ಪುತ್ತೂರು: ಜುವೆಲರಿಗೆ ನುಗ್ಗಿ ಅಪರಿಚಿತರಿಂದ ಗುಂಡು ಹಾರಾಟ

ಪುತ್ತೂರು: ಜುವೆಲರಿ ಅಂಗಡಿಯೊಂದಕ್ಕೆ ನುಗ್ಗಿದ ಇಬ್ಬರು ಅಪರಿಚಿತ ವ್ಯಕ್ತಿ ಗುಂಡು ಹಾರಿಸಿ ಪರಾರಿಯಾದ ಘಟನೆ ಪುತ್ತೂರು ರಾಜಧಾನಿ ಜುವೆಲರ್ಸ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.

gunshoot_mangalore 06-10-2015 21-41-019 gunshoot_mangalore 06-10-2015 21-41-18 gunshoot_mangalore 06-10-2015 21-41-020

ಪ್ರತ್ಯಕ್ಷಿದರ್ಶಿಗಳ ಪ್ರಕಾರ ಮಂಗಳವಾರ ಸಂಜೆ ಜುವೆಲರಿ ಅಂಗಡಿಗೆ ನುಗ್ಗಿದ ಇಬ್ಬರು ಬೈಕಿನಲ್ಲಿ ಬಂದಿದ್ದು, ಕಪ್ಪು ಬಣ್ಣದ ಟಿ ಶರ್ಟುಗಳನ್ನು ಧರಿಸಿದ್ದು, 2 ಸುತ್ತು ಗುಂಡು ಹಾರಿಸಿ ಸ್ಥಳದಿಂದ ನಾಪತ್ತಿಯಾಗಿದ್ದಾರೆ.ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಪ್ರಾಣ ಹಾನಿ ಅಥವಾ ಗಾಯಗಳಾಗಿಲ್ಲ ಅಲ್ಲದೆ ಗುಂಡು ಹಾರಿಸಿದ ನಿಜವಾದ ಕಾರಣ ಕೂಡ ತಿಳಿದು ಬಂದಿಲ್ಲ.
ಸ್ಥಳಕ್ಕೆ ಪುತ್ತೂರು ಪೋಲಿಸರು ಭೇಟಿ ನೀಡಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply

Please enter your comment!
Please enter your name here