ಬೆಂಗಳೂರಿನಲ್ಲಿ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಚಾತುರ್ಮಾಸ್ಯ ವ್ರತಾಚರಣೆ

ಬೆಂಗಳೂರಿನಲ್ಲಿ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಚಾತುರ್ಮಾಸ್ಯ ವ್ರತಾಚರಣೆ

ಬೆಂಗಳೂರು: ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 42ನೇ ಚಾತುರ್ಮಾಸ್ಯ ವ್ರತಾಚರಣೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಜುಲೈ 31ರಿಂದ ಆರಂಭಗೊಳ್ಳುವ ಶ್ರೀಗಳ ಚಾತುರ್ಮಾಸ್ಯ ವ್ರತ ಸೆಪ್ಟಂಬರ್ 16ರವರೆಗೆ ನಡೆಯಲಿದೆ.

Puthige-Swamiji

ಭಾನುವಾರ 31 ಜುಲೈ 2016ರ ಸಂಜೆ 4 ಗಂಟೆಗೆ ಪುತ್ತಿಗೆ ಶ್ರೀಗಳ ಪುರಪ್ರವೇಶ ನಡೆಯಲಿದ್ದು, ವೈಭವೋಪೇತ ಶೋಭಾಯಾತ್ರೆಯೊಂದಿಗೆ ಶ್ರೀಪಾದರನ್ನು ಸ್ವಾಗತಿಸಲಾಗುವುದು. ಬಸವನಗುಡಿಯ ಬುಲ್‍ಟೆಂಪಲ್‍ರಸ್ತೆಯಲ್ಲಿರುವ ಶ್ರೀಗೋವರ್ಧನ ಕೃಷ್ಣನ ಸನ್ನಿಧಿಯಲ್ಲಿ ಶ್ರೀಗಳು ಚಾತುರ್ಮಾಸ್ಯ ವ್ರತ ದೀಕ್ಷೆ ಕೈಗೊಳ್ಳಲಿದ್ದಾರೆ.
ಸಂಜೆ ನಡೆಯುವ ಶ್ರೀಗಳ ಪುರಪ್ರವೇಶಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಎಂ.ಎನ್. ವೆಂಕಟಾಚಲಯ್ಯಅಧ್ಯಕ್ಷತೆ ವಹಿಸಲಿದ್ದಾರೆ. ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲರಾದ ವಿದ್ವಾನ್ ಶ್ರೀ ಎ. ಹರಿದಾಸ್ ಭಟ್, ಇಸ್ಕಾನ್ ಮುಖ್ಯಸ್ಥರಾದ ಶ್ರೀಮಧುಪಂಡಿತ ದಾಸ್, ಹಿರಿಯ ನ್ಯಾಯವಾದಿಗಳಾದ ಶ್ರೀ ಬಿ.ವಿ, ಆಚಾರ್ಯ, ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ದಿನೇಶ್‍ಗುಂಡೂರಾವ್, ಮಾನ್ಯ ಮೇಯರ್ ಶ್ರೀ ಮಂಜುನಾಥರೆಡ್ಡಿ, ಶಾಸಕರಾದ ಶ್ರೀರವಿಸುಬ್ರಹ್ಮಣ್ಯ, ಮಾಜಿ ಮೇಯರ್ ಶ್ರೀ ಕಟ್ಟೆ ಸತ್ಯನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Leave a Reply

Please enter your comment!
Please enter your name here