ಪ್ಲಾಸ್ಟಿಕ್‍ ಮುಕ್ತ ಪರಿಸರ ನಿರ್ಮಾಣ ಬಹುದೊಡ್ಡ ಸವಾಲು-ಪ್ರಿಯಾಂಕಾ ಮೇರಿ ಪ್ರಾನ್ಸಿಸ್

ಪ್ಲಾಸ್ಟಿಕ್‍ ಮುಕ್ತ ಪರಿಸರ ನಿರ್ಮಾಣ ಬಹುದೊಡ್ಡ ಸವಾಲು-ಪ್ರಿಯಾಂಕಾ ಮೇರಿ ಪ್ರಾನ್ಸಿಸ್

ಉಡುಪಿ : ಪ್ಲಾಸ್ಟಿಕ್ ನಿಷೇಧ ಕಾನೂನು ಜಾರಿಗೆ ಬಂದಾಗ್ಯೂ ಬಳಕೆ ಕಡಿಮೆಯಾಗಿಲ್ಲ.ಪ್ಲಾಸ್ಟಿಕ್ ಹಾಗೂ ಅದರ ಉತ್ಪನ್ನಗಳು ಪರಿಸರದ ಮೇಲೆ ಮಾರಕ ಪರಿಣಾಮಗಳನ್ನು ಬೀರಿವೆ. ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ಕಸದ ರಾಶಿಗಳೇ ಬೆಳೆದಿವೆ.ದಿನನಿತ್ಯದ ಬಳಕೆಯಲ್ಲಿ ಪ್ಲಾಸ್ಟಿಕ್‍ಚೀಲ ಹಾಗೂ ಲೋಟೆಪ್ಲೇಟ್ ಇತರ ಪರಿಕರಗಳ ಬಳಕೆಯ ನಿಷೇಧದ ಬಗ್ಗೆ ಜನಜಾಗೃತಿ ಹಾಗೂ ಪರಿಣಾಮಕಾರಿ ಪರ್ಯಾಯ ವ್ಯವಸ್ಥೆಯ ತುರ್ತು ಅಗತ್ಯವಿದೆ. ಜಿಲ್ಲಾಡಳಿತಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಬಹುದೊಡ್ಡ ಸವಾಲು ಎಂದು ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ನುಡಿದರು.
plastic-making-training plastic-making-training-00

ಅವರು ಬಂಟಕಲ್ಲು ರೋಟರಿ ಸಭಾಭವನದಲ್ಲಿ ರೋಟರಿ ಕ್ಲಬ್ ಶಿರ್ವ,ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಹಭಾಗಿತ್ವದಲ್ಲಿ ಆರು ದಿನಗಳ ಕಾಲ ಜರುಗಿದ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ “ಪೇಪರ್‍ಬ್ಯಾಗ್,ಬಟ್ಟೆ ಕೈಚೀಲ ಹಾಗೂ ಇತರ ಪ್ಲಾಸ್ಟಿಕ್ ಮುಕ್ತ ಗೃಹಉತ್ಪನ್ನಗಳ ತಯಾರಿಕಾ ತರಬೇತಿ” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ತಯಾರಿಸಿದ ಉತ್ಪನ್ನಗಳ ವಸ್ತುಪ್ರದರ್ಶನ ಉಧ್ಘಾಟಿಸಿ ಮಾತನಾಡುತ್ತಾ ರೋಟರಿ ಸ್ವಯಂಸೇವಾ ಸಂಸ್ಥೆ ಪ್ರಪ್ರಥಮ ಬಾರಿಗೆ ಸಾರ್ವಜನಿಕರಿಗಾಗಿ ಇಂತಹ ಕಾರ್ಯಕ್ರಮ ವ್ಯವಸ್ಥೆ ಮಾಡಿದ ಬಗ್ಗೆ ಅಭಿನಂದಿಸಿದರು.

ಜಿಲ್ಲಾಡಳಿತದ ವತಿಯಿಂದ 60 ಗ್ರಾಮ ಪಂಚಾಯತ್‍ಗಳಲ್ಲಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.ಆಸಕ್ತ 209 ನಿರುದ್ಯೋಗಿಗಳಿಗೆ ಪೇಪರ್,ಬಟ್ಟೆಚೀಲ ತಯಾರಿಕೆ ತರಬೇತಿ ನೀಡಲಾಗಿದೆ. ಗ್ರಾಮ ಪಂಚಾಯತ್ ಮೂಲಕ ಪಂಚಾಯತ್ ವ್ಯಾಪ್ತಿಯ ದೇವಾಲಯ,ಚರ್ಚ್,ಇನ್ನಿತರ ಧಾರ್ಮಿಕ ಕೇಂದ್ರಗಳು, ಅಂಗಡಿ ಮಾಲಿಕರನ್ನು ಭೇಟಿಯಾಗಿ ಪ್ಲಾಸ್ಟಿಕ್ ಚೀಲಗಳ ಬದಲು ಬಟ್ಟೆಚೀಲ,ಪೇಪರ್ ಚೀಲಗಳ ಬಳಕೆಗೆ ವಿನಂತಿ ಮಾಡಲಾಗುತ್ತಿದೆ.ಸ್ತ್ರೀಶಕ್ತಿ ಸಂಘಟನೆಗಳು,ಸ್ವಯಂಸೇವಾ ಸಂಘಟನೆಗಳು ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಿದ್ದಲ್ಲಿ ಪ್ಲಾಸ್ಟಿಕ್ ನಿಷೇಧ ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಅಧ್ಯಕ್ಷ ಡಾ.ಅರುಣ್ ಹೆಗ್ಡೆ ವಹಿಸಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಲೀಡ್ ಬ್ಯಾಂಕ್ ಪ್ರಬಂಧಕ ಪ್ರಾನ್ಸಿಸ್ ಬೋರ್ಗಿಯಾ,ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಸಂತೋಷ್, ರೋಟರಿ ವಲಯ ಸಹಾಯಕ ಗವರ್ನರ್ ಡಾ.ಗುರುರಾಜ್, ಶಿರ್ವ ಗ್ರಾಮ ಪಂಚಾಯತ್ ಪಿಡಿಒ ಮಮತಾ ವೈ ಶೆಟ್ಟಿ, ಭಾಗವಿಸಿದ್ದರು, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಶಿಬಿರಾರ್ಥಿ ವರೀಜಾ ಪೂಜಾರ್ತಿ,ಡೀನಾ ಕುಟಿನ್ಹೊ,ಪಾರ್ವತಿ,ಅಮಿತಾ,ವಿಮಲಾ ತಮ್ಮ ಅನಿಸಿಕೆ ತಿಳಿಸಿದರು. ಕಾರ್ಯಕ್ರಮ ಸಂಯೋಜಕ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ನೀನಾ ಶೆಟ್ಟಿ,ಶ್ರೇಯಾ, ನವ್ಯಾ ಭಾಗವಹಿಸಿದ್ದರು. ರೇಖಾ ಪ್ರಾರ್ಥಿಸಿದರು. ಶಿಕ್ಷಕಿ ಶ್ರೇಯಾ ಧನ್ಯವಾದವಿತ್ತರು.

Leave a Reply

Please enter your comment!
Please enter your name here