ಬೆಂಗಳೂರು ಮಹಾಧರ್ಮಕ್ಷೇತ್ರದ ಶಿಕ್ಷಣ ಮಂಡಳಿಯ ವತಿಯಿಂದ ಪ್ರತಿಭಾ ಪುರಸ್ಕಾರ

ಬೆಂಗಳೂರು ಮಹಾಧರ್ಮಕ್ಷೇತ್ರದ ಶಿಕ್ಷಣ ಮಂಡಳಿಯ ವತಿಯಿಂದ ಪ್ರತಿಭಾ ಪುರಸ್ಕಾರ

ಬೆಂಗಳೂರು : ಮಹಾಧರ್ಮಾಧ್ಯಕ್ಷರಾದ ಡಾ||ಬರ್ನಾಡ್ ಮೊರಾಸ್‍ರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಶಿಕ್ಷಣದ ಮೂಲಕ ಮಾತ್ರ ನಾವು ನಮ್ಮ ಸಮಾಜವನ್ನು ಆವರಿಸಿರುವ ಅಸಮಾನತೆ ಹಾಗೂ ಬಡತನವೆಂಬ ಕತ್ತಲನ್ನು ಹೋಗಲಾಡಿಸಬಹುದೆಂದು ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾದ ಡಾ||ಬರ್ನಾಡ್ ಮೊರಾಸ್‍ರವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

bangalore-diocese-prathiba-puraskar-00 bangalore-diocese-prathiba-puraskar-01 bangalore-diocese-prathiba-puraskar-02 bangalore-diocese-prathiba-puraskar-03 bangalore-diocese-prathiba-puraskar-04 bangalore-diocese-prathiba-puraskar-06 bangalore-diocese-prathiba-puraskar-08 bangalore-diocese-prathiba-puraskar-10 bangalore-diocese-prathiba-puraskar-11 bangalore-diocese-prathiba-puraskar-0012

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾ||ಬರ್ನಾಡ್ ಮೊರಾಸ್‍ರವರು ಶಿಕ್ಷಣ ಸರ್ವರನ್ನು ಸಮಾನತೆಯೆಡೆಗೆ ಕೊಂಡೊಯ್ಯುತ್ತದೆ ಹಾಗಾಗಿಯೇ ನಾವೆಲ್ಲರೂ ಶಿಕ್ಷಣವಂಚಿತರಿಗೆ ಶಿಕ್ಷಣ ನೀಡಲು ಮುಂದಾಗಬೇಕೆಂದು ಕರೆನೀಡಿದರು. ನೆರೆದಿದ್ದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಹಾಧರ್ಮಾಧ್ಯಕ್ಷರು ವೈದ್ಯಕೀಯ, ತಾಂತ್ರಿಕ ಹಾಗೂ ಇನ್ನಿತರೇ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿದ ಮೇಲೆ ಹಣಗಳಿಸುವುದರೊಂದರಲ್ಲೇ ನಿರತರಾಗದೆ ಬಡಬಗ್ಗರಿಗೆ ಎಟುಕುವಂತಹ ಸೇವೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು. ಪೋಪ್ ಫ್ರಾನ್ಸಿಸ್‍ರವರು ಕಲ್ಕಾತ್ತಾದ ಮದರ್ ತೆರೇಸಾರವರನ್ನು ಸಂತರ ಪದವಿಗೇರಿಸುವುದರ ಮೂಲಕ ಭಾರತಕ್ಕೆ ಒಂದು ಮಹತ್ತರ ಉಡುಗೊರೆಯನ್ನು ನೀಡಿದ್ದಾರೆ ಎಂದ ಡಾ||ಬರ್ನಾಡ್ ಮೊರಾಸ್‍ರವರು ಇದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

bangalore-diocese-prathiba-puraskar-14 bangalore-diocese-prathiba-puraskar-15 bangalore-diocese-prathiba-puraskar-16 bangalore-diocese-prathiba-puraskar-17 bangalore-diocese-prathiba-puraskar-18 bangalore-diocese-prathiba-puraskar-19 bangalore-diocese-prathiba-puraskar-20 bangalore-diocese-prathiba-puraskar-21 bangalore-diocese-prathiba-puraskar-22 bangalore-diocese-prathiba-puraskar-23

ಬೆಂಗಳೂರು ಮಹಾಧರ್ಮಕ್ಷೇತ್ರದ ಶಿಕ್ಷಣ ಮಂಡಳಿಯವತಿಯಿಂದ ಬೆಂಗಳೂರು ಸಂತ ಜರ್ಮನ್ ಪ್ರೌಢಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ 2008ರಲ್ಲಿ ಸುಮಾರು 40 ವಿದ್ಯಾರ್ಥಿಗಳನ್ನು ಪುರಸ್ಕರಿಸುವುದರ ಮೂಲಕ ಪ್ರಾರಂಭವಾದ ಈ ಕಾರ್ಯಕ್ರಮ ಇಂದಿಗೂ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಹತ್ತನೇ ತರಗತಿಯಿಂದ ಪದವಿಪೂರ್ವ ತರಗತಿಗಳವರೆಗೆ 80ಕ್ಕೂ ಹೆಚ್ಚು ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗುತ್ತದೆ. ಈ ಪ್ರಕಾರ 2008 ರಲ್ಲಿ 40 ವಿದ್ಯಾರ್ಥಿಗಳು 2009ರಲ್ಲಿ 90, 2010ರಲ್ಲಿ 120, 2011ರಲ್ಲಿ 175, 2012ರಲ್ಲಿ 214, 2013ರಲ್ಲಿ 350, 2014ರಲ್ಲಿ 400, 2015ರಲ್ಲಿ 507, ಹಾಗೂ 2016ರಲ್ಲಿ 450 ವಿದ್ಯಾರ್ಥಿಗಳನ್ನು ಪರುಸ್ಕರಿಸಲಾಗಿದೆ.

ಬೆಂಗಳೂರು ಮಹಾಧರ್ಮಾಧ್ಯಕ್ಷರಾಗಿ ಡಾ||ಬರ್ನಾಡ್ ಮೊರಾಸ್ 12 ವರ್ಷ ಪೂರೈಕೆ
ಇದೇ ಸಂಧರ್ಭದಲ್ಲಿ ಡಾ||ಬರ್ನಾಡ್ ಮೊರಾಸ್‍ರವರು ಬೆಂಗಳೂರಿನ ಮಹಾಧಮಾಧ್ಯಕ್ಷರಾಗಿ 12 ವರ್ಷಗಳನ್ನು ಪೂರೈಸಿದ ಸಂಧರ್ಭದಲ್ಲಿ ನೆರೆದಿದ್ದ ಸರ್ವರೂ ಮಹಾಧರ್ಮಾಧ್ಯಕ್ಷರನ್ನು ಅಭಿನಂದಿಸಿ ಹಾರೈಸಿದರು. ನಿಸ್ವಾರ್ಥವಾಗಿ ದಿನದ 14 ಗಂಟೆಗಳ ಕಾಲ ಭಕ್ತಜನರ ಸೇವೆಯನ್ನು ಮಾಡುತ್ತಿರುವ ಡಾ||ಬರ್ನಾಡ್ ಮೊರಾಸ್‍ರವರಿಗೆ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಭಾಗ್ಯವನ್ನು ನೀಡಲೆಂದು ಸರ್ವರೂ ಪ್ರಾರ್ಥಿಸಿದರು. ಶಿಕ್ಷಣ, ಆರೋಗ್ಯ, ಧಾರ್ಮಿಕ ಹಾಗೂ ಆರ್ಥಿಕ ಕ್ಷೇತ್ರಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿ ಬೆಂಗಳೂರು ಮಹಾಧರ್ಮಕ್ಷೇತ್ರದ ಚಿತ್ರಣವನ್ನೇ ಬದಲಿಸಿದ ಮಹಾಧರ್ಮಾಧ್ಯಕ್ಷ ಡಾ||ಬರ್ನಾಡ್ ಮೊರಾಸ್‍ರವರ ಕಾರ್ಯ ಶೈಲಿಯನ್ನು ಇದೇ ಸಂಧರ್ಭದಲ್ಲಿ ಸರ್ವರೂ ಹೃದಯಂತರಾಳದಿಂದ ಸ್ಮರಿಸಿ ಮಹಾಧರ್ಮಾಧ್ಯಕ್ಷರಿಗೆ ಶುಭ ಕೋರಿದರು. ಈ ಶುಭಗಳಿಗೆಯನ್ನು ಸ್ಮರಿಸಿ ಬಲಿಪೂಜೆಯನ್ನು ಅರ್ಪಿಸಿ ಭಗವಂತನಿಗೆ ಡಾ||ಬರ್ನಾಡ್ ಮೊರಾಸ್‍ರವರು ಕೃತಜ್ಞತೆಗಳನ್ನು ಸಲ್ಲಿಸಿದರು.

Leave a Reply

Please enter your comment!
Please enter your name here