ಪುತ್ತೂರು: ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ   ಹೊಡೆದಾಟ   ಆಸ್ಪತ್ರೆಗೆ ದಾಖಲು

ಪುತ್ತೂರು: ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಹಾಗೂ ಹೊಡೆದಾಟ ನಡೆದು ಆಸ್ಪತ್ರೆಗೆ ದಾಖಲಾದ ಘಟನೆ ಪುತ್ತೂರು ತಾಲೂಕಿನ ಕುಂಜೂರುಪಂಜ ಮತಗಟ್ಟೆಯಲ್ಲಿ ನಡೆದಿದೆ.

ಗಾಯಗೊಂಡವರನ್ನು ಬಿಜೆಪಿ ಬೆಂಬಲಿತ ಶಿವಪ್ಪ ನಾಯ್ಕ ಹಾಗೂ ಕಾಂಗ್ರೆಸ್ ಬೆಂಬಲಿತ ಭವಾನಿ ಎಂದು ಗುರುತಿಸಲಾಗಿದೆ.

ಭವಾನಿ ಅವರು ತನ್ನ ಸಹೋದರ ಅವರೊಂದಿಗೆ ಮಾತನಾಡುವ ಸಲುವಾಗಿ ಕುಂಜೂರುಪಂಜಕ್ಕೆ ಆಗಮಿಸಿದ್ದು, ಮಾತನಾಡಿ ತೆಂಕಿಲಕ್ಕೆ ಹೋಗಲು ಬಸ್ಸನ್ನು ಕಾಯುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಶಿವಪ್ಪ ನಾಯ್ಕ ಭವಾನಿ ಅವರನ್ನು ಅವಾಚ್ಯಾ ಮಾತುಗಳಿಂದ ಬೈದು ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

Leave a Reply