ಬೆಸೆಂಟ್ ಮಹಿಳಾ ಪದವಿ ಕಾಲೇಜಿನಲ್ಲಿ ಬಿಕ್ವೆಸ್ಟ್ 2015

ಮಂಗಳೂರು: ಬೆಸೆಂಟ್ ಮಹಿಳಾ ಪದವಿ ಕಾಲೇಜಿನಲ್ಲಿ ಬಿಕ್ವೆಸ್ಟ್ 2015 – ‘ವಿಷನ್ 2020 ಪರಿವರ್ತನ್ – ಹೊಸ ದಿಸೆಯತ್ತ’ ಅಂತರ್ ಕಾಲೇಜು ಮಟ್ಟದ ಪ್ರತಿಭಾ ಸ್ಪರ್ಧೆ ಕಲಾಂ ಅವರ 2020 ಪರಿವರ್ತನಾ ಆಶಯದಂತೆ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಬಿಕ್ವೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಶ್ರೀಮತಿ ರೇಣುಕಾ ಎನ್. ಬಂಗೇರ,  ಅಸಿಸ್ಟೆಂಟ್ ಜನರಲ್ ಮೇನೆಜರ್, ಕರ್ಣಾಟಕ ಬ್ಯಾಂಕ್ ಲಿಮಿಟೆಡ್, “ಯುವ ಜನಾಂಗ ಜಗತ್ತಿನ ಶಕ್ತಿಯನ್ನು ತಿಳಿಸುತ್ತದೆ, ಎಲ್ಲಾ ಸಂಸ್ಥೆಗಳಿಗೂ ಒಂದೊಂದು ಗುರಿ, ಧ್ಯೇಯವಿರುತ್ತದೆ. ಇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುವುದರ ಜೊತೆಗೆ ನಮ್ಮ ಶಕ್ತಿ ಮತ್ತು ನ್ಯೂನತೆ ಅರ್ಥವಾಗುತ್ತದೆ. ಗುಂಪು ಚಟುವಟಿಕೆಗೆ ಹೆಚ್ಚಿನ ಮಾನ್ಯತೆ ನೀಡಬೇಕೆಂಬ ಕರೆ ಕೊಟ್ಟರು”.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕುಡ್ಪಿ ಜಗದೀಶ್ ಶೆಣ್ಯೆ, ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಸ್ಥೆ, ಮಂಗಳೂರು, ಇವರು ಮಾತನಾಡುತ್ತಾ ಸ್ಪರ್ಧೆಗಳಲ್ಲಿ ‘ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮುವುದರ ಜೊತೆಗೆ ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವ ಹೆಚ್ಚುವಂತೆ ಪ್ರೇರೆಪಿಸುತ್ತದೆ’ ಎಂದರು.

ಜಿಲ್ಲೆಯ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅತ್ಯುತ್ತವi ವ್ಯವಸ್ಥಾಪಕ, ಹಣಕಾಸು ನಿರ್ವಹಣೆ, ಮಾನವ ಸಂಪನ್ಮೂಲ, ಮಾರ್ಕೆಟಿಂಗ್, ವ್ಯಂಗ ಚಿತ್ರ, ರೇಡಿಯೋ ಜಾಕಿ, ಆವೆ ಮಣ್ಣಿನ ಮಾದರಿ, ಕೊಲಾಜ್ ತಯಾರಿಕೆ, ಬ್ಯಾನರ್ ತಯಾರಿಕೆ, ಕಲಾಂ ಚಿತ್ರ ದರ್ಶನ (ಚಿತ್ರಕಲೆ) ಮುಂತಾದ 17 ವಿಷಯಗ¼ಲ್ಲಿÀ ಸ್ಪರ್ಧೆ ಆಯೋಜಿಸಲಾಗಿತ್ತು.

ವೇದಿಕೆಯಲ್ಲಿ ಕಾಲೇಜಿನ ಸಂಚಾಲಕರಾದ ದೇವಾನಂದ ಪೈ, ಪ್ರಾಂಶುಪಾಲೆ ಡಾ. ಸುಧಾ ಕೆ, ವಿದ್ಯಾರ್ಥಿ ಸಂಘದ ಸಂಚಾಲಕ ಡಾ.ಪರಶುರಾಮ ಜಿ.ಮಾಳಗೆ, ವಿದ್ಯಾರ್ಥಿನಿ ಸಂಘದ ನಾಯಕಿ ಪ್ರೀತಮ ಉಪಸ್ಥಿತರಿದ್ದರು.  ಪ್ರಾಂಶುಪಾಲೆ ಡಾ. ಸುಧಾ ಕೆ ಸ್ವಾಗತಿಸಿದರು. ವಿದ್ಯಾರ್ಥಿನಿ ಝೀಹಾನ ನಿರೂಪಿಸಿದರು. ಉಪನ್ಯಾಸಕಿ ರೂಪ ವಂದಿಸಿದರು.

Leave a Reply