ಬಂಟ್ವಾಳ: ಸಭೆಯಲ್ಲಿ ಕಣ್ಣೀರಿಟ್ಟ ಸಚಿವ ರಮಾನಾಥ ರೈ

ಬಂಟ್ವಾಳ: ಕ್ಷೇತ್ರದ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಜಾತಿ, ಮತ, ಧರ್ಮದ ಭೇದವಿಲ್ಲದೆ ಹಗಲು ರಾತ್ರಿ ಶ್ರಮವಹಿಸುತ್ತಿದ್ದರೂ ಕೆಲವರು ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕಣ್ಣೀರು ಸುರಿಸಿದ ಘಟನೆ ಇಂದು ನಡೆಯಿತು.

ramanath-rai-cying

ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಬಿ.ಸಿ.ರೋಡ್ ಸಮೀಪದ ಗಾನದಪಡ್ಪು ನಾರಾಯಣ ಗುರು ಮಂದಿರ ಸಭಾಂಗಣದಲ್ಲಿ ಬುಧವಾತ ಹಮ್ಮಿಕೊಂಡ ಜಿಲ್ಲಾ ಹಾಗೂ ತಾಪಂ ಚುನಾವಣೆಗೆ ಬಂಟ್ವಾಳ ತಾಲೂಕಿನಿಂದ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆ ಹಾಗೂ ಕಾಂಗ್ರೆಸ್ ನ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಕ್ರತಜ್ಞತೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತನ್ನ ವಿರುದ್ಧ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪ ಹಾಗೂ ಅಪಹಾಸ್ಯವನ್ನು ವಿವರಿಸುತ್ತಾ ಅವರು ಭಾಹುಕರಾದರು.

ಎತ್ತಿನಹೊಳೆ ಯೋಜನೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ಸಂಬಧಿಸಿ ಬಿಜೆಪಿಯವರು ಇತ್ತೀಚಿನ ದಿನಗಳಲ್ಲಿ ತನ್ನ ವಿರುದ್ದ ಇಲ್ಲ ಸಲ್ಲದ ಆರೋಪ ಹಾಗೂ ಅಪಹಾಸ್ಯ ಮಾಡುತ್ತಿದ್ದು, ನಾನು ಯಾವುದೇ ಅಕ್ರಮಗಳಲ್ಲಿ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಭಾಗಿಧಿ ಯಾಗಿಲ್ಲ. ಸುಳ್ಳು ನುಡಿಯುವವರಿಗೆ ದೇವರೇ ಒಳ್ಳೆಯ ಬುದಿಟಛಿ ನೀಡಲಿ ಎಂದು ಹೇಳಿದರು. ತಾನು ಉದಾಸಿನ ರಾಜಕಾರಣಿ ಅಲ್ಲ. ಕ್ಷೇತ್ರದ ಹಾಗೂ ಜಿಲ್ಲೆಯ ಅಭಿವೃದಿಟಛಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ಹಾಗೂ ದ.ಕ. ಜಿಲ್ಲೆಯನ್ನು ರಾಜ್ಯದಲ್ಲೇ ಮಾದರಿಯನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದೇನೆ. ನನ್ನನ್ನು 7 ಬಾರಿ ಶಾಸಕನಾಗಿ, 3 ಬಾರಿ ಮಂತ್ರಿಯಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನತೆಯ ಋಣವನ್ನು ತೀರಿಸುತ್ತೇನೆ ಎಂದು ಭಾವುಕರಾಗಿಯೇ ನುಡಿದರು. ಈ ವೇಳೆ ಇಡೀ ಸಭೆ ಮೌನವಾಗಿ ಸೇರಿದ ಎಲ್ಲರ ಕಣ್ಣಲ್ಲೂ ನೀರು ಜಿನುಗಿ, ಕಣ್ಣೊರೆಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು.
ಎತ್ತಿಹೊಳೆ ಯೋಜನೆಯ ಕುರಿತು ಮಾತನಾಡಿದ ರೈ ಅವರು ತ್ತಿನಹೊಳೆ ಯೋಜನೆಯನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮಂಜೂರು ಮಾಡಿ ಆಗಿನ ಗೃಹ ಸಚಿವ ವಿ.ಎಸ್‌.ಆಚಾರ್ಯ ಯೋಜನೆ ಘೋಷಣೆ ಮಾಡಿದಾಗ ನಳಿನ್‌ ಕುಮಾರ್‌ ಕಟೀಲ್‌, ಪ್ರತಾಪಸಿಂಹ ನಾಯಕ್‌ ಜೀವಂತವಿರಲಿಲ್ಲವೇ ಎಂದು ಪ್ರಶ್ನಿಸಿದರು.
ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಕಸ್ತೂರಿ ರಂಗನ್‌ ವಿಚಾರದಲ್ಲಿ ಮೂಗು ತೂರಿಸುತ್ತಿದ್ದ ಬಿಜೆಪಿಗರು ಈಗ ಬಾಲ ಮುದುರಿಸಿ ಕುಳಿತುಕೊಂಡಿದ್ದಾರೆ. ಬಿಜೆಪಿಯೇ ಸೃಷ್ಟಿಸಿದ ಎತ್ತಿನಹೊಳೆ ಯೋಜನೆ ಕುರಿತು ಅದರ ನಾಯಕರಲ್ಲೇ ಒಮ್ಮತದ ಅಭಿಪ್ರಾಯವಿಲ್ಲ. ದ.ಕ. ಜಿಲ್ಲೆಯ ಬಿಜೆಪಿ ನಾಯಕರು ಯೋಜನೆಯನ್ನು ವಿರೋಧಿಸುತ್ತಿದ್ದರೆ ಬಯಲುಸೀಮೆಯ ಬಿಜೆಪಿಗರು ಯೋಜನೆ ಪರ ನಿಲುವು ಹೊಂದಿದ್ದಾರೆ. ಬಿಜೆಪಿ ಚುನಾವಣೆಗೆಂದೇ ಹುಟ್ಟಿದ ಪಕ್ಷ. ಕಾಂಗ್ರೆಸನ್ನು ದೂರುವ ಮೊದಲು ಬಿಜೆಪಿ ನಾಯಕರು ತಮ್ಮೊಳಗಿನ ಗೊಂದಲವನ್ನು ನಿವಾರಿಸಲಿ ಎಂದು ಸಚಿವರು ಲೇವಡಿ ಮಾಡಿದರು. ಅಭಿವೃದಿಟಛಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ದೇಶದಲ್ಲೇ ಮೂರನೆ ಸ್ಥಾನದಲ್ಲಿದ್ದು, ನರೇಂದ್ರ ಮೋದಿಯ ಗುಜರಾತ್‌ ಐದನೆ ಸ್ಥಾನದಲ್ಲಿದೆ. ರಾಜ್ಯದ ಪ್ರತಿ ಕ್ಷೇತ್ರದಲ್ಲೂ ಗಣನೀಯ ಅಭಿವೃದಿಟಛಿ ಕಾರ್ಯಗಳಾಗುತ್ತಿದ್ದು, ಕೇಂದ್ರ ಹಾಗೂ ಬಿಜೆಪಿ ಆಡಳಿತದ ರಾಜ್ಯ ಸರಕಾರಗಳು ಕರ್ನಾಟಕವನ್ನು ಮಾದರಿಯನ್ನಾಗಿಸಲಿ ಎಂದು ಹೇಳಿದರು.

Leave a Reply

Please enter your comment!
Please enter your name here