ಪಾಂಡೇಶ್ವರ ಪೋಲಿಸರಿಂದ 6 ಜನ ದರೋಡೆಕೋರರ ಬಂಧನ

ಮಂಗಳೂರು:  ಗುಣಪ್ರಸಾದ್ ಎಂಬವರನ್ನು ಅಡ್ಡಗಟ್ಟಿ ಬಲವಂತವಾಗಿ ರೈಲ್ವೆ ಟ್ರಾಕ್ ಬಳಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ದರೋಡೆ ಮಾಡಿದ ತಂಡವನ್ನು ಮಂಗಳೂರು ದಕ್ಷಿಣ ಪೋಲಿಸ್ ಠಾಣೆಯ ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂದರು ನಿವಾಸಿ ಸರ್ಫುದ್ಧೀನ್, ಫೈಸಲ್ ನಗರ ನಿವಾಸಿ ಮಹಮ್ಮದ್ ರಂಲಾನ್, ಕೃಷ್ಣಾಪುರ ನಿವಾಸಿ ಶೇಕ್ ಮಹಮ್ಮದ್ ಸಫಾನ್, ಮತ್ತು ಮಹಮ್ಮದ್ ಆರೀಫ್, ಕಲ್ಲಾಪು ನಿವಾಸಿ ಸಲ್ಮಾನ್ ಫಾರಿಸ್, ಮತ್ತು ಫಳ್ನೀರ್ ನಿವಾಸಿ ನಿಮಾರ್ ಹಶ್ಮಿ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಜೂನ್ 5 ರಂದು ಗುಣಪ್ರಸಾದ್ ರವರು ಗೂಡ್ ಶೆಡ್ಡೆಯಲ್ಲಿರುವ ಸೋಮನಾಥ ದೇವಸ್ಥಾನಕ್ಕೆ ಹೋಗಿ ವಾಪಾಸು ಸ್ಟೇಟ್ ಬ್ಯಾಂಕ್ ಕಡೆಗೆ ಗೂಡು ಶೆಡ್ಡೆ ರಸ್ತೆಯಲ್ಲಿ ನಡೆದು ಕೊಂಡು ಬರುತ್ತಿರುವಾಗ ಅಲ್ಲಿದ್ದ ಮೂರು ಮಂದಿ ಹಾಗೂ ಸ್ಕೂಟರಿನಲ್ಲಿ ಬಂದ ಮೂರು ಜನ ಯುವಕರು ಒಟ್ಟು 6 ಜನರು ಪಿರ್ಯಾದಿದಾರರಾದ ಗುಣಪ್ರಸಾದ್ ರವರನ್ನು ಅಡ್ಡಗಟ್ಟಿ ಬಲವಂತವಾಗಿ ರೈಲ್ಪೆ ಟ್ರ್ಯಾಕ್ ಬಳಿ ಕರೆದುಕೊಂಡು ಹೋಗಿ ಎಲ್ಲರೂ ಸೇರಿ ಪಿರ್ಯಾದಿದಾರರಿಗೆ ಕೈಯಿಂದ ಹಲ್ಲೆ ಮಾಡಿ ಪಿರ್ಯಾದಿದಾರರ ಕೈಯಲ್ಲಿದ್ದ ಕ್ಯಾಮರಾ,ಕುತ್ತಿಗೆಯಲ್ಲಿದ್ದ ಚಿನ್ನದ ಸರ ಪ್ಯಾಂಟಿನ ಕಿಸೆಯಲ್ಲಿದ್ದ ಮೊಬೈಲ್ ಹಾಗೂ ನಗದು ಹಾಗೂ ಎಟಿಎಮ್ ಕಾರ್ಡ್ ಇದ್ದ ಪರ್ಸ್ ನ್ನು ದರೋಡೆ ಮಾಡಿದ್ದು ದರೋಡೆ ಮಾಡಿದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 1,31,500/- ಆಗಿರುತ್ತದೆ.
ಈ ಕುರಿತು ತನಿಖೆ ಆರಂಭಿಸಿದ ಮಂಗಳೂರು ದಕ್ಷೀಣ ಪೋಲಿಸ್ ಠಾಣೆಯ ಪೋಲಿಸರು ಜೂನ್ 8 ರಂದು ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ಅವರುಗಳು ದರೋಡೆ ಮಾಡಿದ ಸುಮಾರು 70,000/-ಮೌಲ್ಯದ ಕ್ಯಾಮರಾ 18 ಗ್ರಾಂ ತೂಕದ ಸುಮಾರು 48,000/- ಮೌಲ್ಯದ ಚಿನ್ನದ ಸರ, ಸುಮಾರು 12,000/-ಮೌಲ್ಯದ ಮೊಬೈಲ್, ಮೂರು ಡೆಬಿಟ್ ಕಾರ್ಡ್ ಇದ್ದ ಪರ್ಸ್ ಹಾಗೂ ಆರೋಪಿಗಳು ದರೋಡೆಗೆ ಉಪಯೋಗಿಸಿದ ಸುಮಾರು 50,000/- ಸ್ಕೂಟರನ್ನು ಒಟ್ಟು 1,81,500/- ರೂ ಮೌಲ್ಯದ ಸೊತ್ತನ್ನು ಆರೋಪಿಗಳ ವಶದಿಂದ ಸ್ವಾಧೀನಪಡಿಸಿಕೊಂಡಿದ್ದಾರೆ.

dacoits-pandeshwar-20160608

ಪತ್ತೆ ಕಾರ್ಯಾಚರಣೆಯನ್ನು ಪೊಲೀಸ್ ನಿರೀಕ್ಷಕರಾದ ಶಾಂತರಾಮ್, ಪಿಎಸ್ಐ ಅನಂತ ಮುರ್ಡೇಶ್ವರ, ಪಿಎಸ್ಐ ಮಹಮ್ಮದ್ ಶರೀಫ್ ಸಿಬ್ಬಂದಿಗಳಾದ ಎಎಸ್ಐ ಆ.ಕೆ.ಗವಾರ್, ಯು.ಆರ್.ಡಿ,ಸೋಜಾ, ವಿಶ್ವನಾಥ, ಗಂಗಾಧರ, ಧನಂಜಯಗೌಡ, ಸತ್ಯನಾರಾಯಣ, ಶೇಖರ ಗಟ್ಟಿ, ಪುರುಷೋತ್ತಮ, ನೂತನ್ ಕುಮಾರ್, ಭೀಮಪ್ಪ, ,ಗೋಪಾಲಕೃಷ್ಣ, ಶಶಿಕುಮಾರ್ ವಿನೋದ, ಚಂದ್ರಶೇಖರರವರುಗಳ ತಂಡವು ನಿರ್ವಹಿಸಿರುತ್ತದೆ.

Leave a Reply

Please enter your comment!
Please enter your name here