ಬೆಂಗಳೂರು: ಜಯಲಲಿತ ಪ್ರಕರಣ – ತಮಿಳುನಾಡಿಗೆ ಕೆಎಸ್‍ಆರ್ ಟಿಸಿ ಬಸ್ ಸ್ಥಗಿತ

ಬೆಂಗಳೂರು: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಸೇರಿ ನಾಲ್ವರ ವಿರುದಟಛಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವ ಹಿನ್ನಲೆಯಲ್ಲಿ ರಾಜ್ಯದಿಂದ ತಮಿಳುನಾಡಿಗೆ ಸಂಚರಿಸುವ ಎಲ್ಲಾ ಕೆಎಸ್ ಆರ್ ಟಿಸಿ ಬಸ್ ಸ್ಥಗಿತಗೊಳಿಸಲಾಗಿದೆ.

ksrtc_2

ಸೋಮವಾರ ಮಧ್ಯಾಹ್ನ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಂಡ ನಂತರವೇ ನಿಗಮದ ಹಿರಿಯ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಈ ಆದೇಶ ಹೊರಡಿಸಿದ್ದು, ತಾವು ಮತ್ತೆ ಸೂಚನೆ ನೀಡುವವರೆಗೂ ಬಸ್ ಸಂಚರಿಸದಂತೆ ಸೂಚಿಸಿದ್ದಾರೆ.

ಕೆಎಸ್‍ಆರ್ ಟಿಸಿ ಮಾತ್ರವಲ್ಲದೆ ತಮಿಳುನಾಡಿ ನಿಂದ ರಾಜ್ಯಕ್ಕೆ ಬರುತ್ತಿದ್ದ ತಮಿಳನಾಡು ಬಸ್‍ಗಳು ಸಹ ಸಂಚಾರ ಸ್ಥಗಿತಗೊಳಿಸಿದ್ದು, 2 ರಾಜ್ಯಗಳ ನಡುವೆ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಗೊಂಡಿದೆ. ಸದ್ಯ 120 ಕೆಎಸ್‍ಆರ್ ಟಿಸಿ ಬಸ್ ಸ್ಥಗಿತಗೊಳಿಸಲಾಗಿದೆ. ಮಂಗಳವಾರ ಪರಿಸ್ಥಿತಿಯನ್ನು ಗಮನಿಸಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಡಿವಿಷನ್ ಕಂಟ್ರೋಲರ್ ಗಂಗಣ್ಣಗೌಡ ತಿಳಿಸಿದ್ದಾರೆ.

Leave a Reply