ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಕೊಡುವುದಾಗಿ ವಂಚನೆ : ಇಬ್ಬರ ಬಂಧನ

ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಕೊಡುವುದಾಗಿ ವಂಚನೆ : ಇಬ್ಬರ ಬಂಧನ

ಮಂಗಳೂರು: ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ದೊರಕಿಸಿಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ಇಬ್ಬರನ್ನು ನಗರ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಮಡಿಕೇರಿ ನಿವಾಸಿ ತಿಮ್ಮಯ್ಯ ಹಾಗೂ ಆತನ ಸಹಚರ ತಮಿಳುನಾಡು ನಿವಾಸಿ ಸಂಜೀವ ಕುಮಾರ್ ಎಂದು ಗುರುತಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ನಗರ ಪೋಲಿಸ್ ಕಮೀಷನರ್ ಚಂದ್ರಶೇಖರ್ ಅವರು ಮಂಗಳೂರು ನಗರದಲ್ಲಿ ವಿವಿಧ ಸರಕಾರಿ ಮತ್ತು ಖಾಸಗಿ ತಾಂತ್ರಿಕ ಕೋರ್ಸ್ ಗಳು, ಕಾಲೇಜು/ಯುನಿವರ್ಸಿಟಿಗಳು ಇದ್ದು, ದಶಕಗಳಿಂದ ಮಂಗಳೂರು ವಿದ್ಯಾ ನಗರಿ ಎಂದು ಪ್ರಸಿದ್ದಿ ಪಡೆದಿದೆ.

ಇಂತಹ ಪ್ರತಿಷ್ಠಿತ ಕಾಲೇಜುಗಳಲ್ಲಿ ತಮ್ಮ ಮಕ್ಕಳನ್ನು ಓದಿಸಲು ಹಲವಾರು ಪೋಷಕ /ಪಾಲಕರು ಪ್ರಯತ್ನ ಪಡುತ್ತಾರೆ. ತಮ್ಮ ಮಕ್ಕಳು ಮೆರಿಟ್ ಸೀಟ್ ಪಡೆಯದೇ ಹೋದಾಗ ಮ್ಯಾನೇಜ್ ಮೆಂಟ್ ಸೀಟಗ ಗೆ ಪ್ರಯತ್ನ ಪಡುತ್ತಾರೆ. ಈ ಪರಿಸ್ಥಿತಿಯ ದುರ್ಲಾಭವನ್ನು ಮಂಗಳೂರಿನಲ್ಲಿ ಕೆಲವು ವ್ಯಕ್ತಿಗಳು ಪಡೆದುಕೊಂಡು ಮಕ್ಕಳಿಗೆ ಸೀಟ್ ಕೊಡಿಸುವುದಾಗಿ ತಿಳಿಸಿ ಪೋಷಕ /ಪಾಲಕರಿಂದ ಹಣ ಪಡೆದುಕೊಂಡು ಅವರಿಗೆ ಸೀಟ್ ಕೊಡಿಸದೇ ಮೋಸ ಮಾಡಿರುವುದು ಕಂಡು ಬರುತ್ತದೆ.

sanjeevakumar-thimmayya-20160918

ನಗರ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಇತ್ತೀಚಿನವರೆಗೆ ಕೋಆರ್ಡಿನೇಟರ್ ಎಂದು ಕೆಲಸ ನಿರ್ವಹಿಸುತ್ತಿದ್ದ ತಿಮ್ಮಯ್ಯ ವಾಸ- ಬಿಳಿಗಿರಿ ಗ್ರಾಮ ಮಡಿಕೇರಿ ಮತ್ತು ಅವರ ಸಹಚರ ಸಂಜೀವ ಕುಮಾರ್, ವಾಸ ರೋಡ್ ಜಿಲ್ಲೆ ತಮಿಳನಾಡು ಎಂಬವರು ಇಂತಹ ಒಂದು ಜಾಲವನ್ನು ಹೆಣೆದು ಹದಿನಾರು ವಿದ್ಯಾರ್ಥಿಗಳ ಪೋಷಕರಿಂದ ಸುಮಾರು 2.82 ಕೋಟಿ ಹಣವನ್ನು ಪಡೆದು ಅವರಿಗೆ ಪಂಗ ನಾಮ ಹಾಕಿದ್ದು, ಬೆಳಕಿಗೆ ಬಂದಿದೆ.

ಪ್ರಕರಣದ ಆರೋಪಿಯಾದ ಸಂಜೀವ ಕುಮಾರ್ ಈತನು ತಮಿಳುನಾಡಿನ ಈರೋಡ್ ನಲ್ಲಿ ಒಂದು ಕನ್ಸಲ್ಟೆನ್ಸಿ ಹೊಂದಿರುತ್ತಾನೆ. ಆ ಏಜೆನ್ಸಿ ಮೂಲಕ ತಮಿಳುನಾಡು ಕಡೆಯ ವಿದ್ಯಾರ್ಥಿ ಪೋಷಕರುಗಳನ್ನು ತನ್ನೆಡೆಗೆ ಆಕಷರ್ಿಸಿ ಸೀಟು ಕೊಡಿಸುವುದಾಗಿ ನಂಬಿಸಿ ಅವರು ಇತ್ತೀಚಿನ ವರೆಗೆ ಖಾಸಗಿ ಮೆಡಿಕಲ್ ಕಾಲೇಜ್ ಒಂದರಲ್ಲಿ ಕೋಆರ್ಡಿನೇಟರ್ ಆಗಿದ್ದಂತಹ ತಿಮ್ಮಯ್ಯ ಅವರೊಡನೆ ಸಂಪರ್ಕಿರುತ್ತಾನೆ. ಈ ತಿಮ್ಮಯ್ಯ ಬಂದ ಪೋಷಕರುಗಳನ್ನು ಆ ಕಾಲೇಜಿನ ಪರಿಚಯ ಮಾಡಿಸಿಕೊಟ್ಟಂತೆ ಅವರನ್ನು ಕಾಲೇಜಿನಲ್ಲಿ ತಿರುಗಾಡಿಸಿ ಅವರಲ್ಲಿ ನಂಬಿಕೆ ಮೂಡಿಸಿರುತ್ತಾನೆ. ನಂತರ ಈ ಶೈಕ್ಷಣಿಕ ವರ್ಷದಿಂದಲೇ ಸೀಟು ಕೋಡಿಸುವುದಾಗಿ ಅವರಿಗೆ ಭರವಸೆ ನೀಡಿ ಅವರಿಂದ ಲಕ್ಷಾಂತರ ರೂ ಹಣ ಪಡೆದು ಯಾವುದೇ ಸೀಟು ಕೊಡಿಸದೇ ಮೋಸ ಮಾಡುತ್ತಾರೆ. ಬಂದಂತಹ ಹಣವನ್ನು ತಿಮ್ಮಯ್ಯ ಮತ್ತು ಪ್ರಕರಣದ ಇನ್ನೊಬ್ಬ ಆರೋಪಿ ಸಂಜೀವ ಕುಮಾರ್ ಗೆ ಭಾಗಶಃ ಹಣವನ್ನು ನೀಡಿದ್ದು, ಉಳಿದ ಹಣವನ್ನು ಆತ ಬೇರೆ ಬೇರೆ ಕಡೆ ಹೂಡಿಕೆ ಮಾಡಿರುತ್ತಾನೆ.

ಈ ಸಂಬಂಧವಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈವರೆಗೆ ಏಳು ಪ್ರಕರಣಗಳು ದಾಖಲಾಗಿದ್ದು, ಪ್ರಕರಣದ ತನಿಖೆ ಕೈಗೊಂಡ ಹೆಚ್. ಶಿವ ಪ್ರಕಾಶ್ ಹಾಗೂ ಠಾಣೆಯ ಇತರ ಸಿಬ್ಬಂದಿಗಳು ಧಾಳಿ ನಡೆಸಿ ಈ ದಿನ ಬೆಳಿಗ್ಗೆ 4-00 ಗಂಟೆಗೆ ಕುಂಟಿಕಾನ ಬಳಿ ಆರೋಪಿಗಳನ್ನು ಬಂಧಿಸಿ 37.5 ಲಕ್ಷ ಹಣ ಹಾಗೂ ಫ್ಯಾಬಿಯಾ ಕಾರನ್ನು ವಶಪಡಿಸಿಕೊಂಡಿರುತ್ತಾರೆ.

ಪ್ರಕರಣದಲ್ಲಿ ತನಿಖೆ ಮುಂದುವರಿದಿದೆ. ಈ ಹದಿನಾರು ವಿದ್ಯಾರ್ಥಿಗಳ ಪೋಷಕರಲ್ಲದೇ ಬೇರೆ ಯಾರಾದರೂ ಮ್ಯಾನೇಜ್ಮೆಂಟ್ ಸೀಟ್ ಪಡೆಯಲು ಹೋಗಿ ಮೋಸ ಹೋಗಿದ್ದಲ್ಲಿ ಕೂಡಲೇ ಪ್ರಕರಣ ದಾಖಲಿಸಲು ವಿನಂತಿಸಿದ್ದಾರೆ..

Leave a Reply

Please enter your comment!
Please enter your name here