ಬೆಸೆಂಟ್ ಮಹಿಳಾ ಕಾಲೇಜು ಮಾನವಿಕಾ ವಿಭಾಗದಿಂದ ಬಾಲ ಭಿಕ್ಷಾಟನಾ ವಿರೋಧಿ ಜಾಥಾ

ಬೆಸೆಂಟ್ ಮಹಿಳಾ ಕಾಲೇಜು ಮಾನವಿಕಾ ವಿಭಾಗದಿಂದ ಬಾಲ ಭಿಕ್ಷಾಟನಾ ವಿರೋಧಿಜಾಥಾ

ಮಂಗಳೂರು: ಮಂಗಳೂರಿನ ನಗರದ 12 ವೃತ್ತಗಳಲ್ಲಿ ಬೆಸೆಂಟ್ ಮಹಿಳಾ ಕಾಲೇಜಿನ ಸುಮಾರು 360 ವಿಧ್ರ್ಯಾರ್ಥಿಗಳು ಬಾಲ ಭಿಕ್ಷಾಟನೆ ನಿರ್ಮೂಲನಕ್ಕಾಗಿ ಜನಜಾಗೃತಿ ಸಲುವಾಗಿ  ಘೋಷಣಾ ಫಲಕವನ್ನು ಹಿಡಿದುಕೊಂಡು ಜಾಥಾ ನಡೆಸಿದರು. ಈ ಅಭಿಯಾನಕ್ಕೆ ಬೆಳಿಗ್ಗೆ 10.00 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಎದುರು ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶ್ರೀ ಹರಿನಾಥ್, ಪಾಲಿಕೆಯ ಮೇಯರ್, ಅವರು ಕಾರ್ಯಕ್ರಮದ ಬ್ಯಾನರ್‍ನ್ನು ಅನಾವರಣ ಗೊಳಿಸುವುದರ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

image005besant-beggar-free-campaign-20160929-005

ಅವರು ಮಾತನಾಡುತ್ತಾ, ಕೆಲವು ಅಜ್ಞಾನಿ ಪೋಷಕರು ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಂಡು ಅವರನ್ನು ಶಿಕ್ಷಣದ ಅವಕಾಶದಿಂದ ವಂಚಿತರನ್ನಾಗಿಸುವುದರ ಜೊತೆಗೆ ನಗರ ಜೀವನದ ಕರಾಳತೆಯನ್ನು ಹೆಚ್ಚಿಸುತ್ತಿದ್ದಾರೆ. ಭಿಕ್ಷೆ ಬೇಡಿದ ಮಕ್ಕಳು ಆತ್ಮವಿಶ್ವಾಸ ಹಾಗೂ ಆತ್ಮಗೌರವ ಇಲ್ಲದವರಾಗಿ ಬೆಳೆದು ದೇಶಕ್ಕೆ ಮುಳುವಾಗುತ್ತಾರೆ. ಆದ್ದರಿಂದ ಬಾಲ ಭಿಕ್ಷಾಟನೆಯನ್ನು ಮಟ್ಟ ಹಾಕುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ವಿಧಾನಸಭಾ ಸದಸ್ಯರಾದ ಶ್ರೀ ಐವನ್ ಡಿ’ಸೋಜಾ ಮಾತನಾಡುತ್ತಾ, ಇಂದಿನ ವಿದ್ಯಾರ್ಥಿಗಳಲ್ಲಿ ಸಮಾಜ ಸೇವಾ ಮನೋಭಾವವನ್ನು ಬೆಳೆಸಲು ಇಂತಹ ಸಾಮಾಜಿಕ ಕೆಲಸಗಳು ಅಗತ್ಯವಾಗಿವೆ ಎಂದರು.

image004besant-beggar-free-campaign-20160929-004 image001besant-beggar-free-campaign-20160929-001

ಡಾ. ಸಂಜೀವ ಪಾಟೀಲ್, ಡೆಪ್ಯುಟಿ ಪೋಲಿಸ್‍ ಕಮೀಶನರ್, ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಸಹಾಯಕ ಪೋಲಿಸ್ ಕಮೀಶನರ್‍ ಡಿ.ಕೆ. ವೆಲೆಂಟಿನ್‍ ಡಿಸೋಜಾ ಮಾತನಾಡುತ್ತಾ, ಜಾಥಾಕ್ಕೆ ಪೋಲಿಸ್ ವಿಭಾಗದಿಂದ ಅಗತ್ಯವಾದ ಎಲ್ಲಾ ಸಹಾಯವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಮಕ್ಕಳ ರಕ್ಷಣಾಅಧಿಕಾರಿ ಶ್ರೀ ಉಸ್ಮಾನ್, ಭಿಕ್ಷೆ ಬೇಡುವುದರ ಹಿಂದೆ ಒಂದು ದೊಡ್ಡ ಜಾಲವೇ ಇದೆ. ಹಾಗಾಗಿ ಭಿಕ್ಷೆ ನೀಡಿ ಭಿಕ್ಷುಕರನ್ನು ಪ್ರೋತ್ಸಾಹಿಸದಂತೆ ಜನಸಾಮಾನ್ಯರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬೆಸೆಂಟ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಕಾರ್ಯಪ್ರವೃತ್ತರಾದದ್ದು ಸಮಯೋಚಿತವಾಗಿದೆ ಎಂದರು.

ಬಾಲಭಿಕ್ಷುಕರ ಪುನರ್ವಸತಿಕೇಂದ್ರದ ಮೇಲ್ವಿಚಾರಕರಾದ ಶ್ರೀಮತಿ ಶಾರದ, ಭಿಕ್ಷಾಟನೆಯ ಪಿಡುಗು ಹಾಗೂ ಅದರ ಪರಿಣಾಮ, ಪುನರ್ವಸತಿ ಸೌಲಭ್ಯಗಳ ವಿಚಾರವಾಗಿ ತಿಳಿಸಿದರು. ಕಾಲೇಜಿನ ಸಂಚಾಲಕರಾಧ ಶ್ರೀ ಕೆ. ದೇವಾನಂದ ಪೈ, ಜಾಥಕ್ಕೆ ಕೈಜೋಡಿಸಿದ PADI ಹಾಗೂ ಎಲ್ಲಾ ಘಟಕಗಳನ್ನು ಅಭಿನಂದಿಸಿದರು.  ಡಾ. ಸತೀಶ್‍ಕುಮಾರ್ ಶೆಟ್ಟಿ, ಪ್ರಾಂಶುಪಾಲರು ಸ್ವಾಗತಿಸಿದರು.

besant-beggar-free1-20160929 besant-beggar-free-20160929image005besant-beggar-free-campaign-20160929-005image009besant-beggar-free-campaign-20160929-009

ಮಾನವಿಕಾ ವಿಭಾಗದಿಂದ ಈ ಕಾರ್ಯಕ್ರಮವನ್ನು ಪ್ರೊ. ಶೆರ್ಲಿರಾಣಿ, ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸಂಯೋಜಿಸಿದ್ದರು. ಉಪನ್ಯಾಸಕ ವರ್ಗದ ಸದಸ್ಯರು ವಿದ್ಯಾರ್ಥಿಗಳೊಡನೆ ಜಾಥಾದಲ್ಲಿ ಭಾಗವಹಿಸಿದ್ದರು.

Leave a Reply

Please enter your comment!
Please enter your name here