ಬಂಟ್ಸ್ ಥ್ರೋಬಾಲ್ ದುಬಾಯಿ ವತಿಯಿಂದ ಮಿಸ್ಟರ್ ವರ್ಲ್ಡ್ ಶ್ರೀ ಪವನ್ ಶೆಟ್ಟಿಯವರಿಗೆ ದುಬಾಯಿಯಲ್ಲಿ ಸನ್ಮಾನ

ಯು.ಎ.ಇ.ಯಲ್ಲಿ ಬಂಟ್ಸ್ ಥ್ರೋಬಾಲ್ ದುಬಾಯಿ ಆಶ್ರಯದಲ್ಲಿ 2015 ಡಿಸೆಂಬರ್ 4 ರಂದು ಶಾರ್ಜಾವಾಂಡರರ್ಸ್ಕ್ಲಬ್ಕ್ರೀಡಾಂಗಣದಲ್ಲಿಬೆಳಗಿನಿಂದಸಂಜೆಯವರೆಗೆನಡೆದಮಹಿಳಾ ಥ್ರೋಬಾಲ್ ಹಾಗೂ ಮತ್ತು ಪುರುಷರ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ ಮಿಸ್ಟರ್ ವರ್ಲ್ಡ್ ಶ್ರೀ ಪವನ್ ಶೆಟ್ಟಿಯವರು ಪಂದ್ಯಾಟವನ್ನು ಉದ್ಘಾಟಿಸಿದರು. ಈ ಸುಸಂದರ್ಭದಲ್ಲಿ ಯು.ಎ.ಇ. ಯಲ್ಲಿ ನೆಲೆಸಿರುವ ಸಮಸ್ಥ ಕ್ರಿಡಾ ಅಭಿಮಾನಿಗಳ ಪರವಾಗಿ ಮತ್ತು ಪಂದ್ಯಾಟ್ದಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ಆಟಗಾರರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

Pavan-shetty-20151204-003

ಉದ್ಘಾಟನಾ ಸಮಾರಂಭದಲ್ಲಿ ಪಂದ್ಯಾಟದ ಪ್ರಮುಖ ಪ್ರಾಯೋಜಕರಾದ ಹೀಟ್ ಶೀಲ್ಡ್ ದುಬಾಯಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರೇಂನಾಥ ಶೆಟ್ಟಿ ಹಾಗೂ ಶ್ರೀಮತಿ ಭಾಗ್ಯ ಪ್ರೇಂನಾಥ್ ಶೆಟ್ಟಿ ಹಾಗೂ ಇನ್ನಿತರ ಪ್ರಾಯೋಜಕರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ಶ್ರೀಮತಿ ಶಶಿ ಶೆಟ್ಟಿ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಸಂಗೀತಾ ಶೆಟ್ಟಿಯವರಿಂದ ಪ್ರಾರ್ಥನೆ, ಪುಟಾಣಿ ಮಕ್ಕಳ ಸ್ವಾಗತ ನೃತ್ಯ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಊರಿನಿಂದ ಆಗಮಿಸಿದ ಶ್ರೀ ಪವನ್ ಶೆಟ್ಟಿಯವರ ಸನ್ಮಾನಿಸಲಾಯಿತು. ಶ್ರೀ ಗಣೇಶ್ ರೈಯವರು ಸನ್ಮಾನ ಪತ್ರ ವಾಚಿಸಿದರು, ಬಂಟ್ಸ್ ಥ್ರೋಬಾಲ್ ದುಬಾಯಿ ಕಾರ್ಯಕಾರಿ ಸಮಿತಿಯ ಸದಸ್ಯರು ಮುಖ್ಯ ಪ್ರಾಯೋಜಕರ ಜೊತೆಗೂಡಿ ಸನ್ಮಾನ ಪ್ರಕ್ರೀಯೆಯಲ್ಲಿ ಪಾಲ್ಗೊಂಡರು, ಯು.ಎ.ಇ. ಬಂಟ್ಸ್ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಉದ್ಘಾಟನಾ ಸಮಾರಂಭ ಹಾಗೂ ಸನ್ಮಾನ ಸಮಾರಂಭದ ಕಾರ್ಯಕ್ರಮ ನಿರೂಪಣೆಯನ್ನು ಮಾಡಿ ಸರ್ವರಿಗೂ ಶುಭವನ್ನು ಹಾರೈಸಿದರು.

Pavan-shetty-20151204 Pavan-shetty-20151204-001 Pavan-shetty-20151204-002
Pavan-shetty-20151204-004 Pavan-shetty-20151204-005 Pavan-shetty-20151204-006 Pavan-shetty-20151204-007

ವಿಶ್ವ ದೇಹರ್ದಾಢ್ಯ ಪಟು ಶ್ರೀ ಪವನ್ ಶೆಟ್ಟಿಯರ ಸಾಧನೆಯ ಹಾದಿ….

ಸುಂದರ ಕರ್ನಾಟಕದ ಕರಾವಳಿ ಗಡಿನಾಡು ಮಂಜೇಶ್ವರ ಶ್ರೀ ನಾರಾಯಣ ಶೆಟ್ಟಿ ಮತ್ತು ಶ್ರೀಮತಿ ವಾರಿಜ ಶೆಟ್ಟಿ ದಂಪತಿಗಳ ಮಗನಾಗಿ 1986 ರಲ್ಲಿ ಜನಿಸಿದರು. ಉತ್ತಮ ಪರಿಸರದಲ್ಲಿ ಬೆಳೆದು, ತಮ್ಮ ವಿದ್ಯಾಭ್ಯಾಸವನ್ನು ಬಿ.ಎಸ್.ಸಿ. ಬಯೋಟೆಕ್ನಾಲಜಿ ಮತ್ತು ಎಂ.ಬಿ.ಎ. ಫೈನಾನ್ಸ್ ನಲ್ಲಿ ಪದವಿ ಪಡೆದು ನಂತರ ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ವಿಶ್ವ ದೇಹರ್ದಾಢ್ಯ ಪಟುವಾಗಿ ಸಾಧನೆಯ ಉತ್ತುಂಗದಲ್ಲಿರುವ ಪವನ್ ಶೆಟ್ಟಿಯವರು 2005 ರಿಂದ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದ್ದು, IFFB ಪ್ರೊ. ಫಕ್ರಿ ಮುಬಾರಕ್ ನ್ಯೂಯಾರ್ಕ್ ಇವರಿಂದ ತರಭೇತಿ ಪಡೆದು ನಂತರ ಯು.ಕೆ. ಯ ನತನ್ ಹರ್ಮನ್ ನಿಂದ ತರಭೇತಿಯನ್ನು ಪಡೆಯುತ್ತಿರುವರು. ತಮ್ಮ ಸಾಧನೆಯ ಪಟ್ಟಿಯ ದಾಖಲೆಯ ಪುಟವನ್ನು ನೋಡಿದಾಗ, ಇಟಲಿಯ ವೆನಿಸ್ ನಲ್ಲಿ 2005 ರಲ್ಲಿ ವಿಶ್ವ ದೇಹರ್ದಾಢ್ಯ ಸ್ಪರ್ಧೆಯಲ್ಲಿ ಓವರಾಲ್ ಚಾಂಪಿಯನ್ ಮಿ. ವರ್ಲ್ಡ್ 2005 ಗೋಲ್ಡ್ ಮೆಡಲ್, ಮಿ. ಇಂಡಿಯಾ 2005 ಭಾರತ್ ಶ್ರೇಷ್ಠ ವಿನ್ನರ್, ಮಿ. ಏಷ್ಯಾ 2004 ಸಿಲ್ವರ್ ಮೆಡಲಿಸ್ಟ್, ಬೆಸ್ಟ್ ಹೌಟ್ ಗೊಯಿಂಗ್ ಸ್ಟುಡೆಂಟ್ 2006-2007, ಪ್ರೆಸಿಡೆನ್ಸಿ ಕಾಲೇಜ್, ಮಿ. ಕರ್ನಾಟಕ ಶ್ರೇಷ್ಠ -2014, ಮಿ. ಕರ್ನಾಟಕ ಶ್ರೀ – 2014, ಮಿ. ಎಲೈಟ್ ಫಿಟ್ ನೆಸ್ಸ್ – 2015, ಟೈಟಲ್ ಮಿ. ಇನ್ಸ್ ಪಿರಿಯಾ -2014 , ಮಿ. ರಾಕ್ ಕ್ಲಾಸಿಕ್ – 2014, ಮಿ. ಸಾಗರ್ ಕ್ಲಾಸಿಕ್, ಮಿ. ನರೇಂದ್ರ ಮೋದಿ ಕಪ್ ಟೈಟಲ್ ವಿನ್ನರ್, ಇನ್ನು ಹಲವು ಶ್ರೇಷ್ಠ ಪ್ರಶಸ್ತಿಗಳ ಸರಮಾಲೆಯನ್ನು ಪಡೆದಿರುವ ಪವನ್ ಶೆಟ್ಟಿಯವರು ಜಗತ್ತಿನ ಪ್ರತಿಷ್ಠಿತ “ರಿಬಾಕ್” ಸಂಸ್ಥೆಯ ಸರ್ಟಿಪೈಡ್ ಟ್ರೈನರ್ ಆಗಿದ್ದಾರೆ.

Pavan-shetty-20151204-008 Pavan-shetty-20151204-009 Pavan-shetty-20151204-010

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಪವನ್ ಶೆಟ್ಟಿಯವರು ಸುದೃಡ ಯುವ ಪೀಳಿಗೆಯನ್ನು ಸೃಷ್ಠಿಸುವ ಸಲುವಾಗಿ ಸ್ವಂತ ದೇಹರ್ದಾಡ್ಯ ತರಭೇತಿ ಸಂಸ್ಥೆಯನ್ನು ಸ್ಥಾಪಿಸಿ ಭಾರತ ದೇಶಕ್ಕೆ ಬಲಿಷ್ಠ ಉಕ್ಕಿನ ಸ್ನಾಯುಗಳ ಕ್ರೀಡಾಪಟುಗಳನ್ನು ತಯಾರು ಗೊಳ್ಳಿಸುತ್ತಿದಾರೆ.

ಮಿಸ್ಟರ್ ವರ್ಲ್ಡ್ ಪವನ್ ಶೆಟ್ಟಿಯವರ ಗರಡಿಯಲ್ಲಿ ಹಲವಾರು ದೇಹರ್ದಾಡ್ಯ ಸ್ಟಾರ್ ಗಳು ಸೃಷ್ಠಿಯಾಗಲಿ ಭಾರತ ದೇಶದ ಕೀರ್ತಿ ಪತಾಕೆ ವಿಶ್ವದಾದ್ಯಂತ ಪಸರಿಸಲಿ ಎಂದು ಸಮಸ್ಥ ಕ್ರೀಡಾಭಿಮಾನಿಗಳ ಪರವಾಗಿ ಶುಭವನ್ನು ಹಾರೈಸೋಣ.

Leave a Reply

Please enter your comment!
Please enter your name here