ಬಂಟಕಲ್ಲು ದೇವಸ್ಥಾನಕ್ಕೆ ಶಿರ್ವ ಚರ್ಚ್ ಧರ್ಮಗುರುಗಳು, ಪಾಲನಾ ಮಂಡಳಿಯಿಂದ ಸೌಹಾರ್ದ ಭೇಟಿ

ಬಂಟಕಲ್ಲು ದೇವಸ್ಥಾನಕ್ಕೆ ಶಿರ್ವ ಚರ್ಚ್ ಧರ್ಮಗುರುಗಳು, ಪಾಲನಾ ಮಂಡಳಿಯಿಂದ ಸೌಹಾರ್ದ ಭೇಟಿ

ಉಡುಪಿ: ನವೀಕರಣಗೊಂಡಿರುವ ಬಂಟಕಲ್ಲು ದುರ್ಗಾಪರಮೇಶ್ವರಿ ದೇವಸ್ಥಾನದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಶಿರ್ವ ಆರೋಗ್ಯಮಾತಾ ಇಗರ್ಜಿಯ ಧರ್ಮಗುರುಗಳು ಮತ್ತು ಪಾಲನಾ ಮಂಡಳಿಯ ಸದಸ್ಯರು ಸೋಮವಾರ ದೇವಸ್ಥಾನಕ್ಕೆ ಭೇಟಿ ನೀಡಿ ಶುಭಾಶಯಗಳನ್ನು ಕೋರಿದರು.

ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ|ಡೆನಿಸ್ ಡೆಸಾ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಡೊನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ|ಮಹೇಶ್ ಡಿಸೋಜಾ, ಪಾಲನಾ ಸಮಿತಿಯ ಉಪಾಧ್ಯಕ್ಷರಾದ ವಿಲ್ಸನ್ ಡಿಸೋಜಾ, ಕಾರ್ಯದರ್ಶಿ ಲೀನಾ ಮಚಾದೊ, ಸದಸ್ಯರಾದ ಮೆಲ್ವಿನ್ ಡಿಸೋಜಾ, ಮೆಲ್ವಿನ್ ಆರಾನ್ಹಾ, ನೋರ್ಬರ್ಟ್ ಮಚಾದೊ ಹಾಗೂ ಇತರರು ಉಪಸ್ಥಿತರಿದ್ದರು.

ಈ ವೇಳೆ ದೇವಸ್ಥಾನದ ವತಿಯಿಂದ ಧರ್ಮಗುರುಗಳನ್ನು ಹಾಗೂ ಸದಸ್ಯರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು