ಫರಂಗಿಪೇಟೆ: ಶತಮಾನೋತ್ಸವ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ

ಫರಂಗಿಪೇಟೆ: ಶತಮಾನೋತ್ಸವ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ

ಮಂಗಳೂರು: ಫರಂಗಿಪೇಟೆ ಎಜ್ಯುಕೇಶನ್ ಸೊಸೈಟಿ(ರಿ) ಅನುದಾನಿತ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಫರಂಗಿಪೇಟೆ ಇದರ ಶತಮಾನೋತ್ಸವದ ಸವಿನೆನಪಿಗಾಗಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶತಮಾನೋತ್ಸವ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಅಕ್ಟೋಬರ್ 2ರಂದು ಭಾನುವಾರ ಬೆಳಿಗ್ಗೆ 7.30ಕ್ಕೆ ಜರಗಲಿದೆ ಎಂದು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎ.ಕೆ.ಜಯರಾಮ ಶೇಕ ತಿಳಿಸಿದ್ದಾರೆ.

parnige

ಸಮಾರಂಭದಲ್ಲಿ ಅರ್ಕುಳ ಬೀಡು ಎ.ವಜ್ರನಾಭ ಶೆಟ್ಟಿ, ಮೂಡಬಿದ್ರೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಫರಂಗಿಪೇಟೆ ಚರ್ಚ್‍ನ ಮುಖ್ಯಗುರು ಫಾ.ಜೆರಾಲ್ಡ್ ಲೋಬೋ, ಅರ್ಕುಳ -ವಳಚ್ಚಿಲ್ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಹಾಜಿ.ಯಸ್.ಅಬೂಬಕ್ಕರ್ ದಾರಿಮಿ ಭಾಗವಹಿಸಲಿದ್ದಾರೆ.

Leave a Reply