕಲ್‌ನ ಸಾಯಿ ಎಂಬವರು ಕೋಳಿ ಅಂಕ ನಡೆಸುತ್ತಿದ್ದಾರೆ ಎಂಬ ಬಗ್ಗೆ ಎಸ್ಪಿ ಅವರಿಗೆ ಮಾಹಿತಿ ಬಂದಿತ್ತು. ಅವರು ಡಿಸಿಐಬಿ ನಿರೀಕ್ಷಕ ಜೈ ಶಂಕರ್‌, ಕಾಪು ನಿರೀಕ್ಷಕ ಸುನೀಲ್‌ ನಾಯ್ಕರೊಂದಿಗೆ 25 ಕ್ಕೂ ಅಧಿಕ ಪೊಲೀಸರೊಂದಿಗೆ ದಾಳಿ ನಡೆಸಿದ್ದರು. ಈ ಸಂದರ್ಭ ಕೋಳಿ ಅಂಕ ನಡೆಯುತ್ತಿದ್ದು, ದಾಳಿಯ ಸಂದರ್ಭ ಆರೋಪಿಗಳು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಸಾಯಿ ಸಹಿತ 37 ಮಂದಿಯ ವಿರುದಟಛಿ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಸ್ಥಾನಗಳ ಹೆಸರಿನಲ್ಲಿ ಹಲವೆಡೆ ಅಕ್ರಮ ಕೋಳಿ ಅಂಕ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಅಕ್ರಮವಾಗಿ ಕೋಳಿ ಅಂಕ ನಡೆಸುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅಣ್ಣಾಮಲೈ ತಿಳಿಸಿದ್ದಾರೆ.

Leave a Reply

Please enter your comment!
Please enter your name here