ಪಿಲಿಕುಲ ಕೆರೆಗೆ ಮೀನುಗಳ ಬಿಡುಗಡೆ

ಮಂಗಳೂರು: ಪಿಲಿಕುಳ ದೋಣಿ ವಿಹಾರದ ಸುಮಾರು 7 ಎಕೆರೆ ವಿಸ್ತೀರ್ಣದ ವಿಶಾಲವಾದ ಕೆರೆಯಲ್ಲಿ ಸುಮಾರು 20,000 ಮೀನುಮರಿಗಳನ್ನು ಯುವ ಸಬಲೀಕರಣ, ಕ್ರೀಡೆ ಮತ್ತು ಮೀನುಗಾರಿಕೆ ರಾಜ್ಯ ಸಚಿವ ಕೆ ಅಭಯಚಂದ್ರ ಜೈನ್ ಅವರ ನೇತೃತ್ವದಲ್ಲಿ ಭಾನುವಾರ ನೀರಿಗೆ ಬಿಡಲಾಯಿತು.

1-pilikula-fish 2-pilikula-fish-001 3-pilikula-fish-002

 

ಈ ಸಂದರ್ಭದಲ್ಲಿ ದ.ಕ ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ, ಜಿಲ್ಲಾ ಪಂಚಾಯತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಐ. ಶ್ರೀವಿದ್ಯಾ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎಸ್ ಎ ಪ್ರಭಾಕರ ಶರ್ಮ, ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಎಂ. ಡಿ. ಪ್ರಸಾದ್, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಕಾಂತರಾಜ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಗೋಕುಲ್‍ದಾಸ್ ನಾಯಕ್, ಪಿಲಿಕುಳ ನಿಸರ್ಗಧಾಮದ ಆಡಳಿತ ಸಮಿತಿ ಸದಸ್ಯರಾದ ಎನ್. ಜಿ ಮೋಹನ್, ಶ್ರೀ ಸುಬ್ಬಯ ಶೆಟ್ಟಿ, ಡಾ|| ಚಂದ್ರಶೇಖರ ಚೌಟ ಮತ್ತಿತ್ತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪಿಲಿಕುಳದ ಕೆರೆಯಲ್ಲಿ ಮೀನುತಳಿಗಳನ್ನು ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಅನೇಕ ವರ್ಷಗಳಿಂದಲೂ ಸಲಹೆ ನೀಡುತ್ತಿರುವ ಡಾ. ನಝೀರ್ ಅವರನ್ನು ಸಚಿವರು ಸನ್ಮಾನಿಸಿದರು.

Leave a Reply