ಪಾಕ್ ಭಯೋತ್ಪಾದನೆಯ ವಿರುದ್ಧ ಚರ್ಚೆ ಬದಲು ಯುದ್ದ ಮಾಡಿ – ಹಿಂದೂ ಆಂದೋಲನ

ಪಾಕ್ ಭಯೋತ್ಪಾದನೆಯ ವಿರುದ್ಧ ಚರ್ಚೆ ಬದಲು ಯುದ್ದ ಮಾಡಿ – ಹಿಂದೂ ಆಂದೋಲನ

ಮಂಗಳೂರು: ಜಮ್ಮು-ಕಾಶ್ಮೀರದ ಉರಿ ಸೇನಾ ನೆಲೆ ಮೇಲಿನ ಪಾಕ್ ಜಿಹಾದಿ ಭಯೋತ್ಪಾಧಕರ ದಾಳಿಯಲ್ಲಿ 17 ಸೈನಿಕರು ಹುತಾತ್ಮರಾದರು. 2014 ರಲ್ಲಿಯೂ ಇದೇ ರೀತಿಯ ದಾಳಿಯಲ್ಲಿ 10 ಸೈನಿಕರು ಹುತಾತ್ಮರಾಗಿದ್ದರು. ಸೇನೆ ನೆಲೆಯ ಮೇಲೆ ದಾಳಿ ಮಾಡುವುದು ಮತ್ತು ಸೈನಿಕರನ್ನು ಹತ್ಯೆ ಮಾಡುವುದು ಇದು ಸರ್ವೆ ಸಾಮಾನ್ಯವಾಗಿದೆ. ಹಿಂದೆ ಕಾಂಗ್ರೆಸ್ ಪಕ್ಷದ ಕಾಲಾವಧಿಯಲ್ಲಿ ಏನು ನಡೆಯುತ್ತಿತ್ತೋ ಅದೇ ಇತಿಹಾಸ ಈಗ ಪುನಃ ಮುಂದುವರಿದಿರುವುದು ದುರದೃಷ್ಠಕರವಾಗಿದೆ. ಇದನ್ನು ರಾಷ್ಟ್ರೀಯ ಹಿಂದೂ ಆಂದೋಲನದ ಮೂಲಕ ಸಮಸ್ತ ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತೇವೆ. ಪಾಕಿಸ್ತಾನದ ಭಯೋತ್ಪಾಧನೆಯ ವಿರುದ್ದ ಬೈಠಕ್-ಚರ್ಚೆ ಮಾಡುವುದು ನಿಲ್ಲಿಸಿ, ಶತ್ರುರಾಷ್ಟ್ರ ಪಾಕಿಸ್ತಾನದ ಭೂಭಾಗದ ಒಳಗೆ ನುಗ್ಗಿ, ಭಾರತೀಯ ಸೈನ್ಯವು ಭಯೋತ್ಪಾದನೆಯ ಮೂಲಸ್ಥಾನವನ್ನು ನಾಶ ಮಾಡಬೇಕೆಂದು ಆಗ್ರಹಿಸುತ್ತೇವೆ.

rastriya-hindu-andolana

ಕಾಶ್ಮೀರದಲ್ಲಿ ದೇಶದ್ರೋಹಿಗಳಿಗೆ ಬೆಂಬಲ ನೀಡಿ ನಮ್ಮ ಸೈನಿಕರ ಮೇಲೆ ಹಲ್ಲೆ ನಡೆಸಲು ಪಾಕಿಸ್ತಾನ ಪ್ರಚೋದನೆ ನೀಡುತ್ತಿತ್ತು. ಆದರೆ ನಮ್ಮ ಸರಕಾರ ಸೈನಿಕರಿಂದ ಪ್ಯಾಲೆಟ್ ಗನ್ ಹಿಂಪಡೆದು ಇನ್ನಷ್ಟು ಸೈನಿಕರಿಗೆ ಹಾನಿಯಾಗುವಂತೆ ಮಾಡಿತು. ಪಿಡಿಪಿ ಜೊತೆ ಮೈತ್ರಿ ಮಾಡುವ ಭಾಜಪ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಇನ್ನಾದರೂ ಕಠೋರ ನಿಲುವು ತಾಳುವುದೇ ? ಭಯೋತ್ಪಾದನೆ ಮೂಲಕ್ಕೆ ಹೋಗಿ ಅದನ್ನು ನಾಶಗೊಳಿಸುವ ತನಕ ಇಂತಹ ಕೃತ್ಯಗಳು ನಿಲ್ಲುವುದಿಲ್ಲ ಎಂಬುದನ್ನು ಸರಕಾರ ಇನ್ನಾದರೂ ಗಮನದಲ್ಲಿರಿಸಿ ಉಗ್ರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದೇವೆ.

3 ಸಪ್ಟೆಂಬರ್ 2016 ರಂದು ಮಹಾರಾಷ್ಟ್ರ ಪೋಲೀಸರ ವಿಶೇಷ ತನಿಖಾ ದಳದವರು ಸನಾತನ ಸಂಸ್ಥೆಯ ಸಾಧಕರಾದ ಡಾ. ವೀರೇಂದ್ರಸಿಂಹ ತಾವಡೆಯವರನ್ನು ಕಾ. ಪಾನ್ಸರೆ ಕೊಲೆ ಪ್ರಕರಣದಲ್ಲಿ ಬಂಧಿಸಿದರು. ಡಾ. ತಾವಡೆಯವರಿಗೆ ಅನೇಕ ಕಾಯಿಲೆಗಳಿರುವಾಗ ಅವರನ್ನು ಕಾನೂನುಬಾಹಿರವಾಗಿ ಪೋಲೀಸ್ ಕಸ್ಟಡಿಯಲ್ಲಿ ಅಮಾನವೀಯವಾಗಿ ಥಳಿಸಿದರು. ಅಲ್ಲದೇ, ಅವರ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಸಹ ನ್ಯಾಯಾಲಯ ಗದರಿಸಿದ ನಂತರ ಮಂಡಿಸಿತು. ಡಾ. ವೀರೇಂದ್ರಸಿಂಹ ತಾವಡೆಯವರು ಖ್ಯಾತ `ಎಮ್.ಡಿ.’ ಡಾಕ್ಟರ್ ಆಗಿದ್ದು ಒಂದು ವ್ಯಾಪಕ ಷಡ್ಯಂತ್ರದ ಮೂಲಕ ಅವರನ್ನು ಕಾ. ಪಾನ್ಸರೆ ಕೊಲೆ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ. ಇದೇ ರೀತಿಯಲ್ಲಿ ಯಾವುದೇ ಬಲವಾದ ಸಾಕ್ಷಿ ಇಲ್ಲದೆ ಶ್ರೀ. ಸಮೀರ್ ಗಾಯಕವಾಡ್ ಇವರನ್ನು ಬಂಧಿಸಿ ಕಳೆದ ವರ್ಷವಿಡೀ ಖಟ್ಲೆ ನಡೆಸಲು ಬಿಡದೆ ಸೆರೆಮನೆಯಲ್ಲಿಡಲಾಗಿದೆ. ಈ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಆಶ್ರಮಕ್ಕೆ ದಾಳಿ ಮಾಡಿ ವೈದ್ಯಕೀಯ ವಿಭಾಗದಿಂದ ಔಷಧಿಗಳನ್ನು ಜಪ್ತಿ ಮಾಡಿ `ನಾರ್ಕೋಟಿಕ್’ ಔಷಧಿಯನ್ನು ಜಪ್ತಿ ಮಾಡಿದ್ದೇವೆಯೆಂದು ಸುಳ್ಳು ವಾರ್ತೆಯನ್ನು ಮಾಧ್ಯಮಗಳಿಗೆ ನೀಡಲಾಗಿದೆ. ಸದ್ಯ ಭಾಜಪದ ಹಿಂದುತ್ವವಾದಿ ಸರಕಾರ ಅಧಿಕಾರದಲ್ಲಿದ್ದರೂ ಸನಾತನ ಸಂಸ್ಥೆಯಂತಹ ಹಿಂದುತ್ವದ ಹಾಗೂ ಧರ್ಮದ ಪ್ರಸಾರ ಮಾಡುವ ಸಂಸ್ಥೆಯನ್ನು ಹಿಂಸಿಸಲಾಗುತ್ತಿದ್ದು, ಸುಳ್ಳು ಸಾಕ್ಷಿಗಳ ಆಧಾರದಲ್ಲಿ ಸನಾತನ ಸಂಸ್ಥೆಯ ತೇಜೋವಧೆ ಮಾಡಲಾಗುತ್ತಿದೆ. ಆದ್ದರಿಂದ ಈ ಕುಕೃತ್ಯವನ್ನು ತಕ್ಷಣ ನಿಲ್ಲಿಸಿ ಸನಾತನ ಸಂಸ್ಥೆ ಮತ್ತು ಡಾ. ತಾವಡೆ ಹಾಗೂ ಶ್ರೀ. ಸಮೀರ ಗಾಯಕವಾಡ್ ಇವರಿಗೆ ನ್ಯಾಯ ನೀಡಬೇಕು ಆಗ್ರಹಿಸುತ್ತೇವೆ.

ಈ ಸಂದರ್ಭದಲ್ಲಿ ಮಾಡಿದ ಇತರ ಬೇಡಿಕೆಗಳು
ದೇಶದ್ರೋಹಿಗಳನ್ನು ಬೆಂಬಲಿಸುವ `ಅಮ್ನೆಸ್ಟಿ ಇಂಟರ್‍ನ್ಯಾಶನಲ್ ಇಂಡಿಯಾ’ ಸಂಘಟನೆಯನ್ನು ನಿಷೇಧಿಸಬೇಕು ಹಾಗೂ ಕಾಶ್ಮೀರದಲ್ಲಿ ಭಾರತದ ವಿರೋಧಿ ಘೋಷಣೆ ನೀಡುವ ಪ್ರತ್ಯೇಕತಾವಾದಿಗಳ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕು, `ಗೋ ಇಂಡಿಯಾ ಗೋ ಬ್ಯಾಕ್’ದಂತಹ ದೇಶದ್ರೋಹಿ ಘೋಷಣೆಗಳನ್ನು ನೀಡುವ ಎಲ್ಲ ಪ್ರತ್ಯೇಕತಾವಾದಿ ಮುಖಂಡರ ವಿರುದ್ಧ ದೇಶದ್ರೋಹದ ಅಪರಾಧವನ್ನು ದಾಖಲಿಸಬೇಕು ಹಾಗೂ ಅವರ ವಿರುದ್ಧ ಭಯೋತ್ಪಾದನಾ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಪಂಜಾಬ್ ಗೋರಕ್ಷಾ ದಳದ ಪ್ರಮುಖ ಸತೀಶಕುಮಾರ ಪ್ರಧಾನ ಇವರ ಮೇಲಿನ ಅನ್ಯಾಯಕಾರಿ ಬಂಧನದ ಕಾರ್ಯಾಚರಣೆಯನ್ನು ಹಿಂತೆಗೆದುಕೊಳ್ಳಬೇಕು. ಅದರೊಂದಿಗೆ ಸಮಾಜದಲ್ಲಿ ಅಶ್ಲೀಲತೆಯನ್ನು ಹಬ್ಬಿಸುವ ಸನಿ ಲಿಯೋನ್‍ಳಂತಹ ಎಲ್ಲರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಸನೀ ಲಿಯೋನ್‍ಳ ಜಾಲತಾಣವನ್ನು ನಿಷೇಧಿಸಿ ಸನಿ ಲಿಯೋನ್‍ಳನ್ನು ತಕ್ಷಣ ಭಾರತದಿಂದ ಹೊರಗೆ ತಳ್ಳಬೇಕು, ಮುಂತಾದ ಬೇಡಿಕೆಗಳನ್ನು ಮಾಡಲಾಗಿದೆ.

Leave a Reply

Please enter your comment!
Please enter your name here