ಬೆಂಗಳೂರು: ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾ. ವಿ ಎಸ್ ಮಳೀಮಠ್ ನಿಧನ

ಬೆಂಗಳೂರು: ರಾಜ್ಯ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ ಎಸ್ ಮಳೀಮಠ್(86) ಬುಧವಾರ ವಿಧಿವಶರಾಗಿದ್ದಾರೆ.

malimath-m

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನ್ಯಾ.ವಿಎಸ್.ಮಳೀಮಠ್ ಇಂದು ಬೆಳಿಗ್ಗೆ ನಿಧನರಾಗಿದ್ದು, ನಾಳೆ ಬೆಳಗ್ಗೆ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ ನೆರವೇರವೇರಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯರಾಗಿದ್ದರು. 1968ರಲ್ಲಿ ಅಡ್ವಕೇಟ್ ಜನರಲ್ ಆಗಿದ್ದ ಮಳೀಮಠ್, ತದ ನಂತರ ಕರ್ನಾಟಕ, ಕೇರಳ ಹೈಕೋರ್ಟ್ ನ ಸಿಜೆ ಹುದ್ದೆ ನಿರ್ವಹಿಸಿದ್ದರು.

Leave a Reply