ಪ್ರಕಟಣೆ:  ಕೆಪಿಟಿ : ಅಂಕ ಪಟ್ಟಿ ಪಡೆಯಲು ಸೂಚನೆ

ಮ0ಗಳೂರು : ಕೆಪಿಟಿ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಕೆಲವೊಂದು ಅಂಕಪಟ್ಟಿಗಳು ಪಡೆದುಕೊಳ್ಳದೆ ಉಳಿದುಕೊಂಡಿದ್ದು, ಅಭ್ಯರ್ಥಿಗಳು ಇದುವರೆಗೆ ಪಡೆದುಕೊಳ್ಳದಿರುವ ಅಂಕಪಟ್ಟಿಗಳನ್ನು ಕಛೇರಿಯಿಂದ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಅನಾನುಕೂಲತೆಗಳಿಗೆ ಸಂಬಂಧಪಟ್ಟ ವಿದ್ಯಾರ್ಥಿಗಳೇ ಹೊಣೆಯಾಗಿರುತ್ತಾರೆ. ಎಂದು  ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು ಪ್ರಕಟಣೆ ತಿಳಿಸಿದೆ.

ತುಳು ಕವನ ರಚನಾ ಕಮ್ಮಟ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ತುಳು ಕವನ ರಚನಾ ಕಮ್ಮಟವನ್ನು ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಹಮ್ಮಿಕೊಂಡಿದೆ. ಗೋವಿಂದದಾಸ ಕಾಲೇಜು, ಸುರತ್ಕಲ್ ಇಲ್ಲಿ ನಡೆಯಲಿರುವ ಈ ಕಮ್ಮಟದಲ್ಲಿ ಆಸಕ್ತ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಆಸಕ್ತರು ತಮ್ಮ ಹೆಸರು, ಕಾಲೇಜಿನ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಇವುಗಳ ವಿವರ ಮತ್ತು ಕಾಲೇಜಿನ ಪ್ರಾಂಶುಪಾಲರ ದೃಢೀಕರಣ ಪತ್ರದೊಂದಿಗೆ ಫೆ. 27 ರೊಳಗೆ ಹೆಸರು ನೋಂದಾಯಿಸಿ ಕೊಳ್ಳಬಹುದು. ಸಂಪರ್ಕ ವಿಳಾಸ: ಪಿ, ಕೃಷ್ಣಮೂರ್ತಿ, ಉಪಪ್ರಾಂಶುಪಾಲರು, ಗೋವಿಂದದಾಸ ಕಾಲೇಜು, ಸುರತ್ಕಲ್, ಸಂಪರ್ಕ ಸಂಖ್ಯೆ: 9449510848, 9480347065 ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ.

ಫೆ.9 ರಂದು ರತ್ನಾಕರವರ್ಣಿ 500ರ ನೆನಪು ಕಾರ್ಯಕ್ರಮ

ಮಂಗಳೂರು ವಿಶ್ವವಿದ್ಯಾನಿಲಯ ಪ್ರಸಾರಾಂಗದ ವತಿಯಿಂದ ಮಂಗಳೂರು ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕವಿ ರತ್ನಾಕರವರ್ಣಿಯ 500ನೇ ವರ್ಷದ ನೆನಪು ಕಾರ್ಯಕ್ರಮ ನಡೆಯಲಿದೆ. ಪ್ರಸಾರಾಂಗದ ರಜತ ಸಂಭ್ರಮದ ಮಂಗಳ ಪ್ರಚಾರೋಪನ್ಯಾಸ ಮಾಲಿಕೆಯಡಿ ನಡೆಯಲಿರುವ ಈ ಕಾರ್ಯಕ್ರಮ ಫೆ.9 ಮಂಗಳವಾರದÀಂದು ಅಪರಾಹ್ನ 2.30 ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ‘ರತ್ನಾಕರವರ್ಣಿಯ ವಿಚಾರ ಪ್ರಸ್ತುತತೆ’ ಎಂಬ ವಿಷಯದಲ್ಲಿ ಮೂಡುಬಿದಿರೆಯ ಜೈನ ಪ್ರೌಢಶಾಲೆಯ ಅಧ್ಯಾಪಕ ಮುನಿರಾಜ ರೆಂಜಾಳ ಉಪನ್ಯಾಸ ನೀಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಪ್ರ. ರಾಜಶೇಖರ ಹೆಬ್ಬಾರ್ ಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶಚಂದ್ರ ಶಿಶಿಲ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಪ್ರಸಾರಾಂಗದ ಪ್ರಕಟಣೆಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಿವಿ ಪ್ರಸಾರಾಂಗ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here