ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ರಹೀಂ ಉಚ್ಚಿಲ್

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ರಹೀಂ ಉಚ್ಚಿಲ್
ಮಂಗಳೂರು: ಬಿಜೆಪಿ ಕರ್ನಾಟಕ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷರನ್ನಾಗಿ ರಹೀಂ ಉಚ್ಚಿಲ್ ಮಂಗಳೂರು ಇವರನ್ನು ನೇಮಿಸಿ ರಾಜ್ಯ ಅಧ್ಯಕ್ಷ ಅಬ್ದುಲ್ ಅಜೀಂ ಅದೇಶ ಹೊರಡಿಸಿದ್ದಾರೆ.

bjp-rahim-uchilla-20160802

ಕಳೆದ ಬಾರಿ ಸಂಸದ ಪ್ರಹ್ಲಾದ್ ಜೋಶಿಯವರ ಅವಧಿಯಲ್ಲಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಉಚ್ಚಿಲ್ ಅವರಿಗೆ ಇದೀಗ ದಕ ಮತ್ತು ಉಡುಪಿ ಜಿಲ್ಲೆಯ ಅಲ್ಪಸಂಖ್ಯಾತ ಮೋರ್ಚಾದ ಪ್ರಭಾರಿಯಾಗಿಯೂ ನೇಮಿಸಲಾಗಿದೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಬ್ಯಾರಿ ಭಾಷೆಯ ಹಲವಾರು ಟೆಲಿಫಿಲ್ಮ್, ಚಲನಚಿತ್ರಗಳಲ್ಲಿ ನಟಿಸಿ ನಿರ್ದೆಶನ ಮಾಡಿದ್ದಾರೆ.

Leave a Reply