ಪೆರ್ಡೂರು- ಸಚಿವರಿಂದ 5.50 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ

ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರು ಬುಧವಾರ ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 5.50 ಕೋಟಿ ರೂ ಮೊತ್ತದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ನೆರವೇರಿಸಿದರು.

Kukkehalli

ಪೆರ್ಡೂರು ಗ್ರಾಮದಲ್ಲಿ ಗ್ರಾಮೀಣ ಸಂತೆ ನಿರ್ಮಾಣದ 23.77 ಲಕ್ಷ ರೂ ಮೊತ್ತದ ಕಾಮಗಾರಿಗೆ ಶಿಲಾನ್ಯಾಸ, ಮುಕುಡಜೆಡ್ಡು ದೇವಸ್ಯ-ಕುಕ್ಕುಂಜಾರು ಮಂಜರಬೆಟ್ಟು ನಲ್ಲಿ 4.75 ಕೋಟಿ ವೆಚ್ಚದ ರಸ್ತೆ ಉದ್ಘಾಟನೆ, ಬಜ್ಜಾಲು ಕಟ್ಟೆಗೆ ಹೋಗುವ  ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ ಮೊತ್ತದ ಕಾಮಗಾರಿ ಶಿಲಾನ್ಯಾಸ, ಪಳಜೆ ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿ 15 ಲಕ್ಷ ರೂ ಕಾಮಗಾರಿ ಶಿಲಾನ್ಯಾಸ, ಮುಟ್ಟಿಬೈಲು ಹತ್ರಕಟ್ಟೆ ಪ.ಪಂಗಡ ಕಾಲೋನಿ ರಸ್ತೆ ಅಭಿವೃದ್ಧಿ 8 ಲಕ್ಷ ರೂ ಕಾಮಗಾರಿ ಶಿಲಾನ್ಯಾಸ, ಮುಟ್ಟಿಬೈಲು ಎಸ್.ಟಿ. ಕಾಲನಿ ರಸ್ತೆ ಕಾಂಕ್ರೀಟೀಕರಣ 10 ಲಕ್ಷ  ರೂ ಕಾಮಗಾರಿ ಶಿಲಾನ್ಯಾಸ ಸೇರಿದಂತೆ ಒಟ್ಟು 5.50 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.

 ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ  ಸುಧಾಮ ಶೆಟ್ಟಿ, ಉಡುಪಿ ತಾ.ಪಂ ಅಧ್ಯಕ್ಷೆ ನಳಿನಿ ಪ್ರದೀಪ್,ಜಿ.ಪಂ. ಸದಸ್ಯ ಸುಧಾಕರ ಶೆಟ್ಟಿ, ಪೆರ್ಡೂರು  ಗ್ರಾ.ಪಂ. ಅಧ್ಯಕ್ಷ ಶಾಂಭವಿ ಕುಲಾಲ್,  ಉಪಾಧ್ಯಕ್ಷ ಸುರೇಶ್ ಶೇರಿಗಾರ್, ತಾ.ಪಂ. ಸದಸ್ಯ ಸುಭಾಷ್ ನಾಯಕ್,  , ವಿವಿಧ ಇಲಾಖೆಯ ಅಧಿಕಾರಿಗಳು,  ಮತ್ತಿತರರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here