ಬೆಳ್ಳೆ- ಸಚಿವ ಸೊರಕೆರಿಂದ 4.72 ಕೋಟಿ ಮೊತ್ತದ ಕಾಮಗಾರಿಗೆ ಶಿಲಾನ್ಯಾಸ-ಉದ್ಘಾಟನೆ

ಉಡುಪಿ: ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 4.72 ಕೋಟಿ ರೂ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ/ಶಿಲಾನ್ಯಾಸ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಶುಕ್ರವಾರ ನೆರವೇರಿಸಿದರು.

image001belle-development-sorake-2016-603 image002belle-development-sorake-2016-603 image003belle-development-sorake-2016-603

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ, ಬೆಳ್ಳೆ ಕಟ್ಟಿಂಗೇರಿ- ಗೋಕುಲ್ ರಸ್ತೆ 2.18 ಕೋಟಿ ರೂ ಮೊತ್ತದ ರಸ್ತೆ ಮತ್ತು ಬೆಳ್ಳೆ ಎಡ್ಮೇರು ಕೋಚರಪ್ಪು ರಸ್ತೆ 1.98 ಕೋಟಿ ರೂ. ಮೊತ್ತದ ಕಾಮಗಾರಿ ಉದ್ಘಾಟನೆ, ಪಡುಬೆಳ್ಳೆ ಪಾಂಬೂರು ರಸ್ತೆ ಅಭಿವೃದ್ಧಿ ಕಾಮಗಾರಿ 25 ಲಕ್ಷ ರೂ., ತಿರ್ಲಪಲ್ಕೆ ಸರಸ್ವತಿ ಕಾಲನಿ ರಸ್ತೆ ಅಭಿವೃದ್ಧಿ 22 ಲಕ್ಷ ರೂ., ಬೆಳ್ಳೆ ತೋಕೋಳಿ ಭಜನಾ ಮಂದಿರದ ಮುಂದುವರೆದ ರಸ್ತೆ ಕಾಮಗಾರಿ 6 ಲಕ್ಷ ರೂ., ಬೆಳ್ಳೆ ಅಂಕುದ್ರು ರಸ್ತೆ ಕಾಮಗಾರಿ 3 ಲಕ್ಷ ರೂ ಕಾಮಗಾರಿಗೆ ಶಿಲಾನ್ಯಾಸ ಮತ್ತು 12 ಲಕ್ಷ ರೂ ಮೊತ್ತದ ಬೆಳ್ಳೆ ದೇವರಗುಡ್ಡ ಅಂಗನವಾಡಿ ಕಟ್ಟಡದ ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್, ಬೆಳ್ಳೆ ಗ್ರಾ.ಪಂ. ಅಧ್ಯಕ್ಷ ರಂಜನಿ ಹೆಗ್ಡೆ, ಉಪಾಧ್ಯಕ್ಷ ಹರೀಶ್ ಶೆಟ್ಟಿ, ಜಿ.ಪಂ. ಸದಸ್ಯ ವಿಲ್ಸನ್ ರೋಡ್ರಿಗಸ್, ತಾ.ಪಂ. ಸದಸ್ಯ ಸುಜಾತ ಸುವರ್ಣ, ಜಿ.ಪಂ. ಮಾಜಿ ಸದಸ್ಯೆ ಐಡಾ ಗಿಬ್ಬಾ ಡಿಸೋಜಾ, ಬೆಳ್ಳೆ ಗ್ರಾ.ಪಂ. ಸದಸ್ಯರಾದ ಶಿವಾಜಿ ಸುವರ್ಣ, ರತ್ನಾ, ಶಕುಂತಲಾ, ಗಿಬ್ಬಾ ಡಿಸೋಜಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply