ಪ್ರಧಾನಿ ಮೋದಿ ಮೆಚ್ಚುಗೆ ಪಡೆದ ಸುಪ್ರಭಾ

ಪ್ರಧಾನಿ ಮೋದಿ ಮೆಚ್ಚುಗೆ ಪಡೆದ ಸುಪ್ರಭಾ

ಮಂಗಳೂರು: ಮೂಲತಃ ಮಂಗಳೂರಿನ ಸದ್ಯ ಬೆಂಗಳೂರಿನ ಆರ್. ವಿ ಕಾಲೇಜಿನ ಮೂರನೇ ವರ್ಷದ ಕೆಮಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸುಪ್ರಭಾ ಕೆ. ಗಣರಾಜ್ಯೋತ್ಸವ ಕ್ಯಾಂಪಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ರಚಿಸಿ ಪ್ರಧಾನಿಯವರಿಗೆ ಹಸ್ತಾಂತರಿಸಿದರು.

ಸುಪ್ರಭಾರ ಪ್ರತಿಭೆಯನ್ನು ಕೊಂಡಾಡಿದ ಮೋದಿ, ಆಕೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಣರಾಜ್ಯೋತ್ಸವ ಕ್ಯಾಂಪಿಗೆ ಆರ್ ವಿ ಕಾಲೇಜಿನಿಂದ ಏಕೈಕ ಪ್ರತಿನಿಧಿಯಾಗಿದ್ದ ಸುಪ್ರಭಾ, ಮಂಗಳೂರಿನ ಛಾಯಾಗ್ರಾಹಕ ಕರುಣಾಕರ ಕಾನಂಗಿ, ಸುಜಾತ ಕೆ ದಂಪತಿಯ ಪುತ್ರಿ. ಕೆನರಾ ಹೈಸ್ಕೂಲ್ ಉರ್ವದಲ್ಲಿ ಪ್ರಾಥಮಿಕ ಶಿಕ್ಷಣ, ಮಹೇಶ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾರೆ

Leave a Reply

Please enter your comment!
Please enter your name here