ಬಾವಿ ಕಟ್ಟೆಯಲ್ಲಿ ಸ್ನೇಹಕೂಟ

ಮಂಗಳೂರು: ಕಳೆದ ತಿಂಗಳು ನೀರಿನ ಅಭಾವ ಉಂಟಾದ ಸಂಧರ್ಬದಲ್ಲಿ ಉಚಿತವಾಗಿ ನೀರು ಹಂಚಿದ ನಾಗರಿಕರಿಗೆ ಅಭಿನಂದನಾ ಸಭೆ ಪಂಜಿಮೊಗರು ವಾರ್ಡ್‍ನ ವಿದ್ಯಾನಗರದಲ್ಲಿ ನಡೆಯಿತು. ಪರಿಸರದ ಹಲವಾರು ಮಂದಿ ಯುವಕರು ಸ್ವಯಂ ಪ್ರೇರಣೆಯಿಂದ ವಾಹನಗಳಲ್ಲಿ ಮನೆ ಮನೆಗೆ ನೀರು ಹಂಚಿ ಮಾನವೀಯತೆಯನ್ನು ಮೆರೆದಿದ್ದಾರೆ. ಇಂತಹ ಸೇವೆಗಳು ಶ್ಲಾಘನೀಯ ಎಂದು ಸ್ಥಳೀಯ ಕಾರ್ಪೊರೇಟರ್ ದಯಾನಂದ ಶೆಟ್ಟಿಯವರು ಅಭಿನಂದನಾ ಮಾತುಗಳನ್ನಾಡಿದರು.

image001bavikatte-water-service-20160606-001 image002bavikatte-water-service-20160606-002 image003bavikatte-water-service-20160606-003

ನಳ್ಳಿ ನೀರಿನ ಸಂಪರ್ಕ ಇಲ್ಲದ ಸಂಧರ್ಬದಲ್ಲಿ 1986 ರಲ್ಲಿ ಸ್ಥಳೀಯ ನಾಗರಿಕರು ಶ್ರಮಾದಾನ ಸಹಕಾರ, ದಾನಿಗಳ ನೆರವು, ಫಾದರ್ ಮುಲ್ಲರ್ ಸಂಸ್ಥೆ ಸಹಕಾರದೊಂದಿಗೆ ಒಟ್ಟಾಗಿ ವಿದ್ಯಾನಗರ ಕುಲದಲ್ಲಿ ಬಾವಿ ನಿರ್ಮಾನಗೊಂಡಿತ್ತು ಎಂದು ಬಾವಿ ನಿರ್ಮಾನ ಸಮಿತಿಯಲ್ಲಿದ್ದ ಊರ ಹಿರಿಯರಾದ ಭಾಸ್ಕರ್ ಪೂಜಾರಿಯವರು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಮಾತನಾಡಿದರು.

30 ವರ್ಷಗಳ ಹಿಂದೆ ನಿರ್ಮಿಸಿದ ಇದೇ ಬಾವಿಗೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಪಂಪ್ ಅಳವಡಿಸಲಾಗಿತ್ತು. ಇದರಿಂದ ಸುತ್ತಲಿನ ನಾಲ್ಕು ವಾರ್ಡ್‍ಗಳಿಗೆ ನೀರು ವಿತರಿಸಲಾಗಿತ್ತು. ಇಷ್ಟೇ ಅಲ್ಲದೆ ಪಂಜಿಮೊಗರು ನಿವಾಸಿ ಪರ್ಸಿ ಸಿಕ್ವೇರಾ ರವರು ತಮ್ಮ ಬೋರುವೆಲ್ ನಿಂದ ನಿರಂತರವಾಗಿ ನೀರು ಪೂರೈಸಿದ್ದರು.

ಅಭಿನಂದನಾ ಸಭೆಯಲ್ಲಿ ಸ್ಥಳೀಯ ವಾಲ್ ಮೆನ್ ವಾಮನ ಪೂಜಾರಿ ಪ್ರತಿಯೊಂದು ಸಂಧರ್ಬಗಳಲ್ಲಿ ಪಂಜಿಮೊಗರಿನ ಯುವಕರು ಧರ್ಮ, ಜಾತಿ ಬೇಧವಿಲ್ಲದೆ ಸ್ವಾರ್ಥವಿಲ್ಲದೆ ಪರೋಪಕಾರಿ ಮನೋಭಾವದಿಂದ ದುಡಿಯುತ್ತಾರೆ ಇದು ಊರ ಸೌಹಾರ್ಧತೆಯನ್ನು ಗಟ್ಟಿಗೊಳಿಸುತ್ತದೆ ಎಂದು ನುಡಿದರು.

ಅಭಿನಂದನಾ ಸಭೆಯಲ್ಲಿ ಸ್ಥಳೀಯ ಗಣ್ಯರಾದ ಲಿಂಗಪ್ಪ ಆಳ್ವ , ಗಣೇಶ್ ಶೆಟ್ಟಿ, ಮುಸ್ತಾಫ ಎಂ.ಬಿ, ಅಂಥೋಣಿ ಲೋಬೋ, ನಿಯಾಜ್, ಅನಿಲ್ ಡಿಸೋಜ, ನೌಶಾದ್, ಬಶೀರ್, ಜಯಕುಮಾರ್ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು. ಚರಣ್ ಶೆಟ್ಟಿ ಸ್ವಾಗತಿಸಿ ಸಂತೋóಷ್ ಡಿಸೋಜ ವಂದಿಸಿದರು.

Leave a Reply

Please enter your comment!
Please enter your name here