ಪ್ರಾಮಾಣಿಕತೆ ಮರೆದ ರಿಕ್ಷಾ ಚಾಲಕನಿಗೆ ಕಮೀಷನರ್ ಬಹುಮಾನ

ಪ್ರಾಮಾಣಿಕತೆ ಮರೆದ ರಿಕ್ಷಾ ಚಾಲಕನಿಗೆ ಕಮೀಷನರ್ ಬಹುಮಾನ

ಮಂಗಳೂರು: ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ರೂ ಐದು ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗನ್ನು ರಿಕ್ಲಾ ಚಾಲಕರೋರರ್ವರು ಪೋಲಿಸರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

pratap-shetty-auto-driver-20160826 pratap-shetty-auto-driver1-20160826

ಬೆಂಗಳೂರಿನ ದೀಪ್ತಿ ಎಂಬವರು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಕುಳಾಯಿಗೆ ಕಾರ್ಯಕ್ರಮಕ್ಕೆ ತೆರಳುವ ಸಲುವಾಗಿ ಪ್ರತಾಪ್ ಶೆಟ್ಟಿ ಎನ್ನುವವರ ಆಟೋದಲ್ಲಿ ತೆರಳಿದ್ದು, ಇಳಿಯುವ ವೇಳೆ ಅವರು ಚಿನ್ನಾಭರಣದ ಬ್ಯಾಗನ್ನು ಆಟೋದಲ್ಲಿಯೇ ಮರೆತು ಹೋಗಿದ್ದರು. ಇದನ್ನು ಗಮನಿಸಿದ ರಿಕ್ಷಾ ಚಾಲಕ ಪ್ರತಾಪ್ ಶೆಟ್ಟಿ ಬ್ಯಾಗನ್ನು ಮಂಗಳೂರು ಉತ್ತರ ಠಾಣಾ ಪೋಲಿಸರಿಗೆ ಹಸ್ತಾಂತರಿಸಿದ್ದರು.

ರಿಕ್ಷಾ ಚಾಲಕನ ಪ್ರಾಮಾಣಿಕತೆಯನ್ನು ಗುರುತಿಸಿದ ಪೋಲಿಸ್ ಕಮೀಷನರ್ ಪ್ರತಾಪ್ ಶೆಟ್ಟಿಯವರಿಗೆ ಐದು ಸಾವಿ ನಗದು ಬಹುಮಾನ ನೀಡಿ ಅಭಿನಂಧಿಸಿದ್ದಾರೆ. ಬ್ಯಾಗನ್ನು ಸಂಬಂಧಪಟ್ಟ ವಾರಿಸುದಾರರಿಗೆ ಮರಳಿಸಲಾಗಿದೆ

Leave a Reply

Please enter your comment!
Please enter your name here