ಪಲಮೂರು ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ಹಲ್ಲೆ; ಮಾನವ್ ಸಮಾನತ ಮಂಚ್ ಖಂಡನೆ

ಮಂಗಳೂರು: ತೆಲಂಗಾಣದ ಮೆಹಬೂಬ್ ನಗರದ ಪಲಮೂರು ವಿಶ್ವವಿದ್ಯಾಲಯದ ಎ. ಬಿ. ವಿ. ಪಿ. ಯ ಕಾರ್ಯಕರ್ತರಾಗಿರುವ ವಿದ್ಯಾರ್ಥಿಗಳು ಒಂದೇ ವಸತಿಯಲ್ಲಿದ್ದ ದಲಿತ ವಿದ್ಯಾರ್ಥಿಗಳನ್ನು ಜಾತಿಯ ಕಾರಣಕ್ಕಾಗಿ ತಾರತಮ್ಯ ಮಾಡಿ ಅವಮಾನಿಸಿ ಹಲ್ಲೆ ನಡೆಸಿರುವುದನ್ನು ಮಾನವ್ ಸಮಾನತಾ ಮಂಚ್ ತೀವ್ರವಾಗಿ ಖಂಡಿಸಿದೆ.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹ ಘಟನೆಗಳು ದಿನನಿತ್ಯ ನಡೆಯುತ್ತಿವೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಹಿಂದೂ ಸಮಾಜೋತ್ಸವಗಳಲ್ಲಿ ಹಿಂದೂಗಳೆಲ್ಲರೂ ಒಂದೇ ಎಂದು ಮಾಡುತ್ತಿರುವ ಘೋಷಣೆಯು ಕೇವಲ ಘೋಷಣೆಯಾಗಿ ಉಳಿದಿದ್ದು ಕಾರ್ಯರೂಪಕ್ಕೆ ಬಾರದಿರುವುದಕ್ಕೆ ಮೇಲಿನ ಘಟನೆ ಸಾಕ್ಷಿಯಾಗಿದೆ. ಇದರಿಂದ ದಲಿತರು ಹಿಂದುಗಳಲ್ಲವೇ ಎಂಬ ಸಂಶಯ ಮೂಡುತ್ತದೆ. ಕೇಂದ್ರ ಸರಕಾರವು ಮೌನವಾಗಿದ್ದು ಮೋದಿಯವರ ಅಚ್ಛೇ ದಿನ್‍ಗಳ ಯಾವ ರೀತಿಯ ಬೆಳವಣಿಗೆ ಎಂದು ಸಂಘದ ಪರವಾಗಿ ಪದಾಧಿಕಾರಿಗಳಾದ ಅಲಿ ಹಸನ್, ರೋಶನ್ ಪತ್ರಾವೊ ಹಾಗೂ ವಸಂತ್ ಟೈಲರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply