`ಬಣ್ಣಬಣ್ಣದ ಬದುಕು’ ಧ್ವನಿಸುರುಳಿ ಬಿಡುಗಡೆ

Spread the love

`ಬಣ್ಣಬಣ್ಣದ ಬದುಕು’ ಧ್ವನಿಸುರುಳಿ ಬಿಡುಗಡೆ

ಮಂಗಳೂರು: ಕುಡಿಯುವ ನೀರು ಒದಗಿಸಿ ಕೊಡುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಆದರೆ ಕೊಡುವಾಗ ನಮ್ಮಲ್ಲಿ ಇದೆಯಾ ಎನ್ನುವುದನ್ನು ನೋಡಬೇಕು. ಕಾವೇರಿ ವಿಷಯದಲ್ಲಿ ಎದುರಾದ ಪ್ರಶ್ನೆ ನಮ್ಮ ನೇತ್ರಾವತಿ ನದಿಗೂ ಅನ್ವಯಿಸಬೇಕು. ನಮಗೆ ನೀರಿಲ್ಲದ ಪರಿಸ್ಥಿತಿ ಸೃಷ್ಟಿಸುವ ಎತ್ತಿನಹೊಳೆ ಯೋಜನೆ ಕುರಿತು ಜನತೆ ಎಚ್ಚೆತ್ತು ಕೊಳ್ಳುವ ದಿನಗಳು ಎದುರಾಗಿವೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

banna-bannada-baduku-3

ಅವರು ಮುತ್ತುರಾಮ್ ಕ್ರಿಯೇ ಷನ್ಸ್ ಕಾರ್ಕಳ ಲಾಂಛನದಲ್ಲಿ ತಯಾ ರಾದ ಕೃಷ್ಣ ನಾಯ್ಕ್ ಕಾರ್ಕಳ ನಿರ್ಮಾಣ ಹಾಗೂ ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ `ಬಣ್ಣ ಬಣ್ಣದ ಬದುಕು’ ಕನ್ನಡ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಲಹರಿ ಆಡಿಯೋ ಸಂಸ್ಥೆ ಮುಖ್ಯಸ್ಥ ಲಹರಿವೇಲು ಮಾತನಾ ಡಿದರು. ಚಿತ್ರನಟ ಶ್ರೀನಗರ ಕಿಟ್ಟಿ, ಶಾಸಕ ಮೊಯಿದಿನ್ ಬಾವ, ಕರಾವಳಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್. ಗಣೇಶ್ ರಾವ್, ಮೆಯರ್ ಎಂ ಹರಿನಾಥ್, ಮುಖ್ಯ ಸಚೇತಕ ಎಂ ಶಶಿಧರ ಹೆಗ್ಡೆ, ಪ್ರಮುಖರಾದ ಪ್ರಕಾಶ್ ಪಾಂಡೇಶ್ವರ, ಬಲಿಪ ನಾರಾಯಣ ಭಾಗವತರು, ಪಟ್ಲ ಸತೀಶ್ ಶೆಟ್ಟಿ, ಸುರೇಶ್ ಶೆಟ್ಟಿ ಮುಂಬಯಿ, ಜಗನ್ನಾಥ ಶೆಟ್ಟಿ ಬಾಳ, ನಾಗೇಂದ್ರ ಅರಸು, ದಿವಾಕರ ಪಾಂಡೇಶ್ವರ, ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿದ್ದರು. `ಬಣ್ಣ ಬಣ್ಣದ ಬದುಕು’ ಚಿತ್ರದ ನಿರ್ಮಾಪಕ ಕೃಷ್ಣನಾಯ್ಕ್ ಕಾರ್ಕಳ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.


Spread the love