ಬಸ್ಸು ಕಾರು ಅಫಘಾತದಲ್ಲಿ ಬೆಂಗಳೂರು ನಿವಾಸಿ ಮೃತ್ಯು

ಮಂಗಳೂರು: ನೆಲ್ಯಾಡಿ ಬಳಿ ನಡೆದ ಬಸ್ಸು ಮತ್ತು ಟೊಯೊಟಾ ಇತೊಸ್ ಕಾರಿನ ನಡುವೆ ನಡೆದ ಅಫಘಾತದಲ್ಲಿ ಒರ್ವ ಸಾವನಪ್ಪಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

ಮೃತರನ್ನು ಬೆಂಗಳೂರು ಮೂಲದ ಅಶೋಕ್ ರೆಡ್ಡಿ ಎಂದು ಗುರುತಿಸಲಾಗಿದೆ.

Kolpe-accident-19062016 (1) Kolpe-accident-19062016 (2)

ಪೋಲಿಸ್ ಮೂಲಗಳ ಪ್ರಕಾರ ಅಶೋಕ್ ರೆಡ್ಡಿ ಸಹಿತ ನಾಲ್ಕು ಮಂದಿ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು. ಕೊಲ್ಪೆ ಬಳಿ ತಲುಪಿದ ವೇಳೆ ಎದುರಿನಿಂದ ಬಂದ ಕೆಎಸ್ ಆರ್ ಟಿ ಸಿ ಮುಕಾಮುಕಿ ಡಿಕ್ಕಿಹೊಡೆದಿದ್ದು, ಅಶೋಕ್ ಸ್ಥಳದಲ್ಲೇ ಸಾವನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಉಪ್ಪಿನಂಗಡಿ ಪೋಲಿಸರು ಕೇಸು ದಾಖಲಿಸಿದ್ದಾರೆ.

Leave a Reply