ಬಿಲ್ಲವ ಸಂಘ ಕುವೈಟ್, ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾಥ್ರ್ರಿ ವೇತನ

ಬಿಲ್ಲವ ಸಂಘ ಕುವೈಟ್, ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾಥ್ರ್ರಿ ವೇತನ

ಮಂಗಳೂರು: ಬಿಲ್ಲವ ಸಂಘ ಕುವೈಟ್ ಹಾಗೂ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾಥ್ರ್ರಿ ವೇತನ ಕಾರ್ಯಕ್ರಮ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಶ್ರೀ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಜರಗಿತು.

????????????????????????????????????
????????????????????????????????????

ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ಅಧ್ಯಕ್ಷರಾದ ಹೆಚ್.ಎಸ್. ಸಾಯಿರಾಮ್ ಉದ್ಫಾಟಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸತೀಶ್ ಕುಂದರ್ ಪ್ರಸ್ತಾವನೆಗೈದು ಬಿಲ್ಲವ ಸಂಘ ಕುವೈಟಿನ ಚಟುವಟಿಕೆಗಳ ಬಗ್ಗೆ ಸಭೆಗೆ ತಿಳಿಸಿದರು. ಅಧ್ಯಕ್ಷತೆಯನ್ನು ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಗಣೇಶ್ ಬಂಗೇರರವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಸನಿಲ್, ಡಾ. ರಮೀಲಾ ಶೇಖರ್, ರೋಹಿತ್ ಸನಿಲ್, ರಾಘವ, ವಿವೇಕ್ ರಾವ್, ಎ.ಕೆ. ರವೀಂದ್ರ, ರಮಾನಾಥ ಕೋಟೆಕಾರು, ಶೈಲೇಂದ್ರ ಸುವರ್ಣ, ರಘು ಪೂಜಾರಿ, ಜಯಾನಂದ, ಯೋಗೀಶ್ ಕೋಟ್ಯಾನ್, ಎಂ. ಸೀತಾರಾಮ, ಮೋಹನ್ ದಾಸ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ. ಆಶಿತ್ ಎಂ.ವಿ. ಹಾಗೂ ಮಹಾನಗರ ಪಾಲಿಕೆ ಸದಸ್ಯ ಪ್ರತಿಭಾ ಕುಳಾಯಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.

Leave a Reply