ಬಂಟ್ವಾಳ: ವಿದ್ಯುತ್ ಅವಘಡಕ್ಕೆ ಯುವಕ ಬಲಿ

ಬಂಟ್ವಾಳ: ಬೆಂಗಳೂರಿನಲ್ಲಿ ಸಂಭವಿಸಿದ ವಿದ್ಯುತ್ ಅವಘಡಕ್ಕೆ ಬಂಟ್ವಾಳದ ಯವಕನು ಬಲಿಯಾಗಿರುವ ಘಟನೆಯು ಮಂಗಳವಾರ ಸಂಜೆ ನಡೆದಿದೆ.
ಈತನು ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯದ ನಿವಾಸಿ ಮಹಮ್ಮದ್ ಎಂಬುವರ ಪುತ್ರ ಮುಹಮ್ಮದ್ ಮುರ್ಶಿದ್ (23) ಅವಿವಾಹಿತ ಯುವಕನಾಗಿದ್ದಾನೆ. ಈತನು ಧಾರ್ಮಿಕ ವಿದ್ಯಾಭ್ಯಾಸದ ಜೊತೆಗೆ ಬಂಟ್ವಾಳದ ಪದವಿ ಕಾಲೇಜಿನಲ್ಲಿ, ಪದವಿ ವಿದ್ಯಾಭ್ಯಾಸವನ್ನು ಮುಗಿಸಿದ್ದು, ಕಳೆದ ವರ್ಷವಷ್ಠೇ ಬೆಂಗಳೂರಿಗೆ ತೆರಳಿ ಅಲ್ಲಿನ ಕಿಡ್ಸ್ ವೇರ್ ಮಳಿಗೆಯೊಂದರಲ್ಲಿ ಉದ್ಯೋಗಿಯಾಗಿದ್ದ.
ಎರಡು ತಿಂಗಳ ಹಿಂದೆ ಊರಿಗೆ ಬಂದು ತೆರಳಿದ್ದ ಈತನು ವಿದ್ಯುತ್ ಅವಘಡಕ್ಕೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

Leave a Reply