ಬಂಟ್ವಾಳದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ; ವಾಹನಗಳಿಗೆ ಬದಲಿ ಮಾರ್ಗ

ಬಂಟ್ವಾಳ: ಬೆಂಗಳೂರಿಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರೊಂದು ಬಂಟ್ವಾಳ ಸೂರಿಕುಮೆರು ಬಳಿ ಮಗುಚಿ ಬಿದ್ದ ಘಟನೆ ಎಪ್ರಿಲ್ 19 ರ ಮಧ್ಯರಾತ್ರಿ ನಡೆದಿದೆ.

image001tankert-19042016-001 image002tankert-19042016-002

ಪೋಲಿಸ್ ಮೂಲಗಳ ಪ್ರಕಾರ ಎಪ್ರಿಲ್ 19 ರ ಮಧ್ಯರಾತ್ರಿ 12.30 ರ ಸುಮಾರಿಗೆ ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ಗ್ಯಾಸ್ ಟ್ಯಾಂಕರ್ ಸೂರಿ ಕುಮೆರು ಬಳಿ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದೆ.
ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿದ್ದು, ಎಮ್ ಆರ್ ಪಿ ಎಲ್ ತಂಡ ಸ್ಥಲಕ್ಕೆ ಧಾವಿಸಿದ್ದು, ಸೋರಿಕೆಯನ್ನು ತಡೆಗಟ್ಟಲು ಪ್ರಯತ್ನಿಸಿದೆ.
ಮುಂಜಾಗ್ರತಾ ಕ್ರಮವಾಗಿ ಬಂಟ್ವಾಳ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದ್ದು, ವಾಹನಗಳನ್ನು ಕಲ್ಕಡ್ಕ ವಿಟ್ಲ, ಕಬಕ ಮಾರ್ಗವಾಗಿ ತೆರಳಲು ವ್ಯವಸ್ಥೆ ಮಾಡಲಾಗಿದೆ. 10 ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು ಎಲ್ಲಾ ರೀತಿಯ ಮುಂಚಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

Leave a Reply

Please enter your comment!
Please enter your name here