ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಹಜ್ಜಾಜ್ ಗಳಿಗೆ ಬೀಳ್ಕೊಡುಗೆ ಸಮಾರಂಭ

ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಹಜ್ಜಾಜ್ ಗಳಿಗೆ ಬೀಳ್ಕೊಡುಗೆ ಸಮಾರಂಭ

ಮಂಗಳೂರು: ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಸೆಕ್ಟರ್ ನೂತನಾಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಉಳ್ಳಾಲ ಪೇಟೆ ಸಮುದಾಯ ಭವನದಲ್ಲಿ ಈ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಉಳ್ಳಾಲದ ಹಜ್ಜಾಜ್ ಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಹಜ್ ತರಬೇತಿ ಶಿಬಿರ ನಡೆಯಿತು.

Hajj 1 Hajj 3

ಎಸ್ ಎಸ್ ಎಫ್ ಉಳ್ಳಾಲ ಅಕ್ಕರೆಕೆರೆ ನಾಯಕ ಬಶೀರ್ ಸಖಾಫಿ ಉಳ್ಳಾಲ ದುವಾ ನಿರ್ವಹಿಸಿದರು.ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪವಿತ್ರ ಹಜ್ ಯಾತ್ರೆ ಪುಣ್ಯದಾಯಕವಾದ ಸತ್ಕರ್ಮವಾಗಿದ್ದು ಮುಸ್ಲಿಮನ ಮೂಲಭೂತ ಕಾರ್ಯಗಳಲ್ಲೊಂದಾಗಿದೆ ಎಂದು ತಿಳಿಸಿದರು.
ಎಸ್ ಎಸ್ ಎಫ್ ತೊಕ್ಕೋಟು ಸೆಕ್ಟರ್ ರಿಲೀಫ್ ಚೇರಮಾನ್ ಅಲ್ತಾಫ್ ಕುಂಪಲ ಮತ್ತು ಸುಲ್ತಾನ್ ಅಬೂಬಕರ್ ಮದನಿ ಪ್ರಾಸ್ತಾವಿಕ ಭಾಷಣ ಮಾಡಿದರು.ಬಳಿಕ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಈ ವರ್ಷ ಪವಿತ್ರ ಹಜ್ ಗೆ ತೆರಳುವ ತೊಕ್ಕೋಟು ಹಿದಾಯ ಮಸೀದಿ ಸಮಿತಿ ಸದಸ್ಯ ರಝ್ಝಾಖ್ ತೊಕ್ಕೋಟು,ಉಳ್ಳಾಲ ಕೇಂದ್ರ ಜುಮಾ ಮಸೀದಿ ಸಿಬ್ಬಂದಿ ಅಬೂಬಕರ್ ಮದನಿ,ಉಳ್ಳಾಲ ದರ್ಗಾ ಮಾಜಿ ಸಮಿತಿ ಸದಸ್ಯರಾದ ಅಹಮದ್ ಬಾವ,ಖಾದರ್ ಮಾರ್ಗತಲೆ,ಉಳ್ಳಾಲ ದರ್ಗಾ ಸಮಿತಿ ಸದಸ್ಯರಾದ ಹನೀಫ್ ಮಾರ್ಗತಲೆ,ಫಾರೂಖ್ ಮಾರ್ಗತಲೆ ಹಾಗೂ ಹೈದರ್ ಸುಂದರಿಭಾಗ್ ಇವರನ್ನು ಶಾಲುಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸೆಕ್ಟರ್ ನೂತನಾಧ್ಯಕ್ಷರಾಗಿ ಆಯ್ಕೆಯಾದ ಸಯ್ಯಿದ್ ಖುಬೈಬ್ ತಂಗಳ್,ದ.ಕ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ ಹಾಗೂ ವಿದೇಶ ಯಾತ್ರೆ ಹೊರಡುತ್ತಿರುವ ಉಸ್ಮಾನ್ ಕೋಡಿ ಇವರುಗಳನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಉಳ್ಳಾಲ ದರ್ಗಾ ಸಮಿತಿ ಸದಸ್ಯರಾದ ತ್ವಾಹಿರ್ ಹಾಜಿ ಮುಕ್ಕಚ್ಚೇರಿ,ಅಬ್ದುಲ್ ಖಾದರ್ ಕೋಡಿ,ಆಬ್ದುಲ್ ಅಝೀಝ್ ಕೋಡಿ,ಎಸ್ ವೈ ಎಸ್ ಅಳೇಕಲ ಬ್ರಾಂಚ್ ಅಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ತಂಗಳ್,ಉಳ್ಳಾಲ ಅಲ್ ಅಮೀನ್ ರಿಲೀಫ್ ಫೌಂಡೇಶನ್ ಕಾರ್ಯದರ್ಶಿ ಅತೀಖ್ ಕೋಡಿ,ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ,ರೀಡ್ ಪ್ಲಸ್ ಪ್ರತಿನಿಧಿ ಹನೀಫ್ ಬೊಟ್ಟು,ಇಶಾರ ಕಾರ್ಯದರ್ಶಿ ಅಬ್ದುಲ್ ಘನಿ,ಮದೀನ ಇಸ್ಮಾಯಿಲ್,ಶಿಹಾಬ್ ಪೇಟೆ,ಎಸ್ ವೈ ಎಸ್ ಮುಕ್ಕಚ್ಚೇರಿ ಬ್ರಾಂಚ್ ಕೋಶಾಧಿಕಾರಿ ಹೈದರ್ ಮುಕ್ಕಚ್ಚೇರಿ,ಎಸ್ ಎಸ್ ಎಫ್ ಕ್ಯಾಂಪಸ್ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ,ಸೆಕ್ಟರ್ ಕಾರ್ಯದರ್ಶಿಗಳಾದ ಹಫೀಝ್ ಕೋಡಿ ಹಾಗೂ ತಾಜುದ್ದೀನ್ ಹಳೆಕೋಟೆ,ಮುಕ್ಕಚ್ಚೇರಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಗೂ ಯೂಸುಫ್ ಮಿಲ್ಲತ್ ಉಪಸ್ಥಿತರಿದ್ದರು.ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿದರು.ಸೆಕ್ಟರ್ ಕಾರ್ಯದರ್ಶಿ ಸಿರಾಜ್ ಮೇಲಂಗಡಿ ಕಾರ್ಯಕ್ರಮ ನಿರೂಪಿಸಿದರು.ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಧನ್ಯವಾದ ಮಾಡಿದರು.

Leave a Reply

Please enter your comment!
Please enter your name here