ಬೆಂಗಳೂರು: ಮರ ಬಿದ್ದು ಇನ್‌ಸ್ಪೆಕ್ಟರ್‌ ತಂದೆ ಸಾವು

ಬೆಂಗಳೂರು: ಆಡುಗೋಡಿಯ ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆ (ಸಿಎಆರ್) ವಸತಿ ಸಮುಚ್ಚಯದ  ‘ಎಂ’ ಬ್ಲಾಕ್‌ನಲ್ಲಿ ಬುಧವಾರ ಸಂಜೆ ಬೃಹತ್‌ ಗುಲ್‌ಮೊಹರ್‌ ಮರ ಮೈಮೇಲೆ ಬಿದ್ದು ರಾಜ್ಯ ಗುಪ್ತಚರ ದಳದ  ಇನ್‌ಸ್ಪೆಕ್ಟರ್‌ ಧರಣೇಶ್‌ ಅವರ ತಂದೆ ಪುಟ್ಟಗಂಗಪ್ಪ (80) ಮೃತಪಟ್ಟಿದ್ದಾರೆ.

ಮೂಲತಃ ತುಮಕೂರಿನ ಪುಟ್ಟಗಂಗಪ್ಪ, ಮಗ–ಸೊಸೆಯ ಜತೆ ಸಿಎಆರ್ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದರು. ಸಂಜೆ 5.30ರ ಸುಮಾರಿಗೆ ಅವರು ರಸ್ತೆಯಲ್ಲಿ ವಾಯುವಿಹಾರ ಮಾಡುತ್ತಿದ್ದಾಗ ಈ  ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಬೃಹತ್‌ ಮರ ಬುಡಸಮೇತ ಮೈಮೇಲೆ ಬಿದ್ದಿದ್ದರಿಂದ ಪುಟ್ಟ ಗಂಗಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಲ್ಲದೇ, ಮರದ ಕೆಳಗೆ ನಿಲ್ಲಿಸಿದ್ದ ಎರಡು ಕಾರು, ಎರಡು ಬೈಕ್‌ಗಳು   ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.  ಎರಡು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದರು. ಎರಡು ತಾಸು ಕಾರ್ಯಾಚರಣೆ ನಡೆಸಿದ ನಂತರ ಸಿಬ್ಬಂದಿಗಳು ಮರದ ಕೊಂಬೆಗಳನ್ನು ತೆರವುಗೊಳಿಸಿದರು. ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Please enter your comment!
Please enter your name here