ಬೈಕಿಗೆ ಕೆಎಸ್ಸಾರ್ಟಿಸಿ ಡಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು

ಬೈಕಿಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು

ಸುಳ್ಯ: ಸರಕಾರಿ ಬಸ್ಸು ಹಾಗೂ ಬೈಕ್ ನಡುವೆ ನಡೆದ ಅಫಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸುಳ್ಯ ಅಡ್ಕಾರು ಬಳಿ ನಡೆದಿದೆ. ಮೃತರನ್ನು ಅಡ್ಕಾರಿನ ಉದಯ ಎಂದು ಗುರುತಿಸಲಾಗಿದೆ.

ksrtc-bsu-scooty-accident-sullia

ಮೈಸೂರಿನಿಂದ ಕುಂದಾಪುರಕ್ಕೆ ಹೋಗುವ ಕೆಎಸ್ ಆರ್ ಟಿಸಿ ಬಸ್ಸು ಹಾಗೂ ಅಡ್ಕಾರಿನಿಂದ ಬೈತಡ್ಕಕ್ಕೆ ಹೋಗುತ್ತಿದ್ದ ಉದಯ್ ಅವರ ಬೈಕಿಗೆ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಉದಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ksrtc-bsu-scooty-accident-sullia00

ಉದಯ ಅವರು ಅಡ್ಕಾರಿನ ಆನಂದ ಟೈಲರ್ ಎಂಬವರ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನ ಜಾಲ್ಸೂರಿನ ಸಹಕಾರಿ ಸಂಘಕ್ಕೆ ತೆರಳಿ ಪಡಿತರ ಪಡೆದು ಸ್ನೇಹಿತರ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದಾಗ ವನವಾಸಿ ಹಾಸ್ಟೆಲ್ ಬಳಿ ತಿರುವಿನಲ್ಲಿ ಬಸ್ಸು ಡಿಕ್ಕಿ ಹೊಡೆದಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply