ಬಜ್ಪೆ ಪೋಲಿಸರಿಂದ ಸರಗಳ್ಳತನದ ಇಬ್ಬರು ಆರೋಪಿಗಳ ಬಂಧನ

ಬಜ್ಪೆ ಪೋಲಿಸರಿಂದ ಸರಗಳ್ಳತನದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಸರಗಳ್ಳತನಕ್ಕೆ ಸಂಬಂಧಿಸಿ ಬಜಪೆ ಪೋಲಿಸರು ಇಬ್ಬರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.

ಬಂಧಿತರನ್ನು ಮಹಮ್ಮದ್ ಹನೀಫ್ ಮಲ್ಲಾರು ಹಾಗೂ ಇಮ್ರಾನ್ ಕಾವೂರು ಎಂದು ಗುರುತಿಸಲಾಗಿದೆ.

1-chain-snatchers-bajpe-20161002-4 chain-snatchers-bajpe-20161002-1

ಸಪ್ಟೆಂಬರ್ 29ರಂದ ಸಂಜೆ ವೇಳೆ ಮರವೂರು ಬ್ರಿಡ್ಜ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಜಾತ ಎಂಬ ಮಹಿಳೆಯ ಕರಿಮಣಿ ಸರವನ್ನು ಆರೋಪಿಗಳು ಎಳೆದುಕೊಂಡು ಹೋಗಿ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗೆ ಬಲೆ ಬೀಸಿದ ಬಜಪೆ ಪೋಲಿಸರು ಭಾನುವಾರ ಕಾವೂರು ಬಳಿ ಬಂಧಿಸಿ, ಬಂಧಿತರಿಂದ ಕೃತ್ಯಕ್ಕೆ ಬಳಸಿದ ಹೊಂಡಾ ಎಕ್ಟಿವಾ ಗಾಡಿ ಹಾಗೂ ಕರಿಮಣಿ ಸರವನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಟಿ ಡಿ ನಾಗರಾಝ್, ಇಎಸ್ ಐ ಸತೀಶ್ ಎಎಸ್ ಐ ಜನಾರ್ದನ್ ಗೌಡ, ಸಿಬಂದಿಗಳಾದ ರಾಮಚಂದ್ರ, ಜಯಾನಂದ, ಚಂದ್ರಮೋಹನ್, ಶಶಿಧರ್, ಶರತ್ ಮತ್ತು ಜೇಮ್ಸ್ ಪಾಲ್ಗೊಂಡಿದ್ದರು.

Leave a Reply

Please enter your comment!
Please enter your name here