ಪೋಲಿಸ್ ಆಯುಕ್ತರ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ 28 ಕರೆಗಳಿಗೆ ಸ್ಪಂದನೆ

ಪೋಲಿಸ್ ಆಯುಕ್ತರ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ 28 ಕರೆಗಳಿಗೆ ಸ್ಪಂದನೆ

ಮಂಗಳೂರು: ನಗರ ಪೋಲಿಸ್ ಆಯುಕ್ತ ಚಂದ್ರಶೇಖರ್ ಶುಕ್ರವಾರ ಸಾರ್ವಜನಿಕರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮದ ಮೂಲಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಒಟ್ಟು 28 ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕರ ಸಮಸ್ಯೆ, ಸಲಹೆ, ಭಾತ್ಮಿ ಗಳಿಗೆ ಸ್ಪಂದಿಸಿದರು.

phone-in-programme

ಕರೆಗಳಲ್ಲಿ ಹೆಚ್ಚಿನವು ಟ್ರಾಫಿಕ್ ಸಮಸ್ಯೆಗೆ ಸಂಬಂಧಪಟ್ಟದಾಗಿರುತ್ತದೆ. ಇದರಲ್ಲಿ ಪಂಪ್ ವೆಲ್ ನಿಂದ ಕಂಕನಾಡಿಗೆ ಹೋಗವ ರಸ್ತೆಯಲ್ಲಿ ಗುಂಡಿಗಳು ಇದುದ್ದರಿಂದ ಆಗುವ ಟ್ರಾಪಿಕ್ ಸಮಸ್ಯೆಯ ಬಗ್ಗೆ , ಶಾಲಾ/ಕಾಲೇಜುಗಳ ಬಳಿ ಬಸ್ಸುಗಳಲ್ಲಿ ಕರ್ಕಶ ಹಾರ್ನ್ ಗಳನ್ನು ಬಳಸುತ್ತಿರುವ ಮೇಲೆ ಕ್ರಮ ಕೈಗೊಳ್ಳುವ ಕುರಿತು, ಬಜಾಲ್ ಬೈಪಾಸ್, ಕಲ್ಲಾಪು, ಮದನಿ ಎಂಬಲ್ಲಿ ಇರಿಸಲಾದ ಬ್ಯಾರಿಕೇಡ್‌‌ಗಳಿಗೆ ರಿಫ್ಲಕ್ಟರ್ ಆಳವಡಿಸುವ ಕುರಿತು, ನಂತೂರು ಪದವು ರಸ್ತೆಯ ಬದಿಯಲ್ಲಿ ಆಟೋ, ಲಾರಿ, ಬಸ್ಸುಗಳನ್ನು ರಿಪೇರಿಗಾಗಿ ನಿಲ್ಲಿಸುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುವ ಕುರಿತು, ಸೆಂಟ್ರಲ್ ಮಾರ್ಕೆಟ್ ಪಾರ್ಕಿಂಗ್ ಸಮಸ್ಯೆಯ ಕುರಿತು ಕರೆಗಳನ್ನು ಮಾಡಿರುತ್ತಾರೆ.

ಬಹಳಷ್ಟು ಜನರು ಸಿಟಿ/ ಸರ್ವಿಸ್ ಬಸ್ಸುಗಳನ್ನು ಪ್ರಯಾಣಿಕರನ್ನು ಹತ್ತಿಸಲು ರಸ್ತೆ ಮಧ್ಯದಲ್ಲಿ ನಿಲ್ಲಿಸುವುದರಿಂದ ಇತರ ವಾಹನಗಳಿಗೆ ತೊಂದರೆ ಯಾಗುತ್ತಿರುವ ಕುರಿತು ತಿಳಿಸಿರುತ್ತಾರೆ. ಚಿಲಿಂಬಿಯಲ್ಲಿ ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಪಾದಾಚಾರಿಗಳಿಗೆ ತೊಂದರೆ ಯಾಗುತ್ತಿರುವ ಬಗ್ಗೆ, ಚಿತ್ರಾಪುರ ಬೀಚ್ ರೋಡ್ ರಸ್ತೆ ಬದಿಯಲ್ಲಿ ಲಾರಿ ಪಾರ್ಕಿಂಗ್ ಮಾಡುತ್ತಿರುವ ಬಗ್ಗೆ, ವಾಹನಗಳಲ್ಲಿ ಹೈ-ಬೀಮ್ ದೀಪವನ್ನು ಹಾಕುವವರ ವಿರುದ್ದ ಕ್ರಮ ಕೈಗೊಳ್ಳುವ ಕುರಿತಂತೆ ಈ ದಿನದ ಫೋನ್ ಇನ್ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರ ಗಮನವನ್ನು ಸೆಳೆದಿರುತ್ತಾರೆ.

ಅದಲ್ಲದೇ ಮೀಟರ್ ಬಡ್ಡಿ, ಬೆಟ್ಟಿಂಗ್ ಮತ್ತು ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ಶಾಲಾ ಮಕ್ಕಳಿಗೆ ಸಂಚಾರ ಸುರಕ್ಷತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಮತ್ತು ಠಾಣಾ ಮಟ್ಟದಲ್ಲಿ ಮೊಹಲ್ಲಾಗಳ ಸಭೆಗಳು ಪರಿಣಾಮಕಾರಿಯಾಗಿ ನಡೆಸುವಂತೆ ಮನವಿ ಮಾಡಿರುತ್ತಾರೆ. ಕರೆ ಮಾಡಿದ 2 ಜನ ಸಾರ್ವಜನಿಕರು ಈಗಾಗಲೇ ಠಾಣೆಯಲ್ಲಿ ದಾಖಲಾದ ದೂರಿನ ಬಗ್ಗೆ ಮಾಹಿತಿ ನೀಡಿ, ತನಿಖೆಯ ಬಗ್ಗೆ ಮಾಹಿತಿ ಪಡೆದಿರುತ್ತಾರೆ.

ಕರೆ ಮಾಡಿದವರಲ್ಲಿ ಉಳಿದವರು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿದ್ಯಾದಾಯಿನಿ ವಿದ್ಯಾ ಸಂಸ್ಥೆಯ ಬಳಿಯ ಅಂಡರ್ ಪಾಸ್ ಬಳಕೆ ಮಾಡುವಂತೆ ಮಾಡಿದ ಟ್ರಾಫಿಕ್ ಅಧಿಕಾರಿ ಮತ್ತು ಸಿಬ್ಬಂದಿ, ಅಕ್ರಮ ಮರಳು ಸಾಗಟ, ಗಾಂಜಾ ಸೇವನೆ ಮಾಡುವವರ ವಿರುದ್ದ ಕ್ರಮ ಕೈಗೊಂಡಿರುವ ಬಗ್ಗೆ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನವನ್ನು ಮಾಡುವವರ ವಿರುದ್ದ ಕ್ರಮ ಕೈಗೊಂಡು ಉತ್ತಮ ಕಾರ್ಯ ಕೈಗೊಂಡಿರುವ ಬಗ್ಗೆ ಕಮೀಷನರೇಟ್‌ನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಶ್ಲಾಘಿಸಿರುತ್ತಾರೆ.

Leave a Reply

Please enter your comment!
Please enter your name here