ಬೆಳ್ತಂಗಡಿ :ಯುವಕನ ಮೇಲೆ ಆ್ಯಸಿಡ್‌ ದಾಳಿ: ಆರೋಪಿ ಪರಾರಿ

ಬೆಳ್ತಂಗಡಿ : ಲಾಯಿಲ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಯುವಕನೊಬ್ಬನಿಗೆ ಕ್ಷುಲ್ಲಕ ಕಾರಣಕ್ಕಾಗಿ ಆ್ಯಸಿಡ್‌ ಎರಚಿದ ಘಟನೆ ಶನಿವಾರ ನಡೆದಿದೆ. ಲಾಯಿಲ ನಿನ್ನಿಕಲ್ಲು ನಿವಾಸಿ ಅಶೋಕ ಆ್ಯಸಿಡ್‌ ದಾಳಿಗೊಳಗಾದ ಯುವಕ

ಎಂದು ಗುರುತಿಸಲಾಗಿದೆ. ಆ್ಯಸಿಡ್‌ ಎರಚಿದ ಆರೋಪಿ ಸ್ಥಳೀಯ ರಬ್ಬರ್‌ ತೋಟವೊಂದರಲ್ಲಿ ಟ್ಯಾಪಿಂಗ್‌ ಮಾಡುತ್ತಿದ್ದ ಶಾಜು ಎಂದು ದೂರಲಾಗಿದೆ. ಶಾಜು ಲಾಯಿಲ ಪರಿಸರದಲ್ಲಿ ಯುವತಿಯರನ್ನು ಚುಡಾಯಿಸುತ್ತಿದ್ದ ಎನ್ನಲಾಗಿದ್ದು, ದಾಳಿಗೊಳಗಾದ ಅಶೋಕರ ಸಂಬಂಧಿ ಯುವತಿಯೋರ್ವಳಿಗೆ ಆತ ಚುಡಾಯಿಸಿದ್ದ ಎಂದು ಆರೋಪಿಸಲಾಗಿದೆ. ಅದನ್ನು ಪ್ರಶ್ನಿಸಿದ್ದ ಅಶೋಕ್‌ ರ ಮೇಲೆ ಏಕಾಏಕಿ ಆ್ಯಸಿಡ್‌ ದಾಳಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯಿಂದ ಅಶೋಕ್‌ರ ಮುಖಕ್ಕೆ ಗಂಭೀರ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ್ಯಸಿಡ್‌ ಎರಚಿದ ಆರೋಪಿ ಮೊಬೈಲ್ ಮತ್ತು ದ್ವಿಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಬೆಳ್ತಂಗಡಿ ಪೊಲೀಸರು ಮೊಬೈಲ್ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

Leave a Reply