ಪ್ರೀತಿ ಕೀರ್ತಿ ಡಿಸೋಜಾ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್

ಪ್ರೀತಿ ಕೀರ್ತಿ ಡಿಸೋಜಾ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಕಾಮರ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ಪ್ರೀತಿಕೀರ್ತಿ ಡಿಸೋಜಾ ಅವರಿಗೆ, ‘ಟ್ಯಾಲೆಂಟ್ ಮ್ಯಾನೇಜ್‍ಮೆಂಟ್-ಎ ಸ್ಟಡಿ ಆಫ್ ಟೀಚರ್ಸ್ ಇನ್ ಸೆಲೆಕ್ಟೆಡ್ ಸ್ಟೇಟ್ ಯುನಿವರ್ಸಿಟೀಸ್ ಆಫ್ ಕರ್ನಾಟಕ’ ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.

preethi-dsouza

ಈಗಾಗಲೇ ದೇಶ ವಿದೇಶಗಳ ಹಲವಾರು ವಿಚಾರಸಂಕಿರಣಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿರುವ ಪ್ರೀತಿ ಕೀರ್ತಿ ಡಿಸೋಜಾ ಅವರು, ಮಂಗಳೂರು ವಿಶ್ವ ವಿದ್ಯಾಲಯದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗದ ಪ್ರೊಫೆಸರ್ ಪ್ರೊ. ಪಿ ಪಕೀರಪ್ಪ ಅವರ ಮಾರ್ಗದರ್ಶನದಲ್ಲಿ ಈ ಪಿಹೆಚ್‍ಡಿ ಪದವಿ ಗಳಿಸಿದ್ದಾರೆ. ಭೂತಾನ್‍ನ ರಾಯಲ್ ವಿಶ್ವವಿದ್ಯಾಲಯದಲ್ಲಿಯೂ ಇವರು ಸಂದರ್ಶಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದು, ಓರ್ವ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ.

Leave a Reply