ಬುಧವಾರ ಬಂಟರ ಸಂಘ ಶತಮಾನೋತ್ಸವ ಕಟ್ಟಡಗಳ ಶಿಲಾನ್ಯಾಸ

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ ಇದರ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣ ನಿರ್ಮಾಣದ ಶಿಲಾನ್ಯಾಸ ಸಮಾರಂಭವು ದಿನಾಂಕ 12-05-2016 ನೇ ಬುಧವಾರದಂದು ಸಾಯಂಕಾಲ 4-00 ಗಂಟೆಗೆ ಬಂಟ್ಸ್ ಹಾಸ್ಟೆಲ್ ವಠಾರ ಮಂಗಳೂರು ಇಲ್ಲಿ ಜರಗಲಿದೆ.

image004bunts-maladi-20160509-004

image001bunts-maladi-20160509-001 image002bunts-maladi-20160509-002 image003bunts-maladi-20160509-003

ಈ ಸಮಾರಂಭದಲ್ಲಿ ಸರ್ವಶ್ರೀಗಳಾದ ಡಾ||. ಆರ್. ಎನ್. ಶೆಟ್ಟಿ. ಸಿ.ಎಮ್.ಡಿ, ಆರ್. ಎನ್ ಶೆಟ್ಟಿ ಗ್ರೂಪ್ ಅಫ್ ಇನ್‍ಸ್ಟಿಟ್ಯೂಶನ್ಸ್, ಡಾ||. ಎನ್ ವಿನಯ ಹೆಗ್ಡೆ. ಕುಲ ಪತಿಗಳು ನಿಟ್ಟೆ ವಿಶ್ವವಿದ್ಯಾನಿಲಯ, ಡಾ||. ಎ.ಜೆ ಶೆಟ್ಟಿ. ಅಧ್ಯಕ್ಷರು ಎ.ಜೆ ಸಮೂಹ ಸಂಸ್ಥೆಗಳು, ಶ್ರೀ ಬಿ. ರಮಾನಾಥ್ ರೈ, ಅರಣ್ಯ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವರು, ಶ್ರೀ ನಳಿನ್ ಕುಮಾರ್ ಕಟೀಲ್, ಲೋಕಸಭಾ ಸದಸ್ಯರು ಮಂಗಳೂರು, ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನಸಭಾ ಸದಸ್ಯರು ಕುಂದಾಪುರ, ಶ್ರೀಮತಿ ಶಕುಂತಳಾ ಶೆಟ್ಟಿ, ವಿಧಾನಸಭಾ ಸದಸ್ಯರು ಪುತ್ತೂರು, ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ವಿಧಾನ ಪರಿಷತ್ ಸದಸ್ಯರು, ಶ್ರೀ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು, ಶ್ರೀ ನಾಗರಾಜ್ ಶೆಟ್ಟಿ ಮಾಜಿ ಸಚಿವರು, ಶ್ರೀ ಓಂಪ್ರಕಾಶ್ I.P.S. ಡೈರೆಕ್ಟರ್ ಜನರಲ್ ಮತ್ತು ಇನ್ಸ್‍ಪೆಕ್ಟರ್ ಜ ನರಲ್ ಆಫ್ ಪೋಲಿಸ್, ಕರ್ನಾಟಕ, ಡಾ||. ಎಮ್. ಶಾಂತಾರಾಮ್ ಶೆಟ್ಟಿ. ಚೆಯರ್‍ಮೆನ್ ವರ್ಲ್ಡ್ ಬಂಟ್ಸ್ ಫೌಂಡೇಶನ್ ಟ್ರಸ್ಟ್, ಸುಧೀರ್ ಶೆಟ್ಟಿ. ಚರಿಷ್ಮಾ ಬಿಲ್ಡರ್ಸ್ ಮುಂಬಯಿ, ಕೆ. ಪಕಾಶ್ ಶೆಟ್ಟಿ. ಚೆಯರ್‍ಮೆನ್ ಮತ್ತು ಎಮ್.ಡಿ ಎಮ್.ಆರ್.ಜಿ ಗ್ರೂಪ್, ಡಾ||. ಎಮ್. ಮೋಹನ್ ಆಳ್ವ. ಅಧ್ಯಕ್ಷರು ಆಳ್ವಾಸ್ ಶಿಕ್ಷಣ ಸಂಸ್ಥೆಗಳು, ಹರ್ಧೀಶ್ ಕುಮಾರ್. ಕಾರ್ಯನಿರ್ವಾಹಕ ನಿರ್ದೇಶಕರು ಕೆನರಾ ಬ್ಯಾಂಕ್, ಐಕಳ ಹರೀಶ್ ಶೆಟ್ಟಿ. ಉಪಾಧ್ಯಕ್ಷರು ಜಾಗತಿಕ ಬಂಟರ ಸಂಘಗಳ ಒಕ್ಕೂಟ, ವಿಶ್ವನಾಥ ಶೆಟ್ಟಿ ಕರ್ನಿರೆ. ಅಧ್ಯಕ್ಷರು ಬಂಟರ ಸಂಘ ಮುಂಬಯಿ, ಶೇಖರ್ ಶೆಟ್ಟಿ. ಅಧ್ಯಕ್ಷರು ಬಂಟ್ಸ್ ಎಸೋಸಿಯೇಶನ್ ಮುಂಬಯಿ, ಡಾ||. ನರೇಶ್ ಶೆಟ್ಟಿ. ಅಧ್ಯಕ್ಷರು ಬಂಟರ ಸಂಘ ಬೆಂಗಳೂರು, ಪ್ರಭಾಕರ್ ಎಲ್. ಶೆಟ್ಟಿ. ಉಪಾಧ್ಯಕ್ಷರು ಬಂಟರ ಸಂಘ ಮುಂಬಯಿ, ಬ್ರಿಗೇಡಿಯರ್ ಐ.ಎನ್.ರೈ, ಮೇರ್ಕಳ ತ್ಯಾಂಪಣ್ಣ ಶೆಟ್ಟಿ. ಮಾಜಿ ಅಧ್ಯಕ್ಷರು ಬಂಟರ ಸಂಘ ಮುಂಬಯಿ, ಬಿ. ಅಪ್ಪಣ್ಣ ಹೆಗ್ಡೆ. ಮಾಜಿ ಆಡಳಿತ ಮೊಕ್ತೇಸರರು ಶ್ರೀ ಮೂಕಾಂಬಿಕ ದೇವಸ್ಥಾನ ಕೊಲ್ಲೂರು, ಪದ್ಮನಾಭ ಪಯ್ಯಡೆ. ಉದ್ಯಮಿಗಳು ಮುಂಬಯಿ, ಶ್ರೀಮತಿ ಪ್ರೇಮಲತಾ ಸತೀಶ್ಚಂದ್ರ ಹೆಗ್ಡೆ. ಅಧ್ಯಕ್ಷರು, ಸತೀಶ್‍ಚಂದ್ರ ಹೆಗ್ಡೆ ಫ್ಯಾಮಿಲಿ ಟ್ರಸ್ಟ್, ಶ್ರೀಮತಿ ಲತಾ ಜಯರಾಮ ಶೆಟ್ಟಿ. ಅಧ್ಯಕ್ಷರು ಮಹಿಳಾ ವಿಭಾಗ ಬಂಟರ ಸಂಘ ಮುಂಬಯಿ, ಶ್ರೀಮತಿ ಆಶಾ ಮನೋಹರ ಹೆಗ್ಡೆ. ಮಾಜಿ ಅಧ್ಯ್ಯಕ್ಷರು ಮಹಿಳಾ ವಿಭಾಗ ಬಂಟರ ಸಂಘ ಮುಂಬಯಿ, ಶ್ರೀಮತಿ ಮಂಜುಳಾ ಶೆಟ್ಟಿ. ಜೊತೆ ಕಾರ್ಯದರ್ಶಿಗಳು ಬಂಟರ ಸಂಘ ಬೆಂಗಳೂರು ಮೊದಲಾದವರು ಭಾಗವಹಿಸಲಿದ್ದಾರೆ.

image003bunts-maladi-20160509-003

ಬಂಟ ಸಮಾಜ ಬಾಂಧವರು ಪರಿವರ್ತಿತ ಕಾಲಘಟ್ಟದಲ್ಲಿ ಪರಿವರ್ತನೆಗೆ ತಕ್ಕಂತೆ ಹೊಂದಿಕೊಂಡು ಸವಾಲುಗಳನ್ನು ಎದುರಿಸಿ ಜೀವನದಲ್ಲಿ ಯಶಸ್ಸನ್ನು ಪಡೆದವರು. ಸ್ವಾತಂತ್ರ್ಯಪೂರ್ವದಲ್ಲಿ ವಿದ್ಯೆ, ಉದ್ಯೋಗ ಹಾಗೂ ವ್ಯವಹಾರ ಕ್ಷೇತ್ರಗಳಲ್ಲಿ ಅಮೂಲಾಗ್ರವಾದ ಬದಲಾವಣೆಗಳು ಆಗುತ್ತವೆ ಎಂಬುವುದನ್ನು ಮನವರಿಕೆ ಮಾಡಿಕೊಂಡ ದೂರದರ್ಶಿಗಳಾದ ಬಂಟ ಸಮಾಜದ ಹಿರಿಯರು ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡು ಬಂಟ ಸಮಾಜವನ್ನು ಉಳಿಸುವ, ಬೆಳೆಸುವ ಹಾಗೂ ಒಗ್ಗೂಡಿಸುವ ಸದುದ್ದೇಶ, ಒಂದು ವಿದ್ಯಾವಂತ, ಸುಸಂಸ್ಕೃತ, ಸದೃಢ ಸಮಾಜವನ್ನು ನಿರ್ಮಿಸುವ ಮಹಾಸಂಕಲ್ಪದೊಂದಿಗೆ ಬಂಟರ ಯಾನೆ ನಾಡವರ ಮಾತೃ ಸಂಘವನ್ನು ಶತಮಾನದ ಹಿಂದೆ ಸ್ಥಾಪಿಸಿ ಇಡೀ ಸಮಾಜದ ಶ್ರೇಯೋಭಿವೃದ್ಧಿಗೆ ಕಾರಣೀಭೂತರಾದರು. ನಮ್ಮ ಉನ್ನತಿಗೆ ದಾರಿದೀಪಗಳಾದ ನಮ್ಮ ಹಿರಿಯರಿಂದ ಪ್ರೇರಿತವಾದ ಜಗತ್ತಿನಾದ್ಯಂತ ಇರುವ ಬಂಟ ಬಾಂಧವರು ನಂತರದ ದಿನಗಳಲ್ಲಿ ಅಲ್ಲಲ್ಲಿ ಬಂಟರ ಸಂಘಗಳನ್ನು ಸ್ಥಾಪಿಸಿ ಸಮಾಜವನ್ನು ಒಗ್ಗೂಡಿಸುವಲ್ಲಿ ಯಶಸ್ವಿಗಳಾದರು.

bunts

ಶತಮಾನದ ಹಿಂದೆ ನಮ್ಮ ಹೆಚ್ಚಿನ ಸಮಾಜ ಬಾಂಧವರು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಅವರಿಗೆ ವಿದ್ಯಾರ್ಜನೆ ಮಾಡುವ ಯಾವುದೇ ಸೌಲಭ್ಯಗಳಿರಲಿಲ್ಲ. ನಮ್ಮ ಸಮಾಜ ಬಾಂಧವರಿಗೆ ಮತ್ತು ಇತರರಿಗೆ ವಿದ್ಯಾರ್ಜನೆ ಮಾಡುವ ಅವಕಾಶವನ್ನು ಒದಗಿಸುವ, ಅನುಕೂಲವನ್ನು ಕಲ್ಪಿಸುವ ಸಲುವಾಗಿ ನಮ್ಮ ಹಿರಿಯರು ತಾವು ಸಂಪಾದಿಸಿದ ಹಣದಿಂದ ಮೂರು ಜಿಲ್ಲೆಗಳಲ್ಲಿ ಭೂಮಿಗಳನ್ನು ಖರೀದಿಸಿ ಹಾಸ್ಟೆಲ್‍ಗಳನ್ನು ನಿರ್ಮಿಸಿ ನಮ್ಮ ಜಿಲ್ಲೆಯ ಜನರು ವಿದ್ಯಾವಂತರಾಗುವುದಕ್ಕೆ ಕಾರಣೀಭೂತರಾದರು. ವಿದ್ಯೆಯೊಂದಿಗೆ ಉದ್ಯೋಗವನ್ನು ಒದಗಿಸುವ ಉದ್ದೇಶದಿಂದ ವಿಜಯಾ ಬ್ಯಾಂಕ್, ಸಿನಿಮಾ ಥಿಯೇಟರ್‍ಗಳು, ವಾಣಿಜ್ಯ ಸಂಸ್ಥೆಗಳನ್ನು ಸ್ಥಾಪಿಸಿದರು. ನಂತರದ ದಿನಗಳಲ್ಲಿ ಸಾವಿರಾರು ಮಂದಿ ನಮ್ಮ ಸಮಾಜ ಬಾಂಧವರಿಗೆ ವಿಜಯಾ ಬ್ಯಾಂಕಿನಲ್ಲಿ ಉದ್ಯೋಗ ದೊರೆತುದ್ದಲ್ಲದೆ, ಅವರ ನಂತರದ ಜನಾಂಗವು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಲು ನಮ್ಮ ಹಿರಿಯರು ಅವಕಾಶ ಮಾಡಿಕೊಟ್ಟಿದ್ದರು. ನಮ್ಮವರ ಸಭೆ ಸಮಾರಂಭಗಳಿಗೆ ಅವಶ್ಯಕವಾದ ಸೌಲಭ್ಯಗಳನ್ನು ಒದಗಿಸಲು ಹಾಗೂ ಸಂಘಟನಾ ದೃಷ್ಟಿಯಿಂದ ನಮ್ಮವರನ್ನು ಒಗ್ಗೂಡಿಸುವ ಉದ್ದೇಶದಿಂದ ಸಭಾಭವನಗಳನ್ನು ಸಂಘದ ವತಿಯಿಂದ ನಿರ್ಮಿಸಲಾಯಿತು. ಬದಲಾಗುತ್ತಿರುವ ಸನ್ನಿವೇಶಗಳಿಗೆ ಹಾಗೂ ಈಗಿನ ಅವಶ್ಯಕತೆಗಳಿಗೆ ಅನುಗುಣವಾಗಿ ನಮ್ಮ ಸಭಾಭವನಗಳಲ್ಲಿ, ಕಟ್ಟಡಗಳಲ್ಲಿ ಆಧುನಿಕ ಸೌಲಭ್ಯಗಳು ಇಲ್ಲದೆ ಇರುವ ಕಾರಣ ನಮ್ಮ ಕಟ್ಟಡಗಳಿಂದ ನಮ್ಮ ಭೂಮಿಯ ಬೆಲೆಗೆ ಅನುಗುಣವಾಗಿ ಆದಾಯ ಬರುತ್ತಿಲ್ಲ.

ಈ ಕಟ್ಟಡಗಳನ್ನು ತೆಗೆದು ನಮ್ಮ ಸಮಾಜದ ಗೌರವ, ಘನತೆಗಳಿಗೆ ಮತ್ತು ಸಮಯದ ಅವಶ್ಯಕತೆಗಳಿಗೆ ಅನುಗುಣವಾದ ಹೊಸ ಸಭಾಭವನಗಳು ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡಿದರೆ ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯ ಸಂಘಕ್ಕೆ ಬರುತ್ತದೆ. ಈ ಆದಾಯವನ್ನು ಸಂಘವನ್ನು ಸ್ಥಾಪಿಸಿದ ದ್ಯೇಯೋದ್ದೇಶಕ್ಕೆ ಅನುಗುಣವಾಗಿ ವಿದ್ಯಾಭ್ಯಾಸ, ಆರೋಗ್ಯ, ವಿವಾಹ, ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ, ಪ್ರಾಕೃತಿಕ ವಿಕೋಪ ಮುಂತಾದ ಕಾರಣಗಳಿಂದ ನೊಂದವರಿಗೆ ಹಾಗೂ ಇತರ ಯಾವುದೇ ಸಹಾಯ, ಸಹಕಾರದ ಅಗತ್ಯವಿರುವವರಿಗೆ ನೀಡುವ ಉದ್ದೇಶವನ್ನು ಸಂಘವು ಹೊಂದಿದೆ. ಈ ರೀತಿ ಸಮಾಜದ ಶ್ರೇಯೋಭಿವೃದ್ದಿಯನ್ನು ಮಾಡುವ ಸದುದ್ದೇಶದಿಂದ ಹಾಗೂ ಸಂಘವು ಶತಮಾನೋತ್ಸವವನ್ನು ಪೂರೈಸಿದ ಸವಿನೆನಪಿಗಾಗಿ ನಿರ್ಮಿಸುವ ಶತಮಾನೋತ್ಸವ ಕಟ್ಟಡಗಳಲ್ಲಿ 2000 ಆಸನ ವ್ಯವಸ್ಥೆ ಇರುವ ಸುಸಜ್ಜಿತ ಸಭಾಭವನ, ಸಭೆ, ಸಮಾರಂಭಗಳನ್ನು ಏರ್ಪಡಿಸಲು ಎರಡು ಸಭಾಭವನಗಳು, 1250ರಷ್ಟು ವಾಹನ ನಿಲುಗಡೆಗೆ ವಿಸ್ತಾರವಾದ ಅವಕಾಶ, ಮೂರು ಪ್ರತ್ಯೇಕ ಲಾಬಿಗಳು, 4ನೇ ಮಹಡಿಯಲ್ಲಿ 50,000 ಚದರ ಅಡಿಯಷ್ಟು ಓಪನ್ ಟೆರೆಸ್, ಸುಮಾರು 6 ಲಕ್ಷ ಚದರ ಅಡಿ ವಾಣಿಜ್ಯ ಸಂಕೀರ್ಣ ಹಾಗೂ ವಿಶ್ವ ದರ್ಜೆಯ ಜಿಮ್ ಮತ್ತು ಕ್ಲಬ್ ಮೊದಲಾದವುಗಳನ್ನು ಒಳಗೊಂಡಿರುವ ಮಾತೃಸಂಘದ ಶತಮಾನೋತ್ಸವ ಕಟ್ಟಡಗಳ ಸಂಕೀರ್ಣವನ್ನು ಸಮಾಜ ಬಾಂಧವರ ಸಹಕಾರದೊಂದಿಗೆ ರೂ. 230 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು.

Leave a Reply

Please enter your comment!

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

Please enter your name here